
ನವದೆಹಲಿ(ಅ.05): ಚಂದ್ರಯಾನ-2 ಯೋಜನೆಯ ಸಾಫಲ್ಯ-ವೈಫಲ್ಯಗಳ ಕುರಿತು ಖಗೋಳ ವಿಜ್ಞಾನ ಜಗತ್ತಿನಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಚಂದ್ರಯಾನ-2 ನೌಕೆಯ ಆರ್ಬಿಟರ್ ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಚಂಧ್ರಯಾನ-2 ಆರ್ಬಿಟರ್ ತನ್ನ ಹೈ ರೆಸಲ್ಯೂಶನ್ ಕ್ಯಾಮೆರಾ (OHRC)ದಿಂದ ಚಂದ್ರನ ಮೇಲ್ಮೈ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.
ಚಂದ್ರನ ಮೇಲ್ಮೈನಿಂದ 100 ಕಿಮೀ ಎತ್ತರದಿಂದ ಫೋಟೋ ಕ್ಲಿಕ್ಕಿಸಿರುವ ಆರ್ಬಿಟರ್, ಚಂದ್ರನ ಆಯ್ದ ಪ್ರದೇಶಗಳ ಸ್ಥಳಾಕೃತಿ ಅಧ್ಯಯನಕ್ಕೆ ಪೂರಕವಾಗಿ ಫೋಟೋಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿರುವ ಬೊಗುಸ್ಲಾವ್ಸ್ಕಿ ಕುಳಿಗಳನ್ನು OHRC ಸೆರೆ ಹಿಡಿದಿದೆ. ಇದು ಸುಮಾರು 14 ಕಿ.ಮೀ ವ್ಯಾಸ ಮತ್ತು 3 ಕಿ.ಮೀ ಆಳವಾಗಿವೆ. ಚಂದ್ರನ ಮೇಲ್ಮೈಯಲ್ಲಿ ಅಸಂಖ್ಯ ಕುಳಿಗಳು ಹಾಗೂ ಬೃಹತ್ ಬಂಡೆಗಳಿರುವುದು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.