‘ಆಧುನಿಕ ವಿಜ್ಞಾನಕ್ಕೆ ಭಾರತದ ಸೂರ್ಯ ಸಿದ್ಧಾಂತವೇ ತಳಹದಿ’| ಕೇರಳ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಅಭಿಮತ| ಯೂರೋಪಿನ ‘ಬಾಹ್ಯಾಕಾಶ ಸಂಸ್ಥೆಗಳಿಗೆ ಸೂರ್ಯ ಸಿದ್ಧಾಂತ ಗ್ರಂಥವೇ ಪ್ರಮುಖ ಆಕರ ಗ್ರಂಥ’| ಸೂರ್ಯ ಸಿದ್ಧಾಂತ ಗ್ರಂಥದ ಇತಿಹಾಸ ಹೇಳಿದ ಆರೀಫ್ ಮೊಹ್ಮದ್ ಖಾನ್| ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಶ್ರೀ ಚಿತಿರಾ ತಿರುನಾಳ್ ಪ್ರಶಸ್ತಿ ಪ್ರದಾನ|
ತಿರುವನಂತಪುರಂ(ಜ.25): ಬ್ರಹ್ಮಾಂಡ ಸೀಳಿ ಮುನ್ನುಗ್ಗುತ್ತಿರುವ ಅಮೆರಿಕದ NASA, ರಷ್ಯಾದ ROSCOSMOS ಯೂರೋಪಿಯನ್ ಸ್ಪೇಸ್ ಏಜೆನ್ಸಿ, ಚೀನಾದ CNSA ಹಾಗೂ ಭಾರತದ ISRO ಸೇರಿದಂತೆ ಇನ್ನೂ ಹಲವು ಸಂಸ್ಥೆಗಳು ವಿಶ್ವದ ರಹಸ್ಯವನ್ನು ಅರಿಯುವ ಪ್ರಯತ್ನ ನಡೆಸುತ್ತಿವೆ.
ಕೇರಳ ರಾಜ್ಯಪಾಲ ಆರೀಫ್ ಮೊಹ್ಮದ್ ಈ ಎಲ್ಲ ಬಾಹ್ಯಾಕಾಶ ಸಂಸ್ಥೆಗಳ ಯಶಸ್ಸಿಗೆ ಪ್ರಾಚೀನ ಭಾರತೀಯ ಗ್ರಂಥ ‘ಸೂರ್ಯ ಸಿದ್ಧಾಂತ’ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
undefined
ನಾಸಾದ ಹೊಸ ಗಗನಯಾತ್ರಿಗಳ ತಂಡ ಸಿದ್ಧ: ಚಂದ್ರ, ಮಂಗಳ ಗೆಲ್ಲುವುದು ಶತಸಿದ್ಧ!
ಹೌದು, ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹ್ಮದ್ ಖಾನ್ ಹೇಳಿದ್ದಾರೆ.
ಸಾಂಪ್ರದಾಯಿಕ ಭಾರತೀಯ ವಿಜ್ಞಾನವನ್ನು ಪುರಾಣದ ರೂಪದಲ್ಲಿ ದೇಶವಾಸಿಗಳಿಗೆ ತಿಳಿಸಲಾಗಿದೆ. ಆದರೆ ಅದು ಕೇವಲ ಪುರಾಣವಾಗಿರದೇ ಕರಾರುವಕ್ಕಾದ ವಿಜ್ಞಾನ ಎಂದು ಆರೀಫ್ ಮೊಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ನಾಸಾ ಬಾಹ್ಯಾಕಾಶ ಯಾನಿಗಳ ಪಟ್ಟಿಗೆ ಮತ್ತೋರ್ವ ಭಾರತೀಯ, ರಾಜಾಗೆ ಚಾನ್ಸ್!
ತಿರುವನಂತಪುರಂನಲ್ಲಿ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಶ್ರೀ ಚಿತಿರಾ ತಿರುನಾಳ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಆರೀಫ್ ಮೊಹ್ಮದ್, ನಮ್ಮ ಪುಸ್ತಕಗಳಲ್ಲಿನ ವೈಜ್ಞಾನಿಕ ಉಲ್ಲೇಖಗಳು ಪುರಾಣ ಕಥೆಗಳಾಗಿ ಮಾರ್ಪಡಾಗಿರುವುದು ವಿಷಾದನೀಯ ಎಂದು ಹೇಳಿದರು.
ಸೂರ್ಯ ಸಿದ್ಧಾಂತ ಗ್ರಂಥವನ್ನು ಬಾಗ್ದಾದ್‌ನ ಅಲ್-ಮನ್ಸೂರ್ ನ್ಯಾಯಾಲಯದ ಮುಂದೆ ಇಡಲಾಗಿತ್ತು. ಅಲ್ಲಿ ಎರಡನೇ ಅಬ್ಬಾಸಿಡ್ ಖಲೀಫ್’ನನ್ನು ಭಾರತದ ಕನಕ್ ಎಂಬ ವ್ಯಕ್ತಿ ಭೇಟಿ ಮಾಡಿದ್ದನು. ನಂತರ ಗಣಿತಜ್ಞ ಇಬ್ರಾಹಿಂ ಅಲ್-ಫಜಾರಿಗೆ ಈ ಗ್ರಂಥವನ್ನು ಅರೇಬಿಕ್‌ಗೆ ಭಾಷಾಂತರಿಸಲು ಖಲೀಫ್ ಆದೇಶಿಸಿದ್ದರು. ಬಳಿಕ ಆಗಿನ ಸ್ಪೇನ್ ರಾಜ ಲೇಖಕನಿಗೆ ಭಾರಿ ಲಂಚ ನೀಡುವ ಮೂಲಕ ಪುಸ್ತಕದ ಪ್ರತಿಯನ್ನು ಪಡೆದು ಅದನ್ನು ಅನುವಾದಿಸಿದನು ಎಂದು ರಾಜ್ಯಪಾಲರು ಹೇಳಿದ್ದಾರೆ.
ತಲುಪಲಾಗದಷ್ಟು ದೂರದಲ್ಲಿದೆ ಈ ಗ್ಯಾಲಕ್ಸಿ: ವಿಶ್ವ ರಚನೆಯ ಆರಂಭದ ನಕ್ಷತ್ರಪುಂಜ!
ಹೀಗೆ ಹಂತ ಹಂತವಾಗಿ ಯೂರೋಪಿನ ಎಲ್ಲ ಭಾಷೆಗಳಿಗೂ ಪ್ರಾಚೀನ ಭಾರತೀಯ ಗ್ರಂಥ ಸೂರ್ಯ ಸಿದ್ಧಾಂತ ಅನುವಾದಗೊಂಡು ಆಧುನಿಕ ವಿಜ್ಞಾನಕ್ಕೆ ನಾಂದಿ ಹಾಡಿತು ಎಂದು ಆರೀಫ್ ಮೊಹ್ಮದ್ ಹೇಳಿದ್ದಾರೆ.