ಭಾರತೀಯರು ದಿನಕ್ಕೆ 5 ಗಂಟೆ ಫೋನ್‌ನಲ್ಲೇ ಕಳೆಯುತ್ತಾರೆ: ಸಂಶೋಧನೆಯ ಆಘಾತಕಾರಿ ಮಾಹಿತಿ ಬಹಿರಂಗ!

ಇತ್ತೀಚಿನ ಅಧ್ಯಯನದ ಪ್ರಕಾರ ಭಾರತೀಯರು ಸೋಶಿಯಲ್‌ ಮೀಡಿಯಾ, ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗಾಗಿ ದಿನಕ್ಕೆ 5 ಗಂಟೆಗಳ ಕಾಲ ಮೊಬೈಲ್ ಬಳಸುತ್ತಾರೆ. ಕೈಗೆಟಕುವ ಇಂಟರ್ನೆಟ್‌ನಿಂದಾಗಿ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ವೇದಿಕೆಗಳು ಟೆಲಿವಿಷನ್ ಅನ್ನು ಹಿಂದಿಕ್ಕಿವೆ.


ಬೆಂಗಳೂರು (ಮಾ.29): ಭಾರತದಲ್ಲಿ 1.2 ಶತಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು 950 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಕೇವಲ 12 ಸೆಂಟ್ಸ್‌ಗೆ ಒಂದು ಜಿಬಿ ಡೇಟಾ ಸಿಗುತ್ತದೆ. ಕಡಿಮೆ ಬೆಲೆಯ ಮೊಬೈಲ್ ಮತ್ತು ಅಗ್ಗದ ಇಂಟರ್ನೆಟ್ ಪ್ಯಾಕೇಜ್‌ಗಳು ದೇಶದ ಡಿಜಿಟಲೀಕರಣಕ್ಕೆ ಕಾರಣವಾಗಿವೆ. ಆದರೆ, ಸುಲಭವಾಗಿ ಇಂಟರ್ನೆಟ್ ಸಿಗುವುದರಿಂದ ಅನೇಕ ಭಾರತೀಯರು ಫೋನ್‌ಗೆ ದಾಸರಾಗಿದ್ದಾರೆ ಮತ್ತು ಗಂಟೆಗಟ್ಟಲೆ ಅದರಲ್ಲಿ ಮುಳುಗಿಹೋಗಿದ್ದಾರೆ ಎನ್ನುವ ಆಘಾತಕಾರಿ ವರದಿ ಕೂಡ ಹೊರಬಂದಿದೆ.

ಜಾಗತಿಕ ನಿರ್ವಹಣಾ ಸಂಸ್ಥೆ EY ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಭಾರತೀಯರು ಮೊದಲಿಗಿಂತ ಹೆಚ್ಚು ಸಮಯ ತಮ್ಮ ಮೊಬೈಲ್‌ಗಳಲ್ಲಿ ಕಳೆಯುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತೀಯ ಬಳಕೆದಾರರು ಸಾಮಾಜಿಕ ಜಾಲತಾಣ, ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ಗಾಗಿ ದಿನಕ್ಕೆ ಐದು ಗಂಟೆಗಳ ಕಾಲ ಕಳೆಯುತ್ತಾರೆ. ಕೈಗೆಟಕುವ ಇಂಟರ್ನೆಟ್ ಮತ್ತು ಹೆಚ್ಚುತ್ತಿರುವ ಡಿಜಿಟಲ್ ಪ್ರವೇಶದಿಂದಾಗಿ ಮಾಧ್ಯಮ ಬಳಕೆಯು ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಅಧ್ಯಯನವು ತೋರಿಸುತ್ತದೆ.

