ಇಂದಿನ ದಿನ ಜನರಿಗೆ ಬೇಕಾಗಿರೋದು ಬರೇ ಇಂಟರ್ನೆಟ್ ಅಲ್ಲ, ಸ್ಪೀಡ್ ಹೆಚ್ಚಿರುವ ಇಂಟರ್ನೆಟ್. ಕ್ಷಣಮಾತ್ರದಲ್ಲಿ ಮಾಹಿತಿ ಡೌನ್‌ಲೋಡ್, ಅಪ್ಲೋಡ್ ಆಗ್ಬೇಕು. ಆದ್ದರಿಂದ, ಟೆಲಿಕಾಂ ಸಂಸ್ಥೆಗಳು ವೇಗವಾದ ಇಂಟರ್ನೆಟ್ ಸೇವೆ ಒದಗಿಸುವ ಪೈಪೋಟಿ ನಡೆಸುತ್ತಿವೆ.
ಮಾರ್ಚ್ ತಿಂಗಳ ಸ್ಪೀಡ್ ಚಾರ್ಟನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಿಡುಗಡೆ ಮಾಡಿದೆ. 4G ಡೌನ್‌ಲೋಡ್ ಸ್ಪೀಡ್‌ನಲ್ಲಿ Reliance Jio ಮೇಲುಗೈ ಸಾಧಿಸಿದ್ದರೆ, ಅಪ್ಲೋಡ್ ಸ್ಪೀಡ್‌ನಲ್ಲಿ ವೊಡಾಫೋನ್ ಮುಂದಿದೆ.
Jio ಸರಾಸರಿ ಸ್ಪೀಡ್ 22 mbps ಆಗಿದ್ದು, 4.6 mbps ಅಪ್ಲೋಡ್ ಸ್ಪೀಡ್ ಹೊಂದಿದೆ. ಕಳೆದ ವರ್ಷವೂ (2018) ಡೌನ್‌ಲೋಡ್ ಸ್ಪೀಡ್‌ನಲ್ಲಿ Jio ಇತರೆಲ್ಲಾ ಸಂಸ್ಥೆಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿತ್ತು.
ಇದನ್ನೂ ಓದಿ: ಜಿಯೋದಿಂದ 600 ರು.ಗೆ ಟೀವಿ, ಲ್ಯಾಂಡ್‌ಲೈನ್, ಬ್ರಾಡ್ ಬ್ಯಾಂಡ್!
5.5 mbps ವೇಗದೊಂದಿಗೆ ಅಪ್ಲೋಡ್ ಸ್ಪೀಡ್ ಚಾರ್ಟ್‌ನಲ್ಲಿ ವೊಡಾಫೋನ್ ಮುಂದಿದ್ದು, ಡೌನ್‌ಲೋಡ್ ಸ್ಪೀಡ್ 7mbps ಆಗಿದೆ. ಐಡಿಯಾ ಡೌನ್‌ಲೋಡ್ ಸ್ಪೀಡನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದ್ದು, ಅದು 5.7mbps ಆಗಿದೆ.
ಆದರೆ, ಭಾರ್ತಿ ಏರ್ಟೆಲ್ ಡೌನ್‌ಲೋಡ್ ಸ್ಪೀಡ್ ಹಿಂದಿನ ತಿಂಗಳಿಗಿಂತಲೂ ಸ್ವಲ್ಪ ಕಡಿಮೆಯಾಗಿದೆ. ಫೆಬ್ರವರಿಯಲ್ಲಿ ಸರಾಸರಿ 9.4 mbps ಇದ್ದ ಸ್ಪೀಡ್ ಮಾರ್ಚ್ ತಿಂಗಳಿನಲ್ಲಿ 9.3 mbps ಆಗಿದೆ.