ಮಾನವನ ದೇಹದಿಂದಲೇ ವಿದ್ಯುತ್ ಉತ್ಪಾದನೆ

By Suvarna Web DeskFirst Published Feb 12, 2018, 12:24 PM IST
Highlights

ಫೋನ್ ಅಥವಾ ಎಲೆಕ್ಟ್ರಾನಿಕ್  ವಸ್ತುಗಳು ಚಾರ್ಜ್ ಮಾಡಲು ಅನೇಕ ಸಂದರ್ಭದಲ್ಲಿ ಎಲ್ಲರೂ ಸಮಸ್ಯೆ ಎದುರಿಸುತ್ತಾರೆ. ? ಎಲ್ಲಾದರೂ ಹೋದಾಗ ನಿಮ್ಮ ಫೋನ್ ಫುಲ್ ಡೆಡ್ ಆದಾಗ ತಲೆಯೇ ಓಡದಂತಾಗಿ ತಲೆ ನೋವು ಎದುರಿಸೋದು ಸಾಮಾನ್ಯವಾಗಿರುತ್ತದೆ. ಆದರೆ ಇನ್ನುಮುಂದೆ ಈ ಸಮಸ್ಯೆಗಳನ್ನು ಎದುರಿಸಬೇಕಾದ ಅಗತ್ಯವಿಲ್ಲ

ವಾಷಿಂಗ್ಟನ್ : ಫೋನ್ ಅಥವಾ ಎಲೆಕ್ಟ್ರಾನಿಕ್  ವಸ್ತುಗಳು ಚಾರ್ಜ್ ಮಾಡಲು ಅನೇಕ ಸಂದರ್ಭದಲ್ಲಿ ಎಲ್ಲರೂ ಸಮಸ್ಯೆ ಎದುರಿಸುತ್ತಾರೆ. ? ಎಲ್ಲಾದರೂ ಹೋದಾಗ ನಿಮ್ಮ ಫೋನ್ ಫುಲ್ ಡೆಡ್ ಆದಾಗ ತಲೆಯೇ ಓಡದಂತಾಗಿ ತಲೆ ನೋವು ಎದುರಿಸೋದು ಸಾಮಾನ್ಯವಾಗಿರುತ್ತದೆ. ಆದರೆ ಇನ್ನುಮುಂದೆ ಈ ಸಮಸ್ಯೆಗಳನ್ನು ಎದುರಿಸಬೇಕಾದ ಅಗತ್ಯವಿಲ್ಲ.

ವಿಜ್ಞಾನಿಗಳು ಟ್ಯಾಬ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಟ್ಯಾಬ್ ಮಾನವನ ದೇಹದ ಚಲನೆಯಿಂದಲೇ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಇದರಿಂದ ನೀವು ನಿಮ್ಮ ಸಾಧನಗಳನ್ನು ಚಾರ್ಚ್ ಮಾಡಿಕೊಳ್ಳಬಹುದಾಗಿದೆ.

ಇದರಿಂದ ಪವರ್ ಬ್ಯಾಂಕ್ ತೆಗೆದುಕೊಂಡು ಹೋಗಬೇಕಾದ ಅಗತ್ಯವಿರುವುದಿಲ್ಲ. ಈ ರೀತಿಯಾದ ಸಾಧನದ ಬಗ್ಗೆ ಅಮೆರಿಕದ ಬೊಫೆಲೋ ವಿವಿಯ ಪ್ರಧ್ಯಾಪಕರು ಹೇಳುವುದೇನೆಂದರೆ ನಮ್ಮ ದೇಹವೇ ಇನ್ನು ಮುಂದೆ ಶಕ್ತಿಯ ಮೂಲವಾಗಲಿದೆ. ನಮ್ಮ ದೇಹದಲ್ಲಿ ಸಾಕಷ್ಟು ಶಕ್ತಿ ಉತ್ಪಾದನೆಯಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಇದು ಹೆಚ್ಚಿನ ಪ್ರಮಾಣದಲ್ಲಿ  ವೆಚ್ಚವನ್ನೂ ಕೂಡ ಬೇಡುವುದಿಲ್ಲ ಎಂದಿದ್ದಾರೆ.

click me!