Mobile Number Portability: ವೊಡಾಫೋನ್‌ ಪ್ಲಾನ್‌ ವಿರುದ್ಧ ಟ್ರಾಯ್‌ಗೆ ಜಿಯೋ ದೂರು!

By Kannadaprabha News  |  First Published Dec 5, 2021, 11:40 AM IST

*ವೋಡಾಫೋನ್‌- ಐಡಿಯಾ ವಿರುದ್ಧ ಜಿಯೋ ದೂರು
*SMS ಸೇವೆ ಪಡೆಯಲು  ಹೆಚ್ಚಿನ ಹಣ ಪಾವತಿ‌ ಅಗತ್ಯ
*MNP ಸೇವೆಗೆ ಅಡ್ಡಗಾಲು ಎಂದ ರಿಲಯನ್ಸ್ ಜಿಯೋ!


ಮುಂಬೈ (ಡಿ. 05): ಇತ್ತೀಚಿನ ದರ ಏರಿಕೆ ಬಳಿಕ (Tariffs) ವೊಡಾಪೋನ್‌ (Vodafone) ತನ್ನ ಪ್ರೀಪೇಯ್ಡ್‌ ಗ್ರಾಹಕರಿಗೆ (Prepaid Users) ನೀಡಿರುವ ಕೆಲ ಯೋಜನೆ ಬಗ್ಗೆ ದೂರ ಸಂಪರ್ಕ ನಿಯಂತ್ರಣಾ ಸಂಸ್ಥೆಯಾದ ಟ್ರಾಯ್‌ಗೆ (TRAI) ರಿಲಯನನ್ಸ್‌ ಒಡೆತನದ ಜಿಯೋ (Reliance Jio) ದೂರು ನೀಡಿದೆ. ವೊಡಾಫೋನ್‌ ತನ್ನ 28 ದಿನಗಳ ಪ್ಲಾನ್‌ನ ಶುಲ್ಕವನ್ನು 75 ರು.ನಿಂದ 99 ರು.ಗೆ ಪರಿಷ್ಕರಿಸಿದೆ. ಆದರೆ ಇದರಲ್ಲಿ ಎಸ್‌ಎಂಎಸ್‌ (SMS) ಸೌಲಭ್ಯ ಇಲ್ಲ. ಎಸ್‌ಎಂಎಸ್‌ ಬೇಕಾದರೆ ಅದಕ್ಕೆ ಗ್ರಾಹಕರು ಮಾಸಿಕ 179 ರು. ಪ್ಲಾನ್‌ ಆಯ್ದುಕೊಳ್ಳಬೇಕು. 

ಮಸೇಜ್‌ ಕಳುಹಿಸುವ ನಿಯಮ ತೆಗೆದುಹಾಕಿ!

Tap to resize

Latest Videos

ಯಾವುದೇ ನೆಟ್‌ವರ್ಕ್ ಗ್ರಾಹಕರು ಇತರೆ ನೆಟ್‌ವರ್ಕ್ಗೆ ಜಿಗಿಯಲು ಪೋರ್ಟ್‌ (Port) ಅನುಮತಿಗಾಗಿ ಎಸ್‌ಎಂಎಸ್‌ (SMS) ಸೇವೆ ಅತ್ಯಗತ್ಯ. ವೊಡಾಪೋನ್‌ನ ಈ ನೀತಿಯಿಂದಾಗಿ ಕಡಿಮೆ ಮೊತ್ತದ ಪ್ಲ್ಯಾನ್‌ ಬಳಸುವ ಗ್ರಾಹಕರು ಬೇರೆ ಯಾವುದೇ ಕಂಪನಿಗೆ ಪೋರ್ಟ್‌ ಆಗುವುದು ಕಷ್ಟವಾಗುತ್ತದೆ. ಹೀಗಾಗಿ ಆರಂಭಿಕ ಯೋಜನೆಯಲ್ಲೂ ಎಸ್‌ಎಂಎಸ್‌ ಸೇವೆ ಒದಗಿಸಲು ಸೂಚಿಸಬೇಕು ಎಂದು ಜಿಯೋ ಮನವಿ ಮಾಡಿದೆ. ಈ ಸಮಸ್ಯೆ ಪರಿಹರಿಸಲು ವೋಡಾಪೋನ್ SMS ಸೇವೆಯನ್ನು ಉಚಿತವಾಗಿ ನೀಡಬೇಕು ಅಥವಾ ಯಾವುದೇ ಸೇವೆಯಿಂದ ಪೋರ್ಟ್ ಔಟ್ ಮಾಡಲು ಬಳಕೆದಾರರಿಗೆ ಕಡ್ಡಾಯ ಮಸೇಜ್‌ ಕಳುಹಿಸುವ ನಿಯಮ ತೆಗೆದುಹಾಕಬೇಕು ಎಂದು ಜಿಯೋ ಹೇಳಿದೆ.

MNP ವಿನಂತಿಗಳನ್ನು ಸಲ್ಲಿಸಲು  ಮೆಸೇಜ್‌ ಕಳುಹಿಸುವುದು ಕಡ್ಡಾಯ!

