ಕೇವಲ 1 ರೂ ನಿಂದ Vi ಆಟಕ್ಕೆ ಬ್ರೇಕ್ ಹಾಕಿದ ಜಿಯೋ: ಕೈ-ಕೈ ಹಿಸುಕಿಕೊಂಡ ಏರ್‌ಟೆಲ್‌ ಗ್ರಾಹಕರು!

By Mahmad Rafik  |  First Published Sep 3, 2024, 7:30 PM IST

ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ 999 ರೂ. ರೀಚಾರ್ಜ್ ಪ್ಲಾನ್‌ಗಳಲ್ಲಿ ಸ್ಪರ್ಧಾತ್ಮಕ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುತ್ತಿವೆ. ಜಿಯೋ ಹೆಚ್ಚಿನ ವ್ಯಾಲಿಡಿಟಿ ಮತ್ತು 5G ಡೇಟಾವನ್ನು ನೀಡುತ್ತಿದ್ದರೆ, ವೊಡಾಫೋನ್ ಐಡಿಯಾ ಬಿಂಗ್ ಆಲ್ ನೈಟ್, ವೀಕೆಂಡ್ ರೋಲ್ ಓವರ್, ಮತ್ತು SonyLIV ಚಂದಾದಾರಿಕೆಯಂತಹ ಪ್ರಯೋಜನಗಳನ್ನು ನೀಡುತ್ತಿದೆ.


ಮುಂಬೈ: ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಎರಡೂ ಟೆಲಿಕಾಂ ಕಂಪನಿಗಳು ಸ್ಪರ್ಧಾತ್ಮಕ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಒಂದು ವೇಳೆ ನೀವು ಏನಾದ್ರೂ ದೀರ್ಘ ಕಾಲದ (ಲಾಂಗ್ ವ್ಯಾಲಿಡಿಟಿ) ಪ್ಲಾನ್ ನೋಡುತ್ತಿದ್ದರೆ, ರಿಲಯನ್ಸ್ ಜಿಯೋದ 999 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇದೇ ಪ್ಲಾನ್‌ನನ್ನು ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ 998 ರೂಪಾಯಿಯಲ್ಲಿ ನೀಡುತ್ತಿದೆ. ಈ ಎರಡೂ ಪ್ಲಾನ್ ಹೋಲಿಕೆ ಮಾಡಿದಾಗ ಜಿಯೋದಲ್ಲಿ ನಿಮಗೆ  ಹೆಚ್ಚುವರಿ ಲಾಭಗಳು ಸಿಗಲಿವೆ.

ರಿಲಯನ್ಸ್ ಜಿಯೋದ 998 ರೂಪಾಯಿಯ ಪ್ಲಾನ್ 98 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ವೊಡಾಫೋನ್-ಐಡಿಯಾಗಿಂತ 14 ದಿನ ಅಧಿಕವಾಗಿದೆ. ವೊಡಾಫೋನ್-ಐಡಿಯಾದ 998 ರೂಪಾಯಿಯ ರೀಚಾರ್ಜ್ 84 ದಿನ ವ್ಯಾಲಿಡಿಟಿ ಹೊಂದಿದೆ. ಕೇವಲ 1 ರೂಪಾಯಿ ಹೆಚ್ಚು ನೀಡುವದರಿಂದ ನಿಮಗೆ ಪ್ರತಿದಿನ 2 GB ಡೇಟಾ ಜೊತೆ ಎಕ್ಸಟೆಂಡ್ ವ್ಯಾಲಿಡಿಟಿಯೂ ಸಿಗಲಿದೆ. ಇದೆಲ್ಲದರ ಜೊತೆ ಜಿಯೋ ತನ್ನ ಅರ್ಹ ಬಳಕೆದಾರರಿಗೆ ಅನ್‌ಲಿಮಿಟೆಡ್ 5G ಡೇಟಾ ಆಫರ್ ಮಾಡುತ್ತಿದೆ. ಫಾಸ್ಟರ್ ಇಂಟರ್ನೆಟ್ ನಿರೀಕ್ಷೆಯಲ್ಲಿರೋ ಗ್ರಾಹಕರನ್ನು ಜಿಯೋ ಆಕರ್ಷಿಸುತ್ತಿದೆ. 

