ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ: ವೆಲ್ ಕಂ ಆಫರ್ ಅವಧಿ ವಿಸ್ತರಿಸಲಿರುವ ಕಂಪೆನಿ

Published : Nov 27, 2016, 04:59 AM ISTUpdated : Apr 11, 2018, 12:54 PM IST
ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ: ವೆಲ್ ಕಂ ಆಫರ್ ಅವಧಿ ವಿಸ್ತರಿಸಲಿರುವ ಕಂಪೆನಿ

ಸಾರಾಂಶ

ಸೆಪ್ಟೆಂಬರ್ 4ರಂದು ಉದ್ಘಾಟನೆಗೊಂಡ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಓರ್'ಟೆಲ್, ವೊಡಾಫೋನ್ ಇತ್ಯಾದಿ ಟೆಲಿಕಾಂ ಸರ್ವಿಸ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಈ ಕಂಪೆನಿಗಳು 'ಒಂದು ನಿಮಿಷದ ಒಂದು ಕರೆಗೆ 14 ಪೈಸೆ ತಗುಲುತ್ತದೆ, ಆದರೆ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ನಿಯಮ ಉಲ್ಲಂಘಿಸಿ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ ಎಂದು ಜಿಯೋ ವಿರುದ್ಧ ದೂರನ್ನೂ ನೀಡಿದ್ದವು. ಆದರೆ ಇದು ಜಿಯೋ 90 ದಿನಗಳ ಕಾಲ ನೀಡುತ್ತಿರುವ ಪ್ರಮೋಷನಲ್ ಆಫರ್, ಇದು ಟ್ರಾಯ್ ನಿಯಮಕ್ಕನುಗುಣವಾಗಿದೆ ಎಂದು ದೂರುದಾರರಿಗೆ ಸ್ಪಷ್ಟಪಡಿಸಿತ್ತು.

ಬಿಡುಗಡೆಗೊಂಡ ದಿನದಿಂದಲೂ ಒಂದಿಲ್ಲೊಂದು ವಿಚಾರದಿಂದ ಸದ್ದು ಮಾಡುತ್ತಲೇ ಇರುವ ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುವ ಸಾಧ್ಯತೆಗಳು ದಟ್ಟವಾಗಿವೆ. ತನ್ನ ವೆಲ್'ಕಂ ಆಫರ್'ನಲ್ಲಿ ಡಿಸೆಂಬರ್ 31 ಉಚಿತ ಕರೆ ಹಾಗೂ ಇಂಟರ್'ನೆಟ್ ಸೇವೆಯನ್ನು ತನ್ನ ಗ್ರಾಹರಿಗೆ ನೀಡಿದ್ದ ಜಿಯೋ ಇದೀಗ ಈ ಆಫರ್'ನ್ನು ಮಾರ್ಚ್ 2017 ರವರೆಗೆ ವಿಸ್ತರಿಸಲಿದೆ ಎಂಬ ವಿಚಾರ ತಿಳಿದು ಬಂದಿದೆ.

ಸೆಪ್ಟೆಂಬರ್ 4ರಂದು ಉದ್ಘಾಟನೆಗೊಂಡ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಓರ್'ಟೆಲ್, ವೊಡಾಫೋನ್ ಇತ್ಯಾದಿ ಟೆಲಿಕಾಂ ಸರ್ವಿಸ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಈ ಕಂಪೆನಿಗಳು 'ಒಂದು ನಿಮಿಷದ ಒಂದು ಕರೆಗೆ 14 ಪೈಸೆ ತಗುಲುತ್ತದೆ, ಆದರೆ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ನಿಯಮ ಉಲ್ಲಂಘಿಸಿ ತನ್ನ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ ಎಂದು ಜಿಯೋ ವಿರುದ್ಧ ದೂರನ್ನೂ ನೀಡಿದ್ದವು. ಆದರೆ ಇದು ಜಿಯೋ 90 ದಿನಗಳ ಕಾಲ ನೀಡುತ್ತಿರುವ ಪ್ರಮೋಷನಲ್ ಆಫರ್, ಇದು ಟ್ರಾಯ್ ನಿಯಮಕ್ಕನುಗುಣವಾಗಿದೆ ಎಂದು ದೂರುದಾರರಿಗೆ ಸ್ಪಷ್ಟಪಡಿಸಿತ್ತು.

ಇಷ್ಟೆಲ್ಲಾ ಸದ್ದು ಮಾಡಿ ಜನರನ್ನು ತಲುಪಿದ ಜಿಯೋ ಇದೀಗ ಮತ್ತೆ ವೆಲ್ ಕಂ ಆಫರ್ ವಿಸ್ತರಿಸಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಡಿಸೆಂಬರ್ 28 ರಂದು ಈ ಕುರಿತಾದ ಅಧಿಕೃತ ಘೋಷಣೆ ಹೊರಬೀಳಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

BGS ಕಾಲೇಜು ವಿದ್ಯಾರ್ಥಿಯ ಅದ್ಭುತ ಸಂಶೋಧನೆ: 'HybridEcoISA' ತಂತ್ರಜ್ಞಾನಕ್ಕೆ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ!
ಮಾ.1 ರಿಂದ ಸಿಮ್‌ ಕಾರ್ಡ್‌ ಇಲ್ಲದೇ ವಾಟ್ಸಾಪ್‌ ವರ್ಕ್‌ ಆಗಲ್ಲ, ಪ್ರತಿ 6 ಗಂಟೆಗೊಮ್ಮೆ ಲಾಗ್‌ಔಟ್‌ ಆಗುತ್ತೆ ವೆಬ್‌ ವಾಟ್ಸಾಪ್‌!