ಸೆಪ್ಟೆಂಬರ್ 2021 ರಲ್ಲಿ, ಸುಮಾರು 10.10 ಮಿಲಿಯನ್ ಚಂದಾದಾರರು ತಮ್ಮ ಟೆಲಿಕಾಂ ಸೇವೆಗಳೊಂದಿಗೆ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ ( Mobile Number Portability) ವಿನಂತಿಗಳನ್ನು ಸಲ್ಲಿಸಿದ್ದರು ಈ ಮೂಲಕ ಒಟ್ಟಾರೆ ಪೋರ್ಟಿಂಗ್ ವಿನಂತಿಗಳು 638.25 ಮಿಲಿಯನ್‌ ತಲುಪಿವೆ. ವೊಢಾಪೋನ್‌ ಐಡಿಯಾ (Vodafone Idea)ನ ಈ ಕ್ರಮವು ಇತರ ಸೇವೆಯಿಂದ ಪೋರ್ಟ್ ಮಾಡಲು ಬಯಸುವ ಯಾವುದೇ Vi ಚಂದಾದಾರರು ಮೇಸೇಜ್ ಕಳುಹಿಸಲು SMS ಸೇವೆ ಪಡೆಯಬೇಕಾಗುತ್ತದೆ. ಇದಕ್ಕೆ ಗ್ರಾಹಕರು  ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. 

Airtel ಬೆನ್ನಲ್ಲೇ Vodafone ಕರೆ, ಇಂಟರ್ನೆಟ್‌ ದರ ಹೆಚ್ಚಳ!

MNP ವಿನಂತಿಗಳನ್ನು ಸಲ್ಲಿಸಲು  ಮೆಸೇಜ್‌ ಕಳುಹಿಸುವುದು ಕಡ್ಡಾಯವಾಗಿದೆ. ಹಾಗಾಗಿ ವೊಡಾಫೋನ್‌ ಹೊರತಂದಿರುವ ಕಡಿಮೆ ಬೆಲೆಯ ಯೋಜನೆಗಳನ್ನು ಹೊಂದಿರುವ ಬಳಕೆದಾರರನ್ನು ಪೋರ್ಟ್ ಔಟ್ ಮಾಡುವುದನ್ನು ಇದು ತಡೆಯುತ್ತದೆ. ಜತೆಗೆ  ದುಬಾರಿ ಪ್ಯಾಕ್‌ ಹಾಕಿಸಿಕೊಳ್ಳುವವರು, ಹೆಚ್ಚು ಹಣ ಪಾವತಿಸಿದ ನಂತರ ಪೋರ್ಟ್ ಮಾಡಲು ಬಯಸುವುದಿಲ್ಲ. ಹಾಗಾಗಿ ಜಿಯೋ ವೊಡಾಫೋನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಟ್ರಾಯ್ (TRAI) ವಿವಿಧ ಮಾರ್ಗಗಳನ್ನು ಪರಿಶೀಲಿಸುತ್ತಿದೆ. ಸದ್ಯಕ್ಕೆ ಈ ವಿಷಯದಲ್ಲಿ  ಅಸ್ಪಷ್ಟತೆ ಇದೆ,  ಆದರೆ ಗ್ರಾಹಕರು ತಮ್ಮ ಮೊಬೈಲ್‌ ನಂಬರ್‌ ಪೋರ್ಟ್‌ ಸೇರಿದಂತೆ ಇತರ ಸೇವೆಗಳನ್ನು ಪಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದ ಎಂದು ಟ್ರಾಯ್ ತಿಳಿಸಿದೆ. ಇತ್ತೀಚೆಗೆ ಜಿಯೋ, ಏರ್ಟೆಲ್‌, ವೊಡಾಫೋನ್‌ ಸೇರಿದಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ವಿವಿಧ ಯೋಜನೆಗಳ ಬೆಲೆ ಹೆಚ್ಚಿಸಿದ್ದಾರೆ. ಹೀಗಾಗಿ ಇಂಟರನೆಟ್‌ ಕರೆಗಳು, ಮೆಸೇಜಿಂಗ್ ಸೇರಿದಂತೆ ಟೆಲಿಕಾಂನ ವಿವಿಧ ಸೇವೆಗಳು ದುಬಾರಿಯಾಗಿವೆ.

ಜಿಯೋ  ರೀಚಾರ್ಜ್ ದರ ಹೆಚ್ಚಳ!

ಎರ್‌ಟೆಲ್ ಮತ್ತು ವೊಡಾಫೋನ್ (Airtel And Vodafone) ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿದ ನಂತರ, ಜಿಯೋ (Reliance Jio) ಕೂಡ ತಮ್ಮ ಪ್ರಸ್ತುತ ಯೋಜನೆಗಳನ್ನು (Prepaid Plans) ದುಬಾರಿಗೊಳಿಸಿದೆ. ಕಂಪನಿಯ ಹೊಸ ಯೋಜನೆಗಳು ಡಿಸೆಂಬರ್ 1, 2021 ರಿಂದ ಜಾರಿಗೆ ಬರಲಿದೆ. ಕಂಪನಿಯ ಅತ್ಯಂತ ಜನಪ್ರಿಯ ರೂ 555 ಪ್ಲಾನ್ ಈಗ ರೂ 666 ಆಗಿದ್ದರೆ, ರೂ 599 ಪ್ಲಾನ್ ಈಗ ರೂ 719 ಆಗಿದೆ. ಈ ಎರಡೂ ಯೋಜನೆಗಳ ಮಾನ್ಯತೆಯು 84 ದಿನಗಳವರೆಗೆ ಒಂದೇ ಆಗಿರುತ್ತದೆ. ಇದಲ್ಲದೆ, ಜಿಯೋ (Jio) ತನ್ನ ಎಲ್ಲಾ ಯೋಜನೆಗಳ ದರಗಳನ್ನು ಪರಿಷ್ಕರಿಸಿದೆ.

click me!