1 ಕೋಟಿ ಬಳಕೆದಾರರ ತಲುಪಿದ ಬೆಂಗಳೂರು ಮೂಲದ ಕೂ ಆ್ಯಪ್‌

By Kannadaprabha News  |  First Published Aug 27, 2021, 6:40 AM IST
  • ಟ್ವೀಟರ್‌ಗೆ ಪರಾರ‍ಯಯವಾಗಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’
  • ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’ 1 ಕೋಟಿ ಬಳಕೆದಾರರನ್ನು ತಲುಪಿದೆ. 
  • ಮುಂದಿನ ಒಂದು ವರ್ಷದಲ್ಲಿ 10 ಕೋಟಿ ಬಳಕೆದಾರರನ್ನು ತಲುಪುವ ಯೋಜನೆ 

ನವದೆಹಲಿ (ಆ.27): ಟ್ವೀಟರ್‌ಗೆ ಪರಾರ‍ಯಯವಾಗಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ದೇಸೀ ಆ್ಯಪ್‌ ‘ಕೂ’ 1 ಕೋಟಿ ಬಳಕೆದಾರರನ್ನು ತಲುಪಿದೆ. 

ಮುಂದಿನ ಒಂದು ವರ್ಷದಲ್ಲಿ 10 ಕೋಟಿ ಬಳಕೆದಾರರನ್ನು ತಲುಪುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಆ್ಯಪ್‌ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ತಿಳಿಸಿದ್ದಾರೆ. ಇದೇ ವೇಳೆ ‘ಇಂಟರ್ನೆಟ್‌ ಬಳಕೆದಾರರಲ್ಲಿ ಶೇ.2ಕ್ಕಿಂತ ಕಡಿಮೆ ಜನರು ಮಾತ್ರ ಕೂ ಆ್ಯಪ್‌ ಬಳಸುತ್ತಿದ್ದಾರೆ. 

Tap to resize

Latest Videos

undefined

ಕೇಂದ್ರ v/s ಟ್ವೀಟರ್‌: ಕೂ ಆ್ಯಪ್‌ ಬಳಕೆದಾರರ ಸಂಖ್ಯೆ 40 ಲಕ್ಷಕ್ಕೆ ಏರಿಕೆ

ಇನ್ನುಳಿದ ಶೇ.98.ರಷ್ಟುಜನರನ್ನು ಮಾತ್ರ ತಲುಪುವುದು ನಮ್ಮ ಗುರಿ’ ಎಂದು ತಿಳಿಸಿದ್ದಾರೆ. ಅಮೆರಿಕ ಮೂಲದ ಟ್ವೀಟರ್‌ಗೆ ಸಡ್ಡು ಹೊಡೆಯಲೆಂದೇ ಅಭಿವೃದ್ಧಿಪಡಿಸಲಾದ ಕೂ 15-16 ತಿಂಗಳಲ್ಲಿ 1 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಮೈಲಿಗಲ್ಲನ್ನು ಸ್ಥಾಪಿಸಿದೆ.

 Koo ನಲ್ಲಿ ಸುವರ್ಣ ನ್ಯೂಸ್ ಅನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

 ಕಳೆದ ವರ್ಷ ಫೆಬ್ರವರಿಯಿಂದ ಇಲ್ಲಿಯವರೆಗೆ ಕೂ ಆ್ಯಪ್‌ 85 ಲಕ್ಷ ಡೌನ್‌ಲೋಡ್‌ಗಳನ್ನು ಕಂಡಿದೆ.  

click me!