Tap to resize

Latest Videos

undefined

ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 100 ಎಸ್‌ಎಂಎಸ್‌ , ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮತ್ತು ಜಿಯೋ ಟಿವಿಯ ಫ್ರೀ ಆಕ್ಸೆಸ್ ಸಿಗಲಿದೆ. ಆದ್ರೆ ಜಿಯೋ ಸಿನಿಮಾ ಪ್ರೀಮಿಯಂ ಆಕ್ಸೆಸ್‌ ಇರಲ್ಲ. 

ಜಿಯೋ ಬಳಕೆದಾರರಿಗೆ ಬಂಪರ್ ಗಿಫ್ಟ್: 100GB ಉಚಿತ ಕ್ಲೌಡ್ ಸ್ಟೋರೇಜ್!

ವೊಡಾಫೋನ್ ಐಡಿಯಾ
998 ರೂಪಾಯಿ ರೀಚಾರ್ಜ್‌ನಲ್ಲಿ ವೊಡಾಫೋನ್ ಐಡಿಯಾ ಕೆಲ ವಿಶೇಷತೆಗಳನ್ನು ಹೊಂದಿದೆ. ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ ಬಿಂಗ್ ಆಲ್ ನೈಟ್ ಫೀಚರ್ ಪರಿಚಯಿಸಿದೆ. ಮಧ್ಯರಾತ್ರಿಯಿಂದ ಬೆಳಗ್ಗೆ 6 ಗಂಟೆಯವರೆಗೆ ವೊಡಾಫೋನ್ ಐಡಿಯಾ ಬಳಕೆದಾರರು ಅನ್‌ಲಿಮಿಟೆಡ್ ಡೇಟಾ ಎಂಜಾಯ್ ಮಾಡಬಹುದು. ವೀಕೆಂಡ್‌ನಲ್ಲಿ ಡೇಟಾ ರೋಲ್‌ ಓವರ್ ಮತ್ತು ಡೇಟಾ ಡಿಲೈಟ್ಸ್ ಆಫರ್ ಸಹ ನೀಡುತ್ತಿದೆ. ಗ್ರಾಹರಕು ಬಳಕೆ ಮಾಡದ ಡೇಟಾವನ್ನು ವೀಕೆಂಡ್‌ ವರೆಗೆ ಕ್ಯಾರಿ ಓವರ್ ಮಾಡಬಹುದು. ವೊಡಾಪೋನ್ ಐಡಿಯಾ ಪ್ಲಾನ್‌ನಲ್ಲಿ 84 ದಿನಗಳವರೆಗೆ ನಿಮಗೆ ಜನಪ್ರಿಯ OTT ಆಪ್ SonyLIV ಚಂದಾದರಿಕೆ ಸಿಗಲಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಮನರಂಜನೆಯನ್ನು ನೀಡುತ್ತಿದೆ.

ಏರ್‌ಟೆಲ್ ಇದೇ ಪ್ಲಾನ್ 979 ರೂಪಾಯಿಗೆ ಲಭ್ಯವಿದೆ. ಇದು 84 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ 2GB ಮತ್ತು 100 ಎಸ್‌ಎಂಎಸ್ ಆಫರ್ ಸಿಗಲಿದೆ. ಡೇಟಾ ಮತ್ತು ವ್ಯಾಲಿಡಿಟಿಯನ್ನು ಬಯಸಿದರೆ ಜಿಯೋದ ಯೋಜನೆ ಉತ್ತಮವಾಗಿದೆ, ಆದರೆ ನೀವು OTT ವಿಷಯ ಮತ್ತು ಇತರ ಡೇಟಾ ಪ್ರಯೋಜನಗಳನ್ನು ಬಯಸಿದರೆ ವೊಡಾಫೋನ್-ಐಡಿಯಾದ ಯೋಜನೆಯು ಉತ್ತಮ ಆಯ್ಕೆಯಾಗಿದೆ.

397 ರೂಗೆ 5 ತಿಂಗಳ ಆಫರ್: ಜಿಯೋ, ಏರ್‌ಟೆಲ್‌, ವಿಐಗೆ ಠಕ್ಕರ್ ಕೊಟ್ಟ ಬಿಎಸ್‌ಎನ್ಎಲ್!

click me!