ISRO Agreement With Oppo: ನ್ಯಾವಿಗೇಷನ್ ಸೇವೆಗಾಗಿ ಚೀನಾ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದ!

Published : Dec 12, 2021, 12:11 PM ISTUpdated : Dec 12, 2021, 12:17 PM IST
ISRO Agreement With Oppo: ನ್ಯಾವಿಗೇಷನ್ ಸೇವೆಗಾಗಿ ಚೀನಾ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದ!

ಸಾರಾಂಶ

*ಭಾರತದ ಸ್ವದೇಶಿ ನ್ಯಾವಿಗೇಷನ್‌ ಸಿಸ್ಟಮ್‌ ನಾವಿಕ್‌ *ಸೇವೆ ಉತ್ತಮೊಳಿಸಲು ಒಪ್ಪೋ ಜತೆ ಒಪ್ಪಂದ *ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (R&D)ಹೂಡಿಕೆ *OPPOದ ಎಲ್ಲ ಹೊಸ ಮೊಬೈಲ್‌ನಲ್ಲೂ NavIC

ನವದೆಹಲಿ(ಡಿ, 12) : ನಾವಿಕ್‌ ( NavIC) ಸಂದೇಶ ಸೇವೆಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು (R&D) ಮತ್ತಷ್ಟು ಬಲಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚೀನಾದ ಟೆಕ್‌ ಕಂಪನಿ  Oppo ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಇದಾಗಿದೆ. NavIC ವ್ಯವಸ್ಥೆಯು ಭಾರತೀಯ ಮುಖ್ಯ ಭೂಭಾಗ ಮತ್ತು ಭಾರತೀಯ ಗಡಿಯಾಚೆಗಿನ 1,500 ಕಿಮೀ ವರೆಗಿನ ಪ್ರದೇಶವನ್ನು ಒಳಗೊಂಡಿರುವ ವಿವರವಾದ ಪ್ರಾದೇಶಿಕ ನ್ಯಾವಿಗೇಷನ್ ಸೇವೆಗಳನ್ನು ಒದಗಿಸುತ್ತದೆ. PNT (Position, Navigation and Timing) ಸೇವೆಗಳನ್ನು ಒದಗಿಸುವುದರ ಜತೆಗೆ  NavIC ಕಿರು ಸಂದೇಶಗಳನ್ನು ( short messages) ಪ್ರಸಾರ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

ಈ ಮೆಸೇಜಿಂಗ್ ಸೇವೆಯನ್ನು ಮುಖ್ಯವಾಗಿ ಸಾಗರಗಳಲ್ಲಿ, ಕಳಪೆ ಅಥವಾ ಸಂವಹನವಿಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯ ಎಚ್ಚರಿಕೆಯ (safety-of-life alerts) ಸಂದೇಶಗಳನ್ನು ಪ್ರಸಾರ ಮಾಡಲು ಬಳಸಲಾಗುತ್ತದೆ. ಈ ಒಪ್ಪಂದದ ಪ್ರಕಾರ ಇಸ್ರೋ ಮತ್ತು ಒಪ್ಪೋ ಇಂಡಿಯಾವು NavIC ಸಂದೇಶ ಸೇವೆಗಳ ತಾಂತ್ರಿಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿವೆ.  ಭಾರತೀಯ ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಹ್ಯಾಂಡ್‌ಸೆಟ್ ಪ್ಲಾಟ್‌ಫಾರ್ಮ್‌ನೊಂದಿಗೆ NavIC ಸಂದೇಶ ಸೇವೆಯನ್ನು ನೀಡಲಿದೆ. ಈ ಮೂಲಕ ಸುಧಾರಿತ ನ್ಯಾವಿಗೇಷನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ.

OPPOದ ಎಲ್ಲ ಹೊಸ ಮೊಬೈಲ್‌ನಲ್ಲೂ NavIC

Oppo ಇಂಡಿಯಾ ತನ್ನ ಉತ್ಪಾದನಾ ಘಟಕವನ್ನು ನೋಯ್ಡಾದಲ್ಲಿ ಮತ್ತು R&D ಕೇಂದ್ರವನ್ನು ಹೈದರಾಬಾದ್‌ನಲ್ಲಿ ಹೊಂದಿದ್ದು "ಒಪ್ಪೋ ಇಂಡಿಯಾ ಬಿಡುಗಡೆ ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ NavIC ಕಿರು ಸಂದೇಶ ಅಪ್ಲಿಕೇಶನ್ ಇನ್ಸ್ಟಾಲ್‌ ಮಾಡಲಾಗುವುದು. ಇದು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನವಾಗಿದೆ. ಈ ಒಪ್ಪಂದವು ISRO ಮತ್ತು Oppo ಇಂಡಿಯಾ ನಡುವಿನ ಭವಿಷ್ಯದ ಸಹಯೋಗಗಳಿಗೆ  ದಾರಿ ಮಾಡಿಕೊಡುತ್ತದೆ" ಎಂದು Oppo ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.‌

