ಭಾರತದ ಹಿರಿಮೆಗೆ ಮತ್ತೊಂದು ಗರಿ; ಆ್ಯಪಲ್‌ಗೆ ಭಾರತೀಯ ಉಪಾಧ್ಯಕ್ಷ!

By Web Desk  |  First Published Jun 29, 2019, 4:59 PM IST

ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಗೂಗಲ್‌ನ ಸುಂದರ್ ಪಿಚೈ ಸಾಲಿಗೆ ಇನ್ನೊರ್ವ ಭಾರತೀಯ; ಆ್ಯಪಲ್ ಕಂಪನಿಯ ಉಪಾಧ್ಯಕ್ಷರಾಗಿ ಉತ್ತರ ಪ್ರದೇಶ ಮೂಲದ ಸಾಬಿಹ್ ಖಾನ್ ನೇಮಕ 


ಬೆಂಗಳೂರು (ಜೂ.29): ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಅಪಾರ. ಜಗತ್ತಿನ ಅತೀ ದೊಡ್ಡ MNCಗಳಲ್ಲಿ ಭಾರತೀಯರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಮೈಕ್ರೋಸಾಫ್ಟ್, ಗೂಗಲ್ ಬಳಿಕ ಆ್ಯಪಲ್ ಕಂಪನಿಯ ಉನ್ನತ ಹುದ್ದೆಗೆ ಭಾರತೀಯನ ನೇಮಕವಾಗಿದೆ.

ಭಾರತೀಯ ಮೂಲದ ಸಾಬೀಹ್ ಖಾನ್‌ರನ್ನು ಸ್ಮಾರ್ಟ್‌ಫೋನ್ ದೈತ್ಯ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿ ನೇಮಿಸಿದೆ.

Latest Videos

undefined

ಉತ್ತರ ಪ್ರದೇಶದ ರಾಂಪುರದವರಾದ ಸಾಬಿಹ್ ಖಾನ್ 1995ರಿಂದ ಆ್ಯಪಲ್ ಕಂಪನಿಯಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಂಪನಿಯ ಆಪರೇಷನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸಾಬಿಹ್ ಖಾನ್ ನೇಮಕ ಬಗ್ಗೆ ಆ್ಯಪಲ್ CEO ಟಿಮ್ ಕುಕ್  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಸಾಬಿಹ್ ಖಾನ್ ಪರಿಶ್ರಮ ಅಸಾಮಾನ್ಯ ಎಂದು ಕುಕ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ನಾಡಿನ ಹಿರಿಮೆಗೆ ಇನ್ನೊಂದು ಗರಿ! ಸಿಲಿಕಾನ್ ಸಿಟಿಯಲ್ಲಿ iPhone 7 ಉತ್ಪಾದನೆ ಶುರು

ರಾಂಪುರದವರಾದ ಸಾಬಿಹ್ ಖಾನ್ ತಂದೆ ಸಯೀದ್ ಖಾನ್  ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಸಾಬಿಹ್ ಕೂಡಾ ಬಾಲ್ಯವನ್ನು ಸಿಂಗಾಪುರದಲ್ಲಿ ಕಳೆದಿದ್ದು, ಅರ್ಥಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಆ್ಯಪಲ್ ಪ್ರಾಡಕ್ಟ್‌ಗಳ ಯೋಜನೆ, ಉತ್ಪಾದನೆ, ಪೂರೈಕೆ, ಲಾಜಿಸ್ಟಿಕ್ ಮತ್ತಿತರ ಕೆಲಸಗಳ ಮೇಲುಸ್ತುವಾರಿ ಸಾಬಿಹ್ ಖಾನ್ ನೋಡಿಕೊಳ್ಳಲಿದ್ದಾರೆ.

ಈಗಾಗಲೇ ಭಾರತೀಯರಾದ ಸತ್ಯ ನಾದೆಲ್ಲಾ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್‌ನ CEO ಆಗಿದ್ದಾರೆ. 2014ರಲ್ಲಿ ಸ್ಟೀವ್ ಬಾಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ CEO ಸ್ಥಾನಕ್ಕೆ ಸತ್ಯಾ ನಾದೆಲ್ಲಾ ಆಯ್ಕೆಯಾಗಿದ್ದರು.

2015ರಲ್ಲಿ ಇನ್ನೋರ್ವ ಭಾರತೀಯ ಸುಂದರ್ ಪಿಚೈ ಟೆಕ್ ದೈತ್ಯ ಗೂಗಲ್ ಕಂಪನಿಯ CEO ಆಗಿ ನೇಮಕವಾಗಿದ್ದಾರೆ. ಸುಂದರ್ ಪಿಚೈ ಬಳಿಕ ಮತ್ತೊಬ್ಬ ಭಾರತೀಯನಿಗೆ ಸಾಫ್ಟ್‌ವೇರ್ ದೈತ್ಯ ಗೂಗಲ್ ಕಂಪನಿಯಲ್ಲಿ ಉನ್ನತ ಹುದ್ದೆ ದೊರೆತಿದೆ.  ಕೇರಳ ಮೂಲದ ಥಾಮಸ್ ಕುರಿಯನ್‌ರನ್ನು  ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

click me!