
ವಿನಾಯಕ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ವಿವಿಧ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. ಅವುಗಳಲ್ಲಿ ಮುಖ್ಯವಾಗಿ ಮೊಬೈಲ್ ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದೆ. ಅದರಲ್ಲಿ ಐಫೋನ್ ಬೆಲೆಯ ಮೇಲೆ ಭಾರಿ ಕೊಡುಗೆ ನೀಡಿದೆ. ಐಫೋನ್ 15 ಮೊಬೈಲ್ ಅಸಲು ಬೆಲೆ ₹79,600 ಆಗಿದ್ದು, ಇದರ ಮೇಲೆ ಗಣೇಶ ಹಬ್ಬದ ಪ್ರಯುಕ್ತ ಶೇ.17 ರಿಯಾಯಿತಿ ನೀಡಲಾಗಿದೆ. ಅಂದರೆ ಇದು ಕೇವಲ ₹65,999ಕ್ಕೆ ಐಫೋನ್ 15 ಸಿಗಲಿದೆ. ಇದರೊಂದಿಗೆ ಇನ್ನೂ ಕೆಲವು ಕೊಡುಗೆಗಳನ್ನು ನೀಡಲಾಗಿದೆ. ಅವುಗಳಲ್ಲಿ ನಿಮಗೆ ಸರಿಹೊಂದುವ ಕೊಡುಗೆಗಳು ಇದ್ದರೆ ಕೇವಲ 25,000 ರೂ.ಗಿಂತ ಕಡಿಮೆ ಬೆಲೆಗೆ ನೀವು ನಿಮ್ಮಿಷ್ಟದ ಐಫೋನ್ 15 ಮೊಬೈಲ್ ಖರೀದಿ ಮಾಡಬಹುದು.
ಐಫೋನ್ 15 ವೈಶಿಷ್ಟ್ಯಗಳು ಇಲ್ಲಿವೆ:
ಐಫೋನ್ 15 ಆಕರ್ಷಕವಾದ 6.1-ಇಂಚಿನ ಸೂಪರ್ ರೆಟಿನಾ XDR OLED ಸ್ಕ್ರೀನ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ಡೈನಾಮಿಕ್ ಐಲ್ಯಾಂಡ್ ಅಸಾಧಾರಣವಾದ 2,000nits ಪೀಕ್ ಬ್ರೈಟ್‌ನೆಸ್ ಕೂಡ ಇದರಲ್ಲಿದೆ. ಅತ್ಯಾಧುನಿಕ A16 ಬಯೋನಿಕ್ ಚಿಪ್, iOS 17 ಆಪರೇಟಿಂಗ್ ಸಿಸ್ಟಮ್ ಮೂಲಕ ಇದರ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಫೋಟೋಗ್ರಫಿ ವಿಷಯಕ್ಕೆ ಬಂದರೆ 48 MP ಪ್ರೈಮರಿ ಕ್ಯಾಮೆರಾ, 12 MP ಸೆಕೆಂಡರಿ ಕ್ಯಾಮೆರಾ ಇದರಲ್ಲಿದೆ. ಮುಂಭಾಗದಲ್ಲಿ 12 MP ಕ್ಯಾಮೆರಾ ಅಳವಡಿಸಲಾಗಿದೆ.
ಸೆಪ್ಟೆಂಬರ್‌ನಲ್ಲಿ iPhone 16 ಸೀರಿಸ್ ಲಾಂಚ್, ಇದರಲ್ಲಿದೆ 7 ಅದ್ಭುತ ವೈಶಿಷ್ಟ್ಯ
ಕೇವಲ 24,849 ರೂ.ಗೆ ಐಫೋನ್ 15:
ಮಾರುಕಟ್ಟೆಯಲ್ಲಿ 79,600 ರೂ. ಬೆಲೆಗೆ ಮಾರಾಟ ಆಗುತ್ತಿರುವ ಐಫೋನ್ 15 ಅನ್ನು ಗಣೇಶ ಹಬ್ಬದಲ್ಲಿ ಕೇವಲ 24,849ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಜಾಗತಿಕ ಮಾರುಕಟ್ಟೆಯ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಕಡಿಮೆ ಬೆಲೆಗೆ ಐಫೋನ್ ಖರೀದಿ ಮಾಡಬಹುದು. ಆಪಲ್ ಸಂಸ್ಥೆಯ ಪ್ರಕಾರ ಪ್ರಸ್ತುತ ಐಫೋನ್ 15(128 GB) ಈಗ ಮಾರುಕಟ್ಟೆಯಲ್ಲಿ ಶೇ.17 ರಿಯಾಯಿತಿಯೊಂದಿಗೆ 65,999 ರೂ.ಗೆ ಮಾರಾಟ ಆಗುತ್ತಿದೆ.
ಹಳೆಯ ಫೋನ್ ಎಕ್ಸ್‌ಚೇಂಜ್ ಆಫರ್:
ಪ್ರಸ್ತುತ ನೀವು ಬಳಸುತ್ತಿರುವ ಫೋನ್ ಎಕ್ಸ್‌ಚೇಂಜ್‌ನಲ್ಲಿ ನೀಡಿದರೆ ಗರಿಷ್ಠ 40,850 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಆದರೆ, ಎಕ್ಸ್‌ಚೇಂಜ್‌ನಲ್ಲಿ ನೀಡುವ ಫೋನ್ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಹಾನಿಗೊಳಗಾದ ಫೋನ್ ಆಗಿದ್ದರೆ ಸರಿಯಾದ ಬೆಲೆ ಸಿಗುವುದಿಲ್ಲ.
ಬ್ಯಾಂಕ್ ಕೊಡುಗೆಗಳು: ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಎಕ್ಸ್‌ಚೇಂಜ್ ಡೀಲ್‌ಗಳ ಜೊತೆಗೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ಶೇ.5 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಇವುಗಳಲ್ಲದೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಬಳಸಿದರೆ EMIಗಳಲ್ಲಿ ಶೇ.10ವರೆಗೆ ರಿಯಾಯಿತಿ ಲಭ್ಯವಾಗುತ್ತದೆ.
ಫಾಕ್ಸ್‌ಕಾನ್ ಸಿಇಒ ಯಂಗ್ ಲಿಯು ಬೆಂಗಳೂರಿಗೆ ಆಗಮನ: ಐಫೋನ್ ಕಂಪನಿಗೆ 300 ಎಕರೆ ಭೂಮಿ
ಹೆಚ್ಚುವರಿ ರಿಯಾಯಿತಿ: ಮೊಬೈಲ್ ಎಕ್ಸ್‌ಚೇಂಜ್, ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಜೊತೆಗೆ ವಿಶೇಷ ಕ್ಯಾಶ್‌ಕೂಪನ್ ಮೂಲಕ 11,901 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಈ ರೀತಿ ಎಲ್ಲಾ ಕೊಡುಗೆಗಳನ್ನು ನೀವು ಪಡೆದರೆ ಸುಮಾರು 52,500 ರೂ.ಗಳಿಂದ 54,751 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಅಂದರೆ ಎಂಆರ್‌ಪಿ ದರ 79,600 ರೂ. ಬೆಲೆಯ ಐಫೋನ್ 15 ಕೇವಲ 24,849 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.