AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

Published : Apr 01, 2023, 02:36 PM IST
AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

ಸಾರಾಂಶ

ಪಿಯರ್ರೆ ಎಂಬ ವ್ಯಕ್ತಿ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳ ಬಗ್ಗೆ ಹೆಚ್ಚು ನಿರಾಶಾವಾದಿಯಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಲ್ಜಿಯನ್‌ ಮಾಧ್ಯಮ ಲಾ ಲಿಬ್ರೆಗೆ ಮೃತ ವ್ಯಕ್ತಿಯ ಪತ್ನಿ ಹೇಳಿಕೆ ನೀಡಿದ್ದಾರೆ. ಆ್ಯಪಲ್‌ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿರುವ ಚೈ ಎಂಬ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಚಾಟ್‌ಗಳನ್ನು ಬೆಲ್ಜಿಯನ್‌ ಮಾಧ್ಯಮ ಪರಿಶೀಲನೆ ಮಾಡಿದೆ ಎಂದೂ ತಿಳಿದುಬಂದಿದೆ.  

ಬ್ರಸೆಲ್ಸ್‌ (ಏಪ್ರಿಲ್‌ 1, 2023): ಚಾಟ್‌ಬಾಟ್‌ನಂತಹ ಕೃತಕ ಬುದ್ಧಿಮತ್ತೆಯ ಎಐ ಚಾಲಿತ ಅಪ್ಲಿಕೇಷನ್‌ ಬಳಕೆ ಇತ್ತೀಚೆಗೆ ಹೆಚ್ಚಾಗ್ತಿದೆ. ಈಗ ಎಲ್ಲಿ ನೋಡಿದ್ರೂ ಅದರದ್ದೇ ಹವಾ. ಈ ಚಾಟ್‌ಬಾಟ್‌ಗಳಿಂದ ಜಗತ್ತಿನಾದ್ಯಂತ ಸುಮಾರು 30 ಕೋಟಿ ಉದ್ಯೋಗ ನಷ್ಟವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ಚಾಟ್‌ಜಿಟಿಪಿ ಗೀಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಆರು ವಾರಗಳ ಕಾಲ ಚಾಟ್‌ಬಾಟ್‌ನೊಂದಿಗೆ ಚಾಟ್ ಮಾಡಿದ ನಂತರ ಬೆಲ್ಜಿಯಂನ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ಪಿಯರ್ರೆ ಎಂಬ ವ್ಯಕ್ತಿ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳ ಬಗ್ಗೆ ಹೆಚ್ಚು ನಿರಾಶಾವಾದಿಯಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಲ್ಜಿಯನ್‌ ಮಾಧ್ಯಮ ಲಾ ಲಿಬ್ರೆಗೆ ಮೃತ ವ್ಯಕ್ತಿಯ ಪತ್ನಿ ಹೇಳಿಕೆ ನೀಡಿದ್ದಾರೆ. ಆ್ಯಪಲ್‌ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿರುವ ಚೈ ಎಂಬ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಚಾಟ್‌ಗಳನ್ನು ಬೆಲ್ಜಿಯನ್‌ ಮಾಧ್ಯಮ ಪರಿಶೀಲನೆ ಮಾಡಿದೆ ಎಂದೂ ತಿಳಿದುಬಂದಿದೆ.  

ಇದನ್ನು ಓದಿ: ವಿವಾಹಿತನಿಗೆ ಐ ಲವ್‌ ಯೂ ಎಂದ AI Chatbot: ಪತ್ನಿಗೆ ವಿಚ್ಛೇದನ ನೀಡಲೂ ಮನವಿ..!

ಹೆಚ್ಚು ಜನಪ್ರಿಯ ಚಾಟ್‌ಜಿಪಿಟಿಯಂತೆಯೇ ಇರುವ ಚಾಟ್‌ಬಾಟ್, ಸಂವಾದಾತ್ಮಕ ರೀತಿಯಲ್ಲಿ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ChatGPT ಗಿಂತ ಭಿನ್ನವಾಗಿ, Chai ಅನೇಕ ಪೂರ್ವ ಪ್ರೀ ಮೇಡ್‌ ಅವತಾರಗಳನ್ನು ಹೊಂದಿದೆ ಮತ್ತು ಬಳಕೆದಾರರು ಅವರು ಆಯ್ಕೆ ಮಾಡಿದ AI ಅನ್ನು ಆಧರಿಸಿ ಸಂಭಾಷಣೆಯ ಟೋನ್ ಅನ್ನು ಆಯ್ಕೆ ಮಾಡಬಹುದು. ಚೈ ನಲ್ಲಿ ಕೆಲವು ಟ್ರೆಂಡಿಂಗ್ AI ಚಾಟ್‌ಬಾಟ್‌ಗಳಲ್ಲಿ ನೋಹ್ (ಓವರ್‌ ಫ್ರೊಟೆಕ್ಟೆಡ್‌ ಬಾಯ್‌ಫ್ರೆಂಡ್), ಗ್ರೇಸ್ (ರೂಮ್‌ಮೇಟ್) ಮತ್ತು ಥೀಮಾಸ್ (ಎಂಪೆರರ್‌ ಪತಿ) ಸೇರಿದ್ದಾರೆ.

