ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ | ಜಿಸ್ಯಾಟ್-30 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ| ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ| ಅಮೆರಿಕದ ಎರೇನ್ 5 ಎಂಬ ರಾಕೆಟ್ ವಾಹಕದ ಮೂಲಕ ಉಡಾವಣೆ| 3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹ|
ಬೆಂಗಳೂರು(ಜ.14): ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಜಿಸ್ಯಾಟ್-30 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
successfully separated from the upper stage of pic.twitter.com/XraPhj37Xl
— ISRO (@isro)
undefined
ಅಮೆರಿಕದ ಎರೇನ್ 5 ಎಂಬ ರಾಕೆಟ್ ವಾಹಕದ ಮೂಲಕ ಜಿಸ್ಯಾಟ್-30 ಉಪಗ್ರಹ ಯಶಸ್ವಿ ಉಡಾವಣೆ ಕಂಡಿದೆ.
3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಸೆಲ್ಯೂರಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ನೀಡಲಿದೆ.
ಜ.17ಕ್ಕೆ ಇಸ್ರೋದ ಜಿಸ್ಯಾಟ್-30 ಉಪಗ್ರಹ ಉಡಾವಣೆ!
ಮುಂದಿನ 15 ವರ್ಷಗಳವರೆಗೆ ಜಿಸ್ಯಾಟ್-30 ಉಪಗ್ರಹ ಈ ಸೇವೆಗಳನ್ನು ನೀಡಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.