ಮುಂದಿನ ಜನವರಿಯಲ್ಲಿ ಇಸ್ರೋದಿಂದ ಏಕ ಕಾಲಕ್ಕೆ 83 ಉಪಗ್ರಹಗಳ ಉಡಾವಣೆ

By Suvarna Web DeskFirst Published Nov 30, 2016, 7:16 AM IST
Highlights

80 ಉಪಗ್ರಹಗಳು ಇಸ್ರೇಲ್, ಕಝಾಕಿಸ್ತಾನ್, ಹಾಲೆಂಡ್, ಸ್ವಿಜರ್ಲ್ಯಾಂಡ್ ಹಾಗೂ ಅಮೆರಿಕಾದ ದೇಶಗಳಾಗಿದ್ದು ಇವುಗಳ ತೂಕ 500 ಕೆಜಿಯಾಗಿದೆ. ಇಸ್ರೋ ಹಾಗೂ ಆಂಟ್ರಿಕ್ಸ್ ಕಾರ್ಪೋರೇಷನ್ ಲಿ. ಸಂಸ್ಥೆಗಳು ಅಂತರರಾಷ್ಟ್ರೀಯ ನಿಯಮಗಳ ಒಪ್ಪಂದದಡಿ ಈ ಯೋಜನೆ ಕೈಗೊಂಡಿವೆ.

ನವದೆಹಲಿ(ನ.30): ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2017ನೇ ಜನವರಿಯಲ್ಲಿ ಒಂದೇ ಬಾರಿಗೆ 83 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಅವುಗಳಲ್ಲಿ 80 ವಿದೇಶಿ, 3 ಸ್ವದೇಶಿ ಉಪಗ್ರಹಗಳಾಗಿರುತ್ತವೆ.

80 ಉಪಗ್ರಹಗಳು ಇಸ್ರೇಲ್, ಕಝಾಕಿಸ್ತಾನ್, ಹಾಲೆಂಡ್, ಸ್ವಿಜರ್ಲ್ಯಾಂಡ್ ಹಾಗೂ ಅಮೆರಿಕಾದ ದೇಶಗಳಾಗಿದ್ದು ಇವುಗಳ ತೂಕ 500 ಕೆಜಿಯಾಗಿದೆ. ಇಸ್ರೋ ಹಾಗೂ ಆಂಟ್ರಿಕ್ಸ್ ಕಾರ್ಪೋರೇಷನ್ ಲಿ. ಸಂಸ್ಥೆಗಳು ಅಂತರರಾಷ್ಟ್ರೀಯ ನಿಯಮಗಳ ಒಪ್ಪಂದದಡಿ ಈ ಯೋಜನೆ ಕೈಗೊಂಡಿವೆ.

ಈ ಯೋಜನೆ ಕೈಗೊಳ್ಳುವುದರ ಮೂಲಕ ಇಸ್ರೋ ಹೊಸ ಇತಿಹಾಸ ನಿರ್ಮಿಸಲು ಹೊರಟಿದೆ. ಭಾರತದ ಮೂರು ಉಪಗ್ರಹಗಳಲ್ಲಿ ಕಾರ್ಟೋಸ್ಯಾಟ್-2 730 ಕೆಜಿ ತೂಕವಿದ್ದು, ಉಳಿದ  ಐಎನ್ಎಸ್-ಐಎ ಹಾಗೂ ಐಎನ್ಎಸ್-1ಬಿ ಉಪಗ್ರಹಗಳು 30 ಕೆಜಿ ತೂಕವಿದೆ.

click me!