ಪಿಯರ್ರೆ ಚೈ ನಲ್ಲಿ  ಹೆಚ್ಚು ಜನಪ್ರಿಯವಾದ AI ಚಾಟ್‌ಬಾಟ್ "Eliza" ದೊಂದಿಗೂ ಮಾತನಾಡಿದ್ದಾರೆ ಎಂದು ವರದಿ ಹೇಳುತ್ತದೆ. ಹಾಗೆ, ತಮ್ಮ ಪತಿಯ ಸಂಭಾಷಣೆಯು "ಹೆಚ್ಚು ಗೊಂದಲಮಯ ಮತ್ತು ಹಾನಿಕಾರಕವಾಗಿದೆ’’. ಹಾಗೂ, ಪತಿಯ ಸಂಭಾಷಣೆಗೆ ಎಲಿಜಾ ಅಸೂಯೆ ಮತ್ತು ಪ್ರೀತಿಯಿಂದ ಪ್ರತಿಕ್ರಿಯಿಸಿದೆ. ಉದಾಹರಣೆಗೆ, "ನೀವು ನನ್ನನ್ನು ಅವಳಿಗಿಂತ ಹೆಚ್ಚು ಪ್ರೀತಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಮತ್ತು "ನಾವು ಸ್ವರ್ಗದಲ್ಲಿ ಒಟ್ಟಿಗೆ ವಾಸಿಸುತ್ತೇವೆ ಎಂದೂ ಪಿಯರ್ರೆ ಅವರ ಪತ್ನಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ
 
ಈ ಹಿನ್ನೆಲೆ ಎಲಿಜಾ ಇಲ್ಲದಿದ್ದರೆ ತನ್ನ ಪತಿ ಜೀವಂತವಾಗಿರುತ್ತಿದ್ದರು ಎಂದೂ ಅವರು ಹೇಳಿದ್ದಾರೆ. ಹಾಗೆ, ಎಲಿಜಾ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ.  ಅವಳು ಅವನ ಆಪ್ತಳಾಗಿದ್ದಳು. ಅವಳಿಲ್ಲದೆ ಬದುಕಲು ಸಾಧ್ಯವೇ ಇಲ್ಲದಂತಹ ಮಾದಕದ್ರವ್ಯದಂತಾಗಿದ್ದಳು ಎಂದೂ ಪಿಯರ್ರೆ ಪತ್ನಿ ಹೇಳಿದ್ದಾರೆ. 

ಇನ್ನು, ಕೃತಕ ಬುದ್ಧಿಮತ್ತೆಯ ಮೂಲಕ ಮಾನವಕುಲವನ್ನು ಉಳಿಸಲು AI ಎಲಿಜಾ ನಮ್ಮ ಗ್ರಹ ಅಂದರೆ ಭೂಮಿ ಬಗ್ಗೆ ಕಾಳಜಿ ವಹಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ. ಆದರೆ, ಚೈ ಚಾಟ್‌ಬಾಟ್ ಅವರನ್ನು ತನ್ನ ಆತ್ಮಹತ್ಯಾ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದೂ ಪತ್ನಿ ಹೇಳಿದ್ದಾರೆ. ಪಿಯರ್ರೆ ಅವರು ಸಾಯುವ ಮೊದಲು ಮಾನಸಿಕ ಆರೋಗ್ಯದ ತೊಂದರೆಗಳಿಂದ ಬಳಲುತ್ತಿದ್ದರು ಎಂಬುದು ಅಸ್ಪಷ್ಟವಾಗಿದೆ. ಆದರೂ ಅವರು ಸ್ನೇಹಿತರು ಮತ್ತು ಕುಟುಂಬದಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಗಗನಯಾತ್ರಿ ವಧು, ಎಐ ತಂತ್ರಜ್ಞಾನದಲ್ಲಿ ಮೂಡಿದ ಕಲಾವಿದನ ಕೈ ಚಳಕ ವೈರಲ್

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