ಬೆಂಗಳೂರು(ಆ.22): ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿರುವ ಇಸ್ರೋದ ಚಂದ್ರಯಾನ-2 ನೌಕೆ, ಚಂದ್ರನ ಮೊದಲ ಪೂರ್ಣ ಪ್ರಮಾಣದ ಫೋಟೋ ಕಳುಹಿಸಿದೆ. 

ಚಂದ್ರಯಾನ-2 ಸೆರೆ ಹಿಡಿದಿರುವ ಚಂದ್ರನ ಫೋಟೋವನ್ನು ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್’ನಲ್ಲಿ ಪ್ರಕಟಿಸಿದೆ.

ಚಂದ್ರನ ಮೇಲ್ಮೈಯಿಂದ ಕೇವಲ 26750 ಕಿ.ಮೀ ದೂರವಿರುವ ಚಂದ್ರಯಾನ-2 ಚಂದ್ರನ ಸ್ಪಷ್ಟ ಚಿತ್ರ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. 

ಚಿತ್ರದಲ್ಲಿ ಚಂದ್ರನ ಮೇಲ್ಮೈ ಇರುವ ಅಪೋಲೋ ಕುಳಿಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಇದನ್ನು ಇಸ್ರೋ ವಿಶೇಷವಾಗಿ ಗುರಿತಿಸಿ ಫೋಟೋ ಶೇರ್ ಮಾಡಿದೆ.