ಟ್ವಿಟ್ಟರ್‌ ಇಷ್ಟವಾಗದಿದ್ದರೆ 'ಮಾಸ್ಟರ್‌ಬೇಟ್‌'ಡನ್‌ ಆಪ್‌ ಟ್ರೈ ಮಾಡಿ ಎಂದ Elon Musk 

By Sharath Sharma KalagaruFirst Published Nov 8, 2022, 2:51 PM IST
Highlights

Elon Musk to twitter users: ಟ್ವಿಟ್ಟರ್‌ ನಿಮಗೆ ಇಷ್ಟವಾಗದಿದ್ದರೆ ಮಾಸ್ಟರ್‌ಬೇಟ್‌ಡನ್‌ ಆಪ್‌ಗೆ ಹೋಗಿ ಎಂದು ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಬಳಕೆದಾರರಿಗೆ ಹೇಳಿದ್ದಾರೆ. ಮಾಸ್ಟೋಡನ್‌ ಆಪ್‌ ಟ್ವಿಟ್ಟರ್‌ ರೀತಿಯದ್ದೇ ಫೀಚರ್‌ಗಳನ್ನು ನೀಡುತ್ತಿದೆ. 

ನವದೆಹಲಿ: ಟ್ವಿಟ್ಟರ್‌ನ ಹೊಸ ಮಾಲೀಕ ಮತ್ತು ಸಿಇವೊ ಎಲೋನ್‌ ಮಸ್ಕ್‌ ಪ್ರತಿನಿತ್ಯ ಒಂದಲ್ಲಾ ಒಂದು ವಿವಾದಾತ್ಮಕ ಟ್ವೀಟ್‌ ಮಾಡುತ್ತಲೇ ಇದ್ದಾರೆ. ಅರ್ಧದಷ್ಟು ಕೆಲಸಗಾರರನ್ನು ಕಿತ್ತುಹಾಕಿದ ಎಲೋನ್‌ ಕೆಲವರಿಗೆ ವಾಪಸ್‌ ಬುಲಾವ್‌ ನೀಡಿದ್ದರು. ಟ್ವಿಟ್ಟರ್‌ ವೆರಿಫೈಡ್‌ ಪ್ರೊಫೈಲ್‌ ಬೇಕೆಂದರೆ ತಿಂಗಳಿಗೆ 8 ಡಾಲರ್‌ ನೀಡಿ ಎಂದು ಎಲೋನ್‌ ಮಸ್ಕ್‌ ಹೇಳಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದರೂ ಮಸ್ಕ್‌ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗ ಮತ್ತೊಂದು ವಿವಾದಾತ್ಮಕ ಟ್ವೀಟ್‌ ಮಾಡಿರುವ ಅವರು ಮಾಸ್ಟೊಡನ್ ಎಂಬ ಸಾಮಾಜಿಕ ಜಾಲತಾಣವನ್ನು ಮಾಸ್ಟರ್‌ಬೇಟ್‌ಡನ್‌ ಎಂದು ಕರೆದಿದ್ದಾರೆ. ಟ್ವಿಟ್ಟರ್‌ ನಿಮಗೆ ಇಷ್ಟವಾಗದಿದ್ದರೆ ಮಾಸ್ಟರ್‌ಬೇಟ್‌ಡನ್‌ ಆಪ್‌ ಪ್ರಯತ್ನಿಸಿ ಎಂದು ಟ್ವಿಟ್ಟರ್‌ ಬಳಕೆದಾರರಿಗೆ ಎಲೋನ್‌ ಮಸ್ಕ್‌ ಹೇಳಿದ್ದಾರೆ.

ಮಾಸ್ಟೊಡನ್‌ ಆಪ್‌ ಹೊಸದೇನಲ್ಲ. 2019ರಲ್ಲಿ ಭಾರತದಲ್ಲೂ ಈ ಆಪ್‌ ಸ್ವಲ್ಪಮಟ್ಟದ ಖ್ಯಾತಿ ಗಳಿಸಿತ್ತು. ಆದರೆ ಹೆಚ್ಚು ದಿನಗಳ ಕಾಲ ಭಾರತೀಯ ಬಳಕೆದಾರರು ಇದನ್ನು ಬಳಸಿರಲಿಲ್ಲ. ಟ್ವಿಟ್ಟರ್‌ ರೀತಿಯ ಸಿಮಿಲರ್‌ ಫೀಚರ್‌ಗಳು ಮಾಸ್ಟೋಡಮ್‌ ಆಪ್‌ನಲ್ಲೂ ಇವೆ. ಟ್ವಿಟ್ಟರ್‌ ಬಳಕೆದಾರರು ಎಲೋನ್‌ ಮಸ್ಕ್‌ ಟ್ವಿಟ್ಟರ್‌ ಮಾಲೀಕನಾದ ಬಳಿಕ ಹಲವರು ಮಾಸ್ಟೊಡನ್‌ಗೆ ಹೋಗಿದ್ಧಾರೆ ಎನ್ನಲಾಗುತ್ತಿದೆ. 

Latest Videos

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್‌ ಮಸ್ಕ್‌ 44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್‌ನ್ನು ಸ್ವಾಧೀನಪಡಿಸಿಕೊಂಡ ಬೆನ್ನಲ್ಲೇ ಮಹತ್ತರ ಬದಲಾವಣೆಗಳಾದವು, ಶುಕ್ರವಾರ ಸರಿಸುಮಾರು ಅರ್ಧದಷ್ಟು ಕಂಪನಿ  ಉದ್ಯೋಗಿಗಳನ್ನು ಮೇಲ್ ಮಾಡಿ  ವಜಾಗೊಳಿಸಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು.  ಈಗ ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವ ಡಜನ್ಗಟ್ಟಲೆ ಉದ್ಯೋಗಿಗಳನ್ನು  ಮರಳಿ ಹಿಂತಿರುಗುವಂತೆ ಟ್ವಿಟ್ಟರ್ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ಈ ಬಗ್ಗೆ  ಉದ್ಯೋಗಿಗಳನ್ನು ಸಂಪರ್ಕಿಸಿ  ಆಡಳಿತ ಮಂಡಳಿ ಮನವೊಲಿಸುತ್ತಿದೆ ಎಂದು ವರದಿ ತಿಳಿಸಿದೆ. ಹಿಂತಿರುಗುವಂತೆ ಮನವಿ ಮಾಡಲಾದ ಕೆಲವು ಉದ್ಯೋಗಿಗಳಿಗೆ, 'ನಿಮ್ಮನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಕಂಪನಿ ಸಮಜಾಯಿಷಿ ನೀಡಿ ಮನವೊಲಿಸುತ್ತಿದೆಯಂತೆ.  ಎಲಾನ್‌ ಮಸ್ಕ್‌ ಅವರ ಆದೇಶದಂತೆ ಟ್ವಿಟ್ಟರ್‌ನಲ್ಲಿ ಹೊಸ  ರೀತಿಯ ಫೀಚರ್ ಗಳನ್ನು ಅಭಿವೃದ್ಧಿಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅನುಭವಿ ಮತ್ತು ಕಾರ್ಯಕ್ಷಮತೆ ಇರುವ ನೌಕರರ ಅವಶ್ಯಕತೆ ಈಗ ತುಂಬಾ ಮುಖ್ಯ ಎನಿಸಿದೆ. ಹೀಗಾಗಿ ತಾನು ಮಾಡಿರುವ ತಪ್ಪಿಗೆ ಸಮಾಜಾಯಿಷಿ ಕೊಟ್ಟುಕೊಂಡು ಕೈ ಬಿಟ್ಟು ಅನುಭವಿ ಉದ್