Oppo Find N: ಡಿ. 15 ರಂದು ಬಿಡುಗಡೆಗೆ ಸಿದ್ಧವಾಗಿದೆ ಒಪ್ಪೊ ಮೊದಲ ಫೋಲ್ಡೇಬಲ್ ಫೋನ್

"ಇಸ್ರೋ ಕಾರ್ಯದರ್ಶಿ ಕೆ ಶಿವನ್  ಅವರು ತಮ್ಮ ನವೀನ R&D ಉಪಕ್ರಮಗಳ ಮೂಲಕ NavIC ಅಪ್ಲಿಕೇಶನ್ ಅನ್ನು ವಿಸ್ತರಿಸುವಲ್ಲಿ ಒಪ್ಪೋ ಇಂಡೀಯಾದ ಪ್ರಯತ್ನಗಳನ್ನು ಶ್ಲಾಘಿಸಿದರು. ಮುಂಬರುವ ಎಲ್ಲಾ ಉತ್ಪನ್ನಗಳಲ್ಲಿ NavIC ಅಪ್ಲಿಕೇಶನ್ ಸೇರಿಸಲು ಒಪ್ಪೋ ಅನ್ನು ಒತ್ತಾಯಿಸಿದರು" ಎಂದು ಹೇಳಿಕೆ ತಿಳಿಸಿದೆ.

 

 

"ನಮ್ಮ ಇತ್ತೀಚಿನ  ಒಪ್ಪಂದದ ಪ್ರಕಾರ, NavIC ಅಪ್ಲಿಕೇಶನ್‌ನ ಬಳಕೆದಾರರಿಗೆ ತಡೆರಹಿತ ಅನುಭವವನ್ನು ಒದಗಿಸಲಿದೆ. ಇದಕ್ಕಾಗಿ ನಮ್ಮ ಅತ್ಯುತ್ತಮ  ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳೊಂದಿಗೆ ನಾವು ISRO ಅನ್ನು ಬೆಂಬಲಿಸುತ್ತೇವೆ. ಮೇಕ್ ಇನ್ ಇಂಡಿಯಾದತ್ತ ನಮ್ಮ ದೃಷ್ಟಿಗೆ ಅನುಗುಣವಾಗಿ, OPPOದ  ಅನುಭವಿ ಆರ್ & ಡಿ ತಂಡ  ಉತ್ಪನ್ನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ವಿಸ್ತರಿಸಲು  ಹೂಡಿಕೆ ಮಾಡುತ್ತದೆ" ಎಂದು ಒಪ್ಪೋ ಇಂಡಿಯಾ ಉಪಾಧ್ಯಕ್ಷ, ಭಾರತದ ಆರ್ & ಡಿ ಮುಖ್ಯಸ್ಥ ತಸ್ಲೀಮ್ ಆರಿಫ್ ಹೇಳಿದ್ದಾರೆ.

ISRO Technology: ಬರಲಿದೆ ತನ್ನನ್ನು ತಾನೇ ಭಕ್ಷಿಸೋ ರಾಕೆಟ್!

ಅಂತರಿಕ್ಷ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (IISRO) ಈಗ ಅಂತರತಾರಾ ಯಾನಕ್ಕ(Interstellar) ಸಂಬಂಧಿಸಿ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಹಾಲಿವುಡ್ (Hollywood)) ಸೈನ್ಸ್ ಫಿಕ್ಸನ್ (Scii-fi) ಫಿಲ್ಮ್ಗಳಲ್ಲಿ ತೋರಿಸೋ ಅಸಾಧ್ಯವೆನಿಸೋ ತಂತ್ರಜ್ಞಾನಗಳನ್ನು ಇಸ್ರೋ ನಿಜವಾಗಿಸಲು ಹೊರಟಿದೆ. ತನ್ನನ್ನೇ ತಾನು ತಿನ್ನೋ ರಾಕೆಟ್ (Rocket) ಹಾಗೂ ತನ್ನನ್ನೇ ತಾನು ಸುಟ್ಟುಕೊಂಡು ನಾಶವಾಗೋ ಉಪಗ್ರಹ (Satellite))… ಹಾಲಿವುಡ್ ಸಿನಿಮಾಗಳಲ್ಲಷ್ಟೇ ಕಂಡಿರೋ ಇಂಥ ದೃಶ್ಯಗಳನ್ನು ನಿಜವಾಗಿಸಲು ಹೊರಟಿರೋ ಇಸ್ರೋ, ಇಂಥ 46 ಅಪ್ರತಿಮ ವಿನೂತನ ತಂತ್ರಜ್ಞಾನಗಳನ್ನು ತನ್ನ ಸಂಶೋಧನಾ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