ಮಾರುಕಟ್ಟೆಗೆ ಬಿಡುಗಡೆಯಾಗಲು ಯಾವ್ಯಾವ ಕಂಪನಿ ಫೋನ್‌ಗಳು ಸಿದ್ಧವಾಗಿವೆ? ಎಂದು ತಿಳಿದುಕೊಂಡರೆ ಮೊಬೈಲ್ ಖರೀದಿ ಸುಲಭ. ಹಾಗಾದರೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಮೊಬೈಲ್‌ಗಳ ವಿವರ ಇಲ್ಲಿದೆ.
ಮೊಬೈಲ್ ಫೋನ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ಯುಎಸ್‌ಎ ಹೊಂದಿರುವ ಜನಸಂಖ್ಯೆಯಷ್ಟು ಮೊಬೈಲ್ ಬಳಕೆದಾರರನ್ನು ಭಾರತ ಹೊಂದಿದೆ. ಮಾರುಕಟ್ಟೆ ಅಂದಾಜಿನ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಸಂಖ್ಯೆ 2022ರಲ್ಲಿ 442 ಮಿಲಿಯನ್ ದಾಟಲಿದೆ. 2018ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬರೋಬ್ಬರಿ 30 ಮಿಲಿಯನ್ ಸ್ಮಾರ್ಟ್ ಫೋನ್‌ಗಳು ಆನ್‌ಲೈನ್ ಮಾರಾಟವಾಗಿದೆ.
ಮೊಬೈಲ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಯಾವ ಮೊಬೈಲ್ ಖರೀದಿಸಬೇಕೆಂಬ ಲೆಕ್ಕಾಚಾರ ಹಾಕುತ್ತಿದ್ದೀರಾ? ಮಾರುಕಟ್ಟೆಗೆ ಯಾವ ಹೊಸ ಮೊಬೈಲ್ ಬರಲಿದೆ ಎಂದು ಕಾಯುತ್ತಿದ್ದೀರಾ? ಹಾಗಾದ್ರೆ ಭಾರತದ ಮೊಬೈಲ್ ಮಾರುಕಟ್ಟೆಗೆ ಡಿಸೆಂಬರ್ ತಿಂಗಳಿನಲ್ಲಿ ಯಾವ ಮೊಬೈಲ್ ಬಿಡುಗಡೆಯಾಗಲಿದೆ ಎಂಬ ಡೀಟೆಲ್ಸ್ ಇಲ್ಲಿದೆ...
Oppo R17 Pro:
Oppo ಕೊನೆಗೂ ಭಾರತದಲ್ಲಿ R ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಡಿ.04ರಂದು Oppo R17 Pro ಮುಂಬೈಯಲ್ಲಿ ಲೋಕಾರ್ಪಣೆಯಾಗಲಿದೆ. ಸೂಪರ್ ಫಾಸ್ಟ್ ಚಾರ್ಜಿಂಗ್, ತ್ರಿವಳಿ ಹಿಂಬದಿ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್, 8GB RAM, 128GB ಸ್ಟೋರೆಜ್ Oppo R17 Proನ ಪ್ರಮುಖ ಫೀಚರ್‌ಗಳಾಗಿವೆ.
Samsung Galaxy A8s
2018ರಲ್ಲಿ ನಾಚ್ ಡಿಸ್ಪ್ಲೇಯೇ ಮೊಬೈಲ್ ವಿನ್ಯಾಸದ ಪ್ರಮುಖ ಆಕರ್ಷಣೆಯಾಗಿತ್ತು. ಮೊಬೈಲ್ ಲೋಕದ ದಿಗ್ಗಜ ಸ್ಯಾಮ್ಸಂಗ್ ತನ್ನ ಮಹಾತ್ವಾಕಾಂಕ್ಷೆಯ Galaxy A8sನ್ನು ಮಾರುಕಟ್ಟೆಗೆ ಬಿಡಲು ಸಿದ್ಧವಾಗಿದೆ. ಆದರೆ ಇದು Infinity-O ಡಿಸ್ಪ್ಲೇ ಹೊಂದಲಿರುವ ಪ್ರಪ್ರಥಮ ಸ್ಮಾರ್ಟ್ ಪೋನ್ ಆಗಿರಲಿದ್ದು, ಸೆಲ್ಫೀ ಕ್ಯಾಮೆರಾಕ್ಕಾಗಿ ಪರದೆ ಮೇಲೆ ರಂಧ್ರವಿರಲಿದೆ. ಈ ಹೊಸ ವಿನ್ಯಾಸವೇ 2019ರಲ್ಲಿ ಟ್ರೆಂಡ್ ಸೆಟ್ಟರ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಈ ಫೋನ್ ಮಾರುಕಟ್ಟೆಗೆ ಬರಲಿದೆ, ಆದರೆ ದಿನಾಂಕವಿನ್ನೂ ನಿಗದಿಯಾಗಿಲ್ಲ.
