
ನವದೆಹಲಿ(ಜ.05): ರಿಲಯನ್ಸ್ ಜಿಯೊ ತನ್ನ ಎಲ್ಲ ಮಾಸಿಕ ರಿಚಾರ್ಜ್ ಯೋಜನೆಗಳ ಬೆಲೆ 50 ರು.ಯಷ್ಟು ಕಡಿಮೆ ಮಾಡಿದೆ. ಅಲ್ಲದೆ, ಪ್ರಸ್ತುತ ೧ಜಿಬಿ ಡಾಟಾ ಮಿತಿಯನ್ನು 1.5 ಜಿಬಿಗೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ. ಯೋಜನೆ ಜ.9ರಿಂದ ಅನ್ವಯವಾಗಲಿದೆ.
ಒಂದು ದಿನ ವ್ಯಾಲಿಡಿಟಿ ಯೋಜನೆಯ 1ಜಿಬಿ ಡಾಟಾ ಬೆಲೆ 4 ರು.ಗೆ ಇಳಿಕೆ ಮಾಡಿದೆ. 399 ರು. ಯೋಜನೆ ಹೊಂದಿರುವವರಿಗೆ ಶೇ. 20ರಷ್ಟು ಅಧಿಕ ಡಾಟಾ ನೀಡಲು ಕಂಪನಿ ನಿರ್ಧರಿಸಿದೆ. 199 ರು., 299 ರು., 459 ರು., 499 ರು. ಯೋಜನೆಗಳಿಗೆ ಬೆಲೆ 50 ರು. ಇಳಿಕೆಯಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.