
ಕೈಗೆಟಕುವ ದರದ ಫೋನ್‌ಗಳಿಗಾಗಿ ಪ್ರಸಿದ್ಧವಾದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪನಿಯು ಇದೀಗ ದೀಪಾವಳಿ ಪ್ರಯುಕ್ತ 2 ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬಿಡುಗಡೆಯಾಗಿರುವ ಭಾರತ್ -5 ಇನ್ಫಿನಿಟಿ ಮತ್ತು ಭಾರತ್-4 ದೀಪಾವಳಿ ಎಡಿಶನ್ ಫೋನ್‌ಗಳು ಆ್ಯಂಡ್ರಾಯಿಡ್ ತಂತ್ರಜ್ಞಾನಾಧಾರಿತವಾಗಿದ್ದು ಓರಿಯೋ ಗೋ ತಂತ್ರಾಶದ ಮೇಲೆ ಕಾರ್ಯನಿರ್ವಹಿಸುತ್ತವೆ. ಆದುದರಿಂದ ಗೂಗಲ್‌ನ ಆ್ಯಪ್‌ಗಳು ಫೋನ್‌ನಲ್ಲಿ ಪ್ರಿಲೋಡೆಡ್ ಆಗಿರುತ್ತವೆ.
ಕೆಲ ತಿಂಗಳ ಹಿಂದೆ ಮೈಕ್ರೋಮ್ಯಾಕ್ಸ್ ಭಾರತ್ -5 ನ್ನು ಬಿಡುಗಡೆ ಮಾಡಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಭಾರತ್-5 ಇನ್ಫಿನಿಟಿ ಮತ್ತು ಭಾರತ್-4 ದೀಪಾವಳಿ ಎಡಿಶನ್ ಫೋನ್‌ಗಳು, 4G VoLTE ತಂತ್ರಜ್ಞಾನವನ್ನು ಒಳಗೊಂಡಿವೆ. ಈ ಫೋನ್‌ಗಳಲ್ಲಿ ಇರುವ ಇತರ ಫೀಚರ್ಸ್‌ಗಳೇನು? ಇಲ್ಲಿದೆ ಡೀಟೆಲ್ಸ್...
ಮೈಕ್ರೊಮ್ಯಾಕ್ಸ್ ಭಾರತ್-5 ಇನ್ಫಿನಿಟಿ:
ಭಾರತ್ -5 ಇನ್ಫಿನಿಟಿಯು 18:9 ಡಿಸ್ಪ್‌ಲೇ ಹೊಂದಿದ್ದು, 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 1GB RAM ಮತ್ತು 16GB ಸ್ಟೋರೆಜ್ ಹೊಂದಿರುವ ಈ ಫೋನ್‌ನ ಸಾಮರ್ಥ್ಯವನ್ನು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 32GB ವರೆಗೂ ವಿಸ್ತರಿಸಬಹುದಾಗಿದೆ. ಫೋನ್‌ನ ಎರಡೂ ಬದಿಗಳಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದರ ವಿಶೇಷತೆ. ಫೇಸ್ ಅನ್‌ಲಾಕ್ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ಹೊಂದಿರುವ ಭಾರತ್-5 ಇನ್ಫಿನಿಟಿಯ ಬೆಲೆ ಕೇವಲ ₹. 5,899 ಮಾತ್ರ.! ಈ ಫೋನ್ ಆಫ್‌ಲೈನ್‌ನಲ್ಲೂ ಲಭ್ಯವಿದ್ದೂ, ದೇಶದ ಎಲ್ಲಾ ರೀಟೆಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
ಮೈಕ್ರೋಮ್ಯಾಕ್ಸ್ ಭಾರತ್-4 ದೀಪಾವಳಿ ಎಡಿಶನ್:
ಭಾರತ್-4 ದೀಪಾವಳಿ ಎಡಿಶನ್ 5 ಇಂಚು ಡಿಸ್‌ಪ್ಲೇ ಹೊಂದಿದ್ದು, 2000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 1GB RAM ಮತ್ತು 8GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಈ ಫೋನ್‌ನ ಮೆಮೊರಿಯನ್ನು ಮೈಕ್ರೋಎಸ್‌ಡಿ ಕಾರ್ಡ್ ಬಳಸಿ 32GBವರೆಗೂ ವಿಸ್ತರಿಸಿಕೊಳ್ಳಬಹುದು. ಈ ಫೋನ್ ಕೂಡಾ ಹಿಂಬದಿಯಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದಲ್ಲಿ 2-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎಲ್‌ಇಡಿ ಫ್ಲಾಶ್ ಸೌಲಭ್ಯವನ್ನೂ ಕೂಡಾ ಈ ಮೊಬೈಲ್ ಹೊಂದಿದೆ. ಈ ಮೊಬೈಲ್ ಬೆಲೆ ಕೇವಲ ₹ 4,249 ಮಾತ್ರ!
ತನ್ನ ಗ್ರಾಹಕರಿಗೆ ಉತ್ತಮ ಮೊಬೈಲ್ ಸೇವೆ ಸಿಗುವಂತಾಗಲು ಮೈಕ್ರೋಮ್ಯಾಕ್ಸ್, ರಿಲಾಯನ್ಸ್ ಜಿಯೋ ಸಹಭಾಗಿತ್ವದೊಂದಿಗೆ ಒಳ್ಳೆಯ ಆಫರ್‌ಗಳನ್ನು ಒದಗಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.