Huawei Nova 4
ಒಂದು ಕಡೆ ಸ್ಯಾಮ್ಸಂಗ್ ತನ್ನ Galaxy A8s ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದರೆ ಅದರ ಪ್ರತಿಸ್ಪರ್ಧಿ Huawei ತನ್ನ Nova 4 ಬಿಡುಗಡೆಗೆ ಸಿದ್ಧವಾಗಿದೆ. ಚೀನಾದಲ್ಲಿ ಡಿ.12ರಂದು ಈ ಫೋನ್ ಬಿಡುಗಡೆಯಾಗಲಿದೆ. ಇನ್-ಸ್ಕ್ರೀನ್ ಕ್ಯಾಮೆರಾ ಇರುವ ಈ ಫೋನ್ ಸ್ಯಾಮ್ಸಂಗ್ Galaxy A8s ರಿತಿಯಲ್ಲಿ ಡಿಸ್ಪ್ಲೇ ತಂತ್ರಜ್ಞಾನ ಹೊಂದಿದೆ.
OnePlus 6T McLaren ಎಡಿಷನ್
ಈ ವರ್ಷ OnePlus 6 ಮತ್ತು OnePlus 6Tಯನ್ನು ಬಿಡುಗಡೆಮಾಡಿರುವ OnePlus ಕಂಪನಿ ಇದೀಗ OnePlus 6Tಯ McLaren ಎಡಿಷನ್ ಬಿಡುಗಡೆ ಮಾಡುತ್ತಿದೆ. ಲಂಡನ್‌ನಲ್ಲಿ ಡಿ.11ಕ್ಕೆ ಇದು ಬಿಡುಗಡೆಯಾದರೆ, ಭಾರತದಲ್ಲಿ ಡಿ.12ರಂದು ಲೋಕಾರ್ಪಣೆಯಾಗಲಿದೆ. McLaren ಎಡಿಷನ್‌ನಲ್ಲಿ OnePlus 6T, 10GB RAM ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
Nokia 8.1
Nokia X7ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಬಳಿಕ HMD Global ಇದೀಗ ಮಧ್ಯಮ ಶ್ರೇಣಿಯ Nokia 8.1 ಫೋನನ್ನು ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಮಾಡಲು ಹೊರಟಿದೆ. ಸುಂದರವಾದ ವಿನ್ಯಾಸ, 6.18 ಇಂಚ್ ಫುಲ್ HD ಡಿಸ್ಪ್ಲೇ, ಹಿಂಬದಿ ಡ್ಯುಯೆಲ್ ಕ್ಯಾಮೆರಾ ಹಾಗೂ 3500mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಆ್ಯಂಡ್ರಾಯಿಡ್ ಫೋನ್ ಡಿ.06ಕ್ಕೆ ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ.
Meizu M16
18 ತಿಂಗಳ ವಿರಾಮದ ಬಳಿಕ Meizu ಮತ್ತೊಮ್ಮೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತಿದೆ. 3 ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಲಿರುವ ಚೀನಾದ ಜನಪ್ರಿಯ ಕಂಪನಿ Meizu, ಡಿಸೆಂಬರ್‌ನಲ್ಲಿ Meizu M16ನ್ನು ಭಾರತದಲ್ಲಿ ಲೋಕಾರ್ಪಣೆ ಮಾಡಲಿದೆ. ಡಿ. 05ರಂದು ಬಿಡುಗಡೆಯಾಗಲಿರುವ Meizu M16 OnePlus 6Tಗೆ ಸ್ಪರ್ಧೆಯೊಡ್ಡಲಿದೆ. ಶ್ಯೋಮಿಗೆ ಪ್ರತಿಸ್ಪರ್ಧಿಯಾಗ ಬಹುದಾದಂತಹ Meizu M6T ಹಾಗೂ Meizu 16X ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಆ ಬಳಿಕ ಬಿಡುಗಡೆ ಮಾಡಲಿದೆ.