ಹೊಸ ವರ್ಷದಂದು ವಾಟ್ಸ್ ಆ್ಯಪ್ ಕ್ರ್ಯಾಶ್ ಆಗಿದ್ದಕ್ಕೆ ಭಾರತೀಯರು ಕಾರಣವಂತೆ?

Published : Jan 05, 2018, 05:59 PM ISTUpdated : Apr 11, 2018, 12:59 PM IST
ಹೊಸ ವರ್ಷದಂದು ವಾಟ್ಸ್ ಆ್ಯಪ್ ಕ್ರ್ಯಾಶ್ ಆಗಿದ್ದಕ್ಕೆ ಭಾರತೀಯರು ಕಾರಣವಂತೆ?

ಸಾರಾಂಶ

-ಹೊಸ ವ್ಷದ ಮುನ್ನ ದಿನ ತುಸು ಕಾಲ ಕುಸಿತಗೊಂಡಿದ್ದ ವಾಟ್ಸ್ ಆ್ಯಪ್ ಸೇವೆ - ಭಾರತೀಯರಿಂದಲೇ ಅತೀ ಹೆಚ್ಚು ಸಂದೇಶ ರವಾನೆ. - ಅತೀ ಹೆಚ್ಚು ಮಾರುಕಟ್ಟೆ ಹೊಂದಿದೆ ವಾಟ್ಸ್ ಆ್ಯಪ್.

ಹೊಸ ವರ್ಷದ ಮುನ್ನಾ ದಿನ ಬಹು ಪ್ರಖ್ಯಾತ ವಾಟ್ಸ್ ಆ್ಯಪ್‌ನಲ್ಲಿ ವಿಶ್ವದ್ಯಾಂತ 7500 ಕೋಟಿ ಸಂದೇಶಗಳು ರವಾನೆಯಾಗಿದ್ದು, ಇದೀಗ ಈ ಕಂಪನಿ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಅದರಲ್ಲಿ 2000 ಕೋಟಿ ಸಂದೇಶಗಳನ್ನು ಭಾರತೀಯರಿಂದಲೇ ಶೇರ್ ಆಗಿದ್ದವು. 

ಭಾರತದಲ್ಲಿ ಹೊಸ ವರ್ಷದ ಮುನ್ನಾ ದಿನ ವಾಟ್ಸ್ ಆ್ಯಪ್ ಕುಸಿತಗೊಂಡಿದ್ದಕ್ಕೂ ಭಾರತೀಯರು ಸಿಕ್ಕಾಪಟ್ಟೆ ಸಂದೇಶಗಳನ್ನು ಶೇರ್ ಮಾಡಿಕೊಂಡಿದ್ದೇ ಕಾರಣವೆಂದೂ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಯಟರ್ಸ್‌ಗೆ ಸುದ್ದಿ ಸಂಸ್ಥೆಗೆ ಮೇಲ್ ಮೂಲಕ ಮಾಹಿತಿ ಹಂಚಿಕೊಂಡ ಫೇಸ್‌ಬುಕ್ ಸ್ವಾಮ್ಯದ ವಾಟ್ಸ್‌ಆ್ಯಪ್, 'ಹೊಸ ವರ್ಷದ ಮುನ್ನ ದಿನದಷ್ಟು ಸಂದೇಶಗಳು ಯಾವತ್ತೂ ಹಂಚಿಕೆಯಾಗಿರಲಿಲ್ಲ. ಆ ದಿನ ಭಾರದಲ್ಲಿಯೇ 1300 ಕೋಟಿ ಚಿತ್ರಗಳು, 500 ಕೋಟಿ ವೀಡಿಯೋಗಳು ರವಾನೆಯಾಗಿದ್ದು, ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಇಷ್ಟು ಸಂಖ್ಯೆಯ ಸಂದೇಶಗಳು ಒಟ್ಟಿಗೇ ಶೇರ್ ಆಗಿದ್ದೇ ಕಾರಣ,'  ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.

ಈ ಸಂದೇಶ ರವಾನೆ ಆ್ಯಪ್‌ಗೆ ಭಾರತವೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು, ತಿಂಗಳಿಗೆ 20 ಕೋಟಿಗಿಂತಲೂ ಹೆಚ್ಚು ಮಂದಿ ಈ ಆ್ಯಪ್‌ಅನ್ನು ಸಕ್ರಿಯವಾಗಿ ಬಳಸುತ್ತಾರೆಂದು ಕಂಪನಿ ಹೇಳಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಪವಾಡ : ನಾಪತ್ತೆ ಆಗಿದ್ದ 1 ಉಪಗ್ರಹ ಕಕ್ಷೆಗೆ!
ನಾನು ಬದುಕಿದ್ದೇನೆ, ಎರಡು ದಿನ ಬಟನ್ ಒತ್ತಿಲ್ಲ ಅಂದ್ರೆ ... ಚೀನಾದಲ್ಲಿ ಫೇಮಸ್ ಆಗ್ತಿದೆ Are you dead ಆಪ್