ಇನ್ಮುಂದೆ ನಿಮ್ಮ ಪೋಸ್ಟ್‌ಗೆ ಸಿಕ್ಕಿರುವ ಲೈಕ್ ಲೆಕ್ಕ ಸಿಗಲ್ಲ?

By Web Desk  |  First Published May 2, 2019, 4:51 PM IST

ಪೋಸ್ಟುಮಾಡುವ ಯಾವ ಫೋಟೋ, ವಿಡಿಯೋಗಳಿಗೂ ಎಷ್ಟುಲೈಕ್‌ ಬಿತ್ತು ಅನ್ನೋ ಲೆಕ್ಕಾಚಾರ ಗೊತ್ತಾಗಲ್ಲ!  ಇನ್ಸ್ಟಾಗ್ರಾಂ ತರಲಿದೆ ಹೊಸ ಫೀಚರ್! ಇನ್‌ಸ್ಟಾಪೋಸ್ಟ್‌ನಲ್ಲಿ ಲೈಕ್‌ಗಳು ಕಾಣಿಸದೇ ಇದ್ರೆ ಒಳ್ಳೇದಾ?
 


ಇಷ್ಟುದಿನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ, ವಿಡಿಯೋ ಪೋಸ್ಟ್‌ ಮಾಡಿ ಲೈಕು ಎಷ್ಟು ಬಿತ್ತು ಅಂತ ನೋಡ್ತಿದ್ರಿ ತಾನೇ. ಇನ್ನು ಮುಂದೆ ಆ ಲೈಕುಗಳನ್ನೇ ಕಾಣಿಸದೇ ಇರುವ ಹಾಗೆ ಮಾಡಿದರೆ ಹೇಗೆ ಅಂತ ಇನ್‌ಸ್ಟಾಗ್ರಾಮ್‌ ಯೋಚನೆ ಮಾಡಲು ಶುರು ಮಾಡಿದೆ. ಅವರ ಈ ಯೋಜನೆ ಸರಿ ಹೋದರೆ ಇನ್ನು ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟುಮಾಡುವ ಯಾವ ಫೋಟೋ, ವಿಡಿಯೋಗಳಿಗೂ ಎಷ್ಟುಲೈಕ್‌ ಬಿತ್ತು ಅನ್ನೋ ಲೆಕ್ಕಾಚಾರ ಗೊತ್ತಾಗಲ್ಲ.

ಇದನ್ನು ಹೇಳಿದ್ದು ಇನ್‌ಸ್ಟಾಗ್ರಾಮ್‌ ಚೀಫ್‌ ಆ್ಯಡಂ ಮೊಸ್ಸೇರಿ. ಮುಂದಿನ ಕೆಲವೇ ದಿನಗಳಲ್ಲಿ ಕೆನಡಾದಲ್ಲಿ ಪರೀಕ್ಷಾರ್ಥವಾಗಿ ಈ ಯೋಜನೆ ಜಾರಿಗೆ ಬರಲಿದೆ. ಅಲ್ಲಿ ಯಶಸ್ವಿಯಾದರೆ ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ಈ ಯೋಚನೆ ಜಾರಿಗೆ ಬರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

Tap to resize

Latest Videos

ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ಶ್ಯೋಮಿ ಹೊಸ ಫೋನ್; 12 ಸೆಕೆಂಡ್‌ನಲ್ಲಿ ಸ್ಟಾಕ್ ಖತಂ!

ಇಂಟರೆಸ್ಟಿಂಗ್‌ ಅಂದ್ರೆ ಇಂಥದ್ದೊಂದು ಹೆಜ್ಜೆ ಇಡುವ ಮನಸ್ಸು ಮಾಡುವುದಕ್ಕೆ ಒಂದು ಒಳ್ಳೆಯ ಕಾರಣವಿದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ ಬಳಸುವವರ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲದೇ ಎಲ್ಲರೂ ಪೋಸ್ಟು, ವಿಡಿಯೋ ಹಾಕಿ ಎಷ್ಟುಲೈಕು ಬಿತ್ತು ಅಂತ ನೋಡುತ್ತಲೇ ಇರುತ್ತಾರೆ. ಕಡಿಮೆ ಲೈಕು ಬಿದ್ದರೆ ಟೆನ್ಷನ್‌ ತಪ್ಪಿದ್ದಲ್ಲ. ಇನ್ನೂ ಲೈಕ್ಸ್‌ ಬೇಕು ಅಂತ ಬಯಸುತ್ತಾರೆ. ಕೆಲವರಂತೂ ಬಾಯಿಬಿಟ್ಟೇ ಲೈಕ್ಸ್‌ ಬೇಕು ಅಂತ ಹೇಳಿದ ಉದಾಹರಣೆಗಳು ಇಲ್ಲದೇ ಇಲ್ಲ. ಕಡಿಮೆ ಲೈಕು ಬಿದ್ದರೆ ಬೇರೆಯವರ ಮುಂದೆ ಅವಮಾನ ಆಗುತ್ತದೆ ಅನ್ನುವುದೇ ಇಲ್ಲಿನ ಸಮಸ್ಯೆ. ಅವರಿಗೆ ಅಷ್ಟು ಲೈಕು ಬಿತ್ತು, ನನಗೆ ಇಷ್ಟೇ ಲೈಕುಗಳು ಎಂದು ನೋವು ಪಡುವವರ ಕಷ್ಟಭಾರಿ ದೊಡ್ಡದು. ಲೈಕುಗಳ ಲೆಕ್ಕಾಚಾರ ಅನೇಕರ ನಿದ್ದೆಗೆಡಿಸಿದೆ. ಮನಸ್ಸು ಕೆಡಿಸಿದೆ. ಒತ್ತಡದ ಜೀವನ ನಡೆಸುವಂತಾಗಿದೆ. ಇಂಥದ್ದೆಲ್ಲಾ ನಡೆಯಬಾರದು, ಜನ ಆರಾಮಾಗಿ ಇನ್‌ಸ್ಟಾಗ್ರಾಮ್‌ ಬಳಸುವಂತಾಗಬೇಕು ಎಂಬ ಸದಾಶಯದಿಂದ ಇನ್‌ಸ್ಟಾಗ್ರಾಮ್‌ ಟೀಮು ಈ ಲೈಕ್‌ಗಳ ಅಂಕಿ ಸಂಖ್ಯೆಯನ್ನು ಜಗತ್ತಿಗೆ ತೋರಿಸದೇ ಇರುವಂತೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಬೇರೆಯವರಿಗೆ ಲೈಕುಗಳು ಕಾಣಿಸಿದರಷ್ಟೇ ಅಲ್ವಾ ಒತ್ತಡ. ಲೈಕುಗಳು ಕಾಣಿಸದೇ ಇದ್ರೆ ಸಮಸ್ಯೆಯೇ ಇಲ್ವಲ್ಲಾ.

ಹಾಗಂತ ಯಾರೆಲ್ಲಾ ಲೈಕುಗಳು ಒತ್ತಿದರು ಅನ್ನುವುದು ಗೊತ್ತಾಗಲ್ಲ ಅಂತಿಲ್ಲ. ನೀವು ಪೋಸ್ಟು ಹಾಕಿದರೆ ನಿಮಗೆ ಯಾರು ಲೈಕ್‌ ಒತ್ತಿದರು ಅನ್ನುವುದು ಗೊತ್ತಾಗುತ್ತದೆ. ಅಲ್ಲದೇ ಎಷ್ಟುಲೈಕು ಬಿತ್ತು ಅನ್ನುವುದು ನಿಮಗಷ್ಟೇ ತಿಳಿಯುತ್ತದೆ.

‘ಇನ್‌ಸ್ಟಾಗ್ರಾಮ್‌ ಪೋಸ್ಟುಗಳನ್ನು ಯಾರೂ ಕಾಂಪಿಟಿಷನ್‌ ಅಂತ ಭಾವಿಸಬಾರದು. ಅವರಿಗಿಂತ ನಾನು ಜಾಸ್ತಿ ಲೈಕು ತೆಗೆದುಕೊಳ್ಳಬೇಕು ಎಂಬ ಭಾವನೆಯೇ ಬರಬಾರದು. ಒತ್ತಡವಿಲ್ಲದ ಸೋಷಲ್‌ ಮೀಡಿಯಾ ಎಂದು ಪರಿವರ್ತಿಸಬೇಕು ಅನ್ನುವುದು ನಮ್ಮ ಆಶಯ’ ಅಂತ ಇನ್‌ಸ್ಟಾಹೆಡ್‌ ಮೊಸ್ಸೇರಿ ಹೇಳಿದ್ದಾರೆ. ಅವರ ಮಾತು ಕೇಳಿದರೆ ಬಹಳ ಒಳ್ಳೆಯ ವಿಷಯ ಅನ್ನಿಸುತ್ತದೆ. ಯಾಕೆ ಅಂದ್ರೆ ಕಳೆದ ಒಂದು ವರ್ಷದ ಹಿಂದೆ ಬ್ರಿಟನ್‌ ಸಂಸ್ಥೆಯೊಂದು ಮಾಡಿದ ಅಧ್ಯಯನದ ಪ್ರಕಾರ ಮಾನಸಿಕ ಒತ್ತಡವನ್ನು ಜಾಸ್ತಿ ಮಾಡುವ ಐದು ಸೋಷಲ್‌ ಮೀಡಿಯಾ ಪ್ಲಾಟುಫಾರ್ಮುಗಳ ಲಿಸ್ಟಿನಲ್ಲಿ ಇನ್‌ಸ್ಟಾಗ್ರಾಮ್‌ ಹೆಸರು ಕೂಡ ಇತ್ತು. ಫೋಮೋ ಅಂದ್ರೆ ಫಿಯರ್‌ ಆಫ್‌ ಮಿಸ್ಸಿಂಗ್‌ ಔಟ್‌ ಉಂಟುಮಾಡುತ್ತದೆ ಎಂದು ಅದರಲ್ಲಿ ಹೇಳಲಾಗಿತ್ತು. ಹಾಗಾಗಿ ಇನ್‌ಸ್ಟಾಗ್ರಾಮ್‌ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಆದರೆ ಈ ನಿರ್ಧಾರ ಸಕ್ಸೆಸ್‌ ಆಗುವುದು ಸ್ವಲ್ಪ ಕಷ್ಟವಿದೆ. ಲೈಕುಗಳ ನಂಬರ್‌ಗಳಿಲ್ಲದೆ ಬಿಸಿನೆಸ್‌ ಪ್ರಪಂಚ ನಡೆಯುವುದಿಲ್ಲ. ಹಾಗಾಗಿ ಏನು ಮಾಡುತ್ತಾರೋ ಕಾದು ನೋಡಬೇಕಷ್ಟೇ.

ಇದನ್ನೂ ಓದಿ: ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?

click me!