ಹೊಚ್ಚ ಹೊಸ HP Spectre x360 ನೋಟ್‌ಬುಕ್ ಬಿಡುಗಡೆ!

By Suvarna News  |  First Published Aug 25, 2021, 9:42 PM IST
  • ನೋಟ್‌ಬುಕ್ ಸರಣಿಯನ್ನು ಬಲಿಷ್ಠಗೊಳಿಸಲು ಹೊಸ ಲ್ಯಾಪ್‌ಟಾಪ್
  • ಹೊಸ HP Spectre x360 14 ಬಿಡುಗಡೆ
  • ಅಡಾಪ್ಟಿವ್ ಇಂಟಲಿಜೆನ್ಸ್  ವಿಶೇಷತೆ ಲ್ಯಾಪ್‌ಟಾಪ್ 

ನವದೆಹಲಿ(ಆ.25)  ನೋಟ್‌ಬುಕ್ ಸರಣಿಯನ್ನು ಬಲಿಷ್ಠಗೊಳಿಸಲು, HP  ಇಂದು ಹೊಚ್ಚ ಹೊಸ HP Spectre x360 14, ಲ್ಯಾಪ್‌ಟಾಪ್ ಅನಾವರಣಗೊಳಿಸಿದೆ. ಅದು ಅಡಾಪ್ಟಿವ್ ಹಾಗೂ ಸ್ಮಾರ್ಟ್ ಆಗಿದ್ದು, ಇಂಟಲಿಜೆಂಟ್ ಫೀಚರ್ಸ್ ಒಳಗೊಂಡಿದೆ. ಇದು 3:2 ವಿಂಡೋಸ್ ಕನ್ವರ್ಟಿಬಲ್ ಸೌಲಭ್ಯ ಹಾಗೂ 90.33% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಅಡಾಪ್ಟಿವ್ ಇಂಟಲಿಜೆನ್ಸ್ ಇದರ ವಿಶೇಷವಾಗಿದೆ. HP Spectre ಭಾರತದ ಅತ್ಯಂತ ಜನಪ್ರಿಯ ಪ್ರೀಮಿಯಂ ನೋಟ್‌ಬುಕ್‌ಗಳಲ್ಲಿ ಒಂದಾಗಿದೆ ಮತ್ತು ಅದರ ಸೊಗಸಾದ ವಿನ್ಯಾಸ ಮತ್ತು ಕಾರ್ಯಕ್ಷಮತೆಗಾಗಿ ಹಲವಾರು ಉದ್ಯಮ ಪ್ರಶಂಸೆಗಳನ್ನು ಗೆದ್ದಿದೆ.

ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ

Tap to resize

Latest Videos

ಇಂದಿನ ದಿನಗಳಲ್ಲಿ ಪಿಸಿಗಳು ಕೆಲಸ, ಕಲಿಕೆ ಮತ್ತು ಮನರಂಜನೆಯ ಅಗತ್ಯ ಅಂಶವಾಗಿ ಮಾರ್ಪಟ್ಟಿವೆ. HP Spectre x360 14 ಬಳಕೆದಾರರ ಹಲವು ಬಗೆಯ ಅಗತ್ಯಗಳಿಗೆ ಹೊಂದಿಕೊಂಡು ಅದ್ಭುತವಾಗಿ ಕೆಲಸ ಮಾಡುತ್ತದೆ. ಕನ್ವರ್ಟಿಬಲ್ 2-ಇನ್ -1 ಲ್ಯಾಪ್‌ಟಾಪ್ 13.5-ಇಂಚಿನ ಫಾರ್ಮ್ ಫ್ಯಾಕ್ಟರ್‌ನ ಚಲನಶೀಲತೆಯೊಂದಿಗೆ ಮೊದಲ ಬಾರಿಗೆ 15-ಇಂಚಿನ ಅನುಕೂಲ ನೀಡುತ್ತಿದೆ. ಹೆಚ್ಚಿನ ಉತ್ಪಾದಕತೆ ಮತ್ತು ದಕ್ಷತೆಗಾಗಿ ಬ್ರೌಸಿಂಗ್, ಓದುವಿಕೆ ಮತ್ತು ಸಂಪಾದನೆಗಾಗಿ ಪರಿಪೂರ್ಣವಾಗಿರುವ, ವೀವಿಂಗ್ ಸ್ಪೇಸ್ ಲಂಬವಾಗಿ 20% ಹೆಚ್ಚು ಇರುವಂತೆ ಪರಿವರ್ತಿಸುತ್ತದೆ.

ವೈವಿಧ್ಯಮಯ ಮೂರು ಬಣ್ಣಗಳಲ್ಲಿ - ನೈಟ್‌ಫಾಲ್ ಬ್ಲ್ಯಾಕ್ ವಿತ್ ಕಾಪರ್ ಲ್ಯೂಕ್ಸ್ ಆಕ್ಸೆಂಟ್ಸ್, ಹಾಗೂ ಪಾಸಿಡನ್ ಬ್ಲ್ಯೂ ವಿತ್ ಪೇಲ್ ಬ್ರಾಸ್ ಆಕ್ಸೆಂಟ್‌ನಲ್ಲಿ ಲಭ್ಯವಿರುವ Spectre x360 ಹೊಸ AI- ಆಧಾರಿತ ಆಡಿಯೋ ಸಾಮರ್ಥ್ಯಗಳು ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯಂತಹ ಇಂಟಲಿಜೆಂಟ್ ವೈಶಿಷ್ಟ್ಯಗಳಿಂದ ಸಕ್ರಿಯಗೊಳಿಸಿದ ಪ್ರಗತಿಶೀಲ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೊಚ್ಚ ಹೊಸ HP Spectre ಲ್ಯಾಪ್‌ಟಾಪ್ ತೆಳುವಾಗಿದೆ ಹಾಗೂ ಹಗುರವಾಗಿದೆ, ಸೊಗಸಾಗಿದೆ ಮತ್ತು ಸುಂದರವಾಗಿದೆ - ತಿರುಗಿ ನೋಡುವಂತೆ ಮಾಡಬಲ್ಲ ಜೆಮ್-ಕಟ್ ಹಾಗೂ ಡ್ಯೂಯಲ್ ಚೇಂಬರ್ ವಿನ್ಯಾಸವನ್ನು ಪ್ರಿಸಿಶನ್ ಅಲ್ಯೂಮೀನಿಯಂ CNC ಯಂತ್ರೋಪಕರಣದಿಂದ ಸಾಧಿಸಲಾಗಿದೆ. ಈ ಲ್ಯಾಪ್‌ಟಾಪ್ ಕೇವಲ 1.36 ಕೆ.ಜಿ. ಭಾರವಿದ್ದು, 17 ಗಂಟೆಗಳ ವರೆಗಿನ ಬ್ಯಾಟರಿ ಬಾಳಿಕೆ ನೀಡುತ್ತದೆ. ಬೆರಗುಗೊಳಿಸುವ, ಬಹುಮುಖ ಮತ್ತು ಅಲ್ಟ್ರಾ-ಮೊಬೈಲ್ ವಿನ್ಯಾಸವನ್ನು ಬಯಸುವ ಬಳಕೆದಾರರಿಗೆ ಸೂಕ್ತವಾದ ಸಂಗಾತಿಯಾಗಿದ್ದು, ವೈಯಕ್ತಿಕ ಶೈಲಿಗೆ ಪೂರಕವಾಗಿದೆ.
 

click me!