ಚಂದ್ರನ ಕುಳಿಗಳ ಚಿತ್ರ ಸೆರೆಹಿಡಿದ ಚಂದ್ರಯಾನ-2!

By Web Desk  |  First Published Aug 27, 2019, 9:14 AM IST

ಚಂದ್ರನ ಕುಳಿಗಳ ಚಿತ್ರ ಸೆರೆಹಿಡಿದ ಚಂದ್ರಯಾನ-2| ನೌಕೆಯಲ್ಲಿ ಅಳವಡಿಸಲಾಗಿರುವ ಭೂ ಪ್ರದೇಶ ಮಾಪನಾ ಕ್ಯಾಮರಾ-2 ಚಂದ್ರನ ಮೇಲ್ಮೈನ ಹಲವು ಫೋಟೋಗಳನ್ನು ಸೆರೆ ಹಿಡಿದಿದೆ


ಬೆಂಗಳೂರು[ಆ.27]: ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಇಸ್ರೋದ ಚಂದ್ರಯಾನ-2 ನೌಕೆ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ನೌಕೆಯಲ್ಲಿ ಅಳವಡಿಸಲಾಗಿರುವ ಭೂ ಪ್ರದೇಶ ಮಾಪನಾ ಕ್ಯಾಮರಾ-2 ಚಂದ್ರನ ಮೇಲ್ಮೈನ ಹಲವು ಫೋಟೋಗಳನ್ನು ಸೆರೆ ಹಿಡಿದಿದ್ದು, ಇಸ್ರೋ ಅವುಗಳನ್ನು ಸೋಮವಾರ ಬಿಡುಗಡೆ ಮಾಡಿದೆ.

ಚಂದಮಾಮ ಸೆರೆಸಿಕ್ಕ: ಚಂದ್ರಯಾನ-2 ಕ್ಲಿಕ್ಕಿಸಿದ ಫೋಟೋ ಚೊಕ್ಕ!

Tap to resize

Latest Videos

undefined

ಚಂದ್ರನಿಂದ 4375 ಕಿ.ಮೀ. ದೂರದಿಂದ ಸೆರೆ ಹಿಡಿಯಲಾಗಿರುವ ಈ ಚಿತ್ರಗಳಲ್ಲಿ ಚಂದ್ರನಲ್ಲಿರುವ ಸಮರ್‌ಫೀಲ್ಡ್‌, ಕ್ರಿಕ್‌ವುಡ್‌, ಜಾಕ್ಸನ್‌, ಮಿತ್ರಾ, ಮಾಚ್‌ ಮತ್ತು ಕೊರೊಲೆವ್‌, ಪ್ಲಾಸ್ಕೆಟ್‌ ಕುಳಿಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.


Lunar surface imaged by Terrain Mapping Camera-2(TMC-2) of on August 23 at an altitude of about 4375 km showing craters such as Jackson, Mach, Korolev and Mitra (In the name of Prof. Sisir Kumar Mitra)

For more images please visit https://t.co/ElNS4qIBvh pic.twitter.com/T31bFh102v

— ISRO (@isro)

ಚಂದ್ರಯಾನ-2 ಕಂಡಂತೆ ವಸುಧೆ: ತಾಯಿಯ ಮಡಿಲಂತೆ ಕಾಣದೆ?

ಚಂದ್ರಯಾನ- 2 ಸೆರೆ ಹಿಡಿದ ಮೊದಲ ಚಿತ್ರವನ್ನು ಆ.22ರಂದು ಇಸ್ರೋ ಬಿಡುಗಡೆ ಮಾಡಿತ್ತು. ಸೆ.2ರಂದು ಇನ್ನೊಂದು ಪ್ರಮುಖ ಸಾಧನೆಗೆ ಇಸ್ರೋ ಸಾಕ್ಷಿಯಾಗಲಿದ್ದು, ವಿಕ್ರಮ್‌ ಲ್ಯಾಂಡರ್‌, ಆರ್ಬಿಟರ್‌ನಿಂದ ಪ್ರತ್ಯೇಕಗೊಳ್ಳಲಿದೆ. ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ.

click me!