
ಬೆಂಗಳೂರು(ಜ.07): ಮೊಬೈಲ್ ನೆಟ್‌ವರ್ಕ್‌ನಲ್ಲಿಯೇ ಮೊದಲ ಬಾರಿಗೆ ಉಚಿತ ಕರೆ ಹಾಗೂ ಉಚಿತ ಡಾಟಾದೊಂದಿಗೆ ಪರಿಚಯವಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ.
ಮಾಸಿಕ ಕೇವಲ 149ರೂ. ಗಳಿಗೆ ಪ್ರತಿದಿನ ಒಂದು ಜಿಬಿ ಡಾಟಾ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಟೆಲಿಕಾಂ ಉದ್ಯಮದಲ್ಲಿಯೇ ಅತ್ಯಂತ ಕಡಿಮೆ ಟ್ಯಾರಿಫ್ ಆಗಿದೆ. ಅಲ್ಲದೆ, ಈ ಹಿಂದೆ ಜಾರಿಯಲ್ಲಿದ್ದ 399ರೂ. ಪ್ಲಾನ್‌ಗೆ ಈಗ ಎರಡು ವಾರಗಳ ಹೆಚ್ಚುವರಿ ಡಾಟಾ ಸೌಲಭ್ಯ ಒದಗಿಸಲಾಗಿದ್ದು, 70 ದಿನಗಳ ಕಾಲಾವಧಿಯಿಂದ 84 ದಿನಗಳಿಗೆ ವಿಸ್ತರಿಸಿದಂತಾಗಿದೆ. ಅತೀ ಹೆಚ್ಚು ಡಾಟಾ ಪ್ಯಾಕ್ ಗಳನ್ನು ಬಳಸುವವರಿಗಾಗಿ ಪ್ರತಿ ಜಿಬಿಗೆ 4ರೂ.ಗಳಂತೆ ನೀಡಲು ಮುಂದಾಗಿದ್ದು, ಜನವರಿ 9ರಿಂದ ಜಾರಿಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.