Latest Videos

EY ವಿಶ್ಲೇಷಣೆಯ ಪ್ರಕಾರ, ಹೆಚ್ಚುತ್ತಿರುವ ಡಿಜಿಟಲ್ ವೇದಿಕೆಗಳು ಭಾರತದ ಮಾಧ್ಯಮ ಮತ್ತು ಮನರಂಜನಾ ವ್ಯವಹಾರದಲ್ಲಿ ಟೆಲಿವಿಷನ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿವೆ. 2024 ರಲ್ಲಿ ಇದರ ಮೌಲ್ಯ 2.5 ಟ್ರಿಲಿಯನ್ ರೂಪಾಯಿ ($29.1 ಬಿಲಿಯನ್) ಎಂದು ಅಂದಾಜಿಸಲಾಗಿದೆ.

ಈ ನಡುವೆ, ಸೋಶಿಯಲ್‌ ಮೀಡಿಯಾ, ಸ್ಟ್ರೀಮಿಂಗ್ ವೀಡಿಯೊಗಳು ಮತ್ತು ಗೇಮಿಂಗ್ ಭಾರತೀಯರ ಸ್ಕ್ರೀನ್ ಟೈಮ್ ಅನ್ನು ಆಕ್ರಮಿಸಿಕೊಂಡಿವೆ. ಅವರು ಪ್ರತಿದಿನ ತಮ್ಮ ಫೋನ್‌ಗಳಲ್ಲಿ ಕಳೆಯುವ ಐದು ಗಂಟೆಗಳಲ್ಲಿ ಸುಮಾರು 70% ಇದರಲ್ಲೇ ಕಳೆಯುತ್ತಾರೆ.

ಸಂಶೋಧನೆಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿದೆ. 2024 ರಲ್ಲಿ ಜನರು 1.1 ಟ್ರಿಲಿಯನ್ ಗಂಟೆಗಳನ್ನು ಕಳೆದಿದ್ದಾರೆ. ಬ್ರೆಜಿಲ್ ಮತ್ತು ಇಂಡೋನೇಷ್ಯಾ ನಂತರ ಅತಿ ಹೆಚ್ಚು ಮೊಬೈಲ್ ಬಳಸುವವರಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆಜಾನ್ ಮತ್ತು ಮೆಟಾದಂತಹ ಅಂತರರಾಷ್ಟ್ರೀಯ ಐಟಿ ದೈತ್ಯರು ತಮ್ಮ ಕಂಪನಿಗಳನ್ನು ನಿರ್ಮಿಸಲು ಮತ್ತು ಬೆಳೆಯುತ್ತಿರುವ ಡಿಜಿಟಲ್ ಮಾರುಕಟ್ಟೆಯನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ. ಇದರಿಂದಾಗಿ ಎಲೋನ್ ಮಸ್ಕ್ ಮತ್ತು ಮುಖೇಶ್ ಅಂಬಾನಿಯಂತಹ ಬಿಲಿಯನೇರ್‌ಗಳ ನಡುವಿನ ಸ್ಪರ್ಧೆಯೂ ಹೆಚ್ಚಾಗಿದೆ.

ಟೆಲಿಕಾಂ ಕಂಪನಿಗಳಿಗೆ 1 ತಿಂಗಳೆಂದರೆ 28 ದಿನ ಯಾಕೆ? ವ್ಯಾಲಿಟಿಡಿ ಪ್ಲಾನ್ ಸೀಕ್ರೆಟ್

ಡಿಜಿಟಲ್ ಮಾಧ್ಯಮ ಬಳಕೆ ಹೆಚ್ಚುತ್ತಿರುವ ಕಾರಣ ಸಾಂಪ್ರದಾಯಿಕ ಮಾಧ್ಯಮಗಳಾದ ಟೆಲಿವಿಷನ್, ಮುದ್ರಣ ಮತ್ತು ರೇಡಿಯೊ 2024 ರಲ್ಲಿ ಆದಾಯ ಮತ್ತು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿವೆ ಎಂದು ವರದಿ ಹೇಳಿದೆ.

ಏಪ್ರಿಲ್ 1ರಿಂದ ಇವರಿಗೆ ಯುಪಿಐ ಪಾವತಿ ಸೇವೆ ಬಂದ್, ನಿಮ್ಮ ನಂಬರ್ ಇದೆಯಾ ನೋಡಿ

 

click me!