HP ಅಪ್‌ಡೇಟೆಡ್ ವರ್ಶನ್‌ ಸ್ಪೆಕ್ಟರ್‌ 360* 13 ಲ್ಯಾಪ್‌ಟಾಪ್ ಬಿಡುಗಡೆ!

Suvarna News   | Asianet News
Published : Jan 13, 2020, 09:00 PM IST
HP ಅಪ್‌ಡೇಟೆಡ್ ವರ್ಶನ್‌ ಸ್ಪೆಕ್ಟರ್‌  360* 13 ಲ್ಯಾಪ್‌ಟಾಪ್ ಬಿಡುಗಡೆ!

ಸಾರಾಂಶ

HP ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್, ಇಂಟೆಲ್ ಕೋರ್ 10 ಪ್ರೊಸೆಸರ್ ಸೇರಿದಂತೆ ಹಲವು ವಿಶೇಷತೆಗಳ ಮುಂದಿನ ಪೀಳಿಗೆಯ ಅಪ್‌ಡೇಟೆಡ್ ವರ್ಶನ್‌ನ ಸ್ಪೆಕ್ಟರ್‌  360* 13 ಕನ್ವರ್ಟೆಬಲ್ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಮುಂಬೈ(ಜ.13): ಲ್ಯಾಪ್‌ಟಾಪ್, ಕಂಪ್ಯೂಟರ್‌ನಲ್ಲಿ HP(Hewlett-Packard) ಕಂಪನಿ ಜನಮನ್ನಣೆ ಗಳಿಸಿದೆ. ಗುಣಮಟ್ಟತೆಯಲ್ಲಿ ರಾಜಿಯಾಗದ ಹೆಚ್‌ಪಿ, ಪ್ರತಿ ಭಾರಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ಇದೀಗ ಮುಂದಿನ ಪೀಳಿಗೆಯ ಅಪ್‌ಡೇಟೆಡ್ ವರ್ಶನ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. 

ಇದನ್ನೂ ಓದಿ:ಒನ್‌ಪ್ಲಸ್ ಟಿವಿಯಲ್ಲಿ ಹೊಸ ಸೌಲಭ್ಯ, ಕ್ಯಾಶ್‌ಬ್ಯಾಕ್ ಆಫರ್

ಮುಂದಿನ ಪೀಳಿಗೆಯ ಅಪ್‌ಡೇಟೆಡ್ ವರ್ಶನ್‌ನ ಸ್ಪೆಕ್ಟರ್‌  360* 13 ಕನ್ವರ್ಟೆಬಲ್ ಲ್ಯಾಪ್‌ಟಾಪ್ ಅನ್ನು ಹೆಚ್‌ಪಿ ಬಿಡುಗಡೆ ಮಾಡಿದೆ. ಇದರ ಹಳೆಯ ವರ್ಶನ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಪ್ರೀಮಿಯಂ ವಿನ್ಯಾಸದ ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ 10 ಪ್ರೊಸೆಸರ್ ಹೊಂದಿದೆ. 

ಹೀಗಾಗಿ ವೇಗವಾಗಿ ಕೆಲಸ ಮಾಡಬಲ್ಲದು. ಹಿಂದಿನ ವರ್ಶನ್‌ಗಿಂತ  ಶೇ.13 ರಷ್ಟು ಕಿರಿದಾಗಿದೆ. ಐರಿಸ್ ಪ್ಲಸ್ ಗ್ರಾಪಿಕ್ಸ್ ಹೊಂದಿರೋದು ಮತ್ತೊಂದು ವಿಶೇಷ. 4 ಕೆ ಒಎಲ್‌ಇಡಿ ಸಪೋರ್ಟ್‌ನೊಂದಿಗೆ ಎಚ್‌ಡಿ ಡಿಸ್‌ಪ್ಲೇ ಇದೆ. 13.3 ಇಂಚಿನ ಡಿಸ್ಪ್ಲೇ ಇದೆ. ಒಮ್ಮೆ ಚಾರ್ಜ್ ಮಾಡಿದರೆ 22 ಗಂಟೆಗಳ ಕಾಲ ಬಳಸಬಹುದು. ಬೆಲೆ: 99, 990 ರು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