
ವಾಷಿಂಗ್ಟನ್ : ಇಂದಿನ ಯುವಜನತೆ ಫೇಸ್’ಬುಕ್’ನಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಕಾರಣ ಅವನರನ್ನು ಸೆಳೆಯುವ ಇನ್ನೊಂದು ಹೊಸ ಸಾಮಾಜಿಕ ಜಾಲತಾಣವೊಂದು ಹುಟ್ಟಿಕೊಂಡಿದೆ. ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್ ಬುಕ್ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್ ಬುಕ್ ಲಾಗ್ ಔಟ್ ಮಾಡುತ್ತಿದ್ದಾರೆ.
ಅದಕ್ಕೆ ಕಾರಣವೇನು ಗೊತ್ತಾ. ಅವರನ್ನು ಈಗ ಹೊಸ ಸಾಮಾಜಿಕ ಜಾಲತಾಣ ಆಕರ್ಷಿಸುತ್ತಿದೆ. ಅದೇನು ಗೊತ್ತಾ ಅದೇ ಸ್ನ್ಯಾಪ್ ಚಾಟ್, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆಯನ್ನು ಸ್ನಾಪ್ ಚಾಟ್ ಸಳೆಯುತ್ತಿದೆ. ಫೇಸ್ ಬುಕ್’ನಿಂದ ಸ್ನಾಪ್ ಚಾಟ್ ಯುವಜನತೆಯನ್ನು ದೂರ ಸರಿಸುತ್ತಿದೆ.
ಅಮೆರಿಕದಲ್ಲಿ ಫೇಸ್ ಬುಕ್ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಆದರೆ ಸಂಶೋಧನೆಗಳು ಹೇಳುವ ಪ್ರಕಾರ ವಯಸ್ಸಾದವರು ಮಾತ್ರವೇ ಫೇಸ್’ಬುಕ್ ಹೆಚ್ಚು ಬಳಸುತ್ತಿದ್ದಾರಂತೆ. ಅಲ್ಲದೇ ಯುವಜನತೆಯನ್ನು ಸೆಳೆಯಲು ಫೇಸ್ ಬುಕ್ ಇತ್ತೀಚಿನ ದಿನಗಳಲ್ಲಿ ಹಿಂದೆ ಬಿದ್ದಿದೆಯಂತೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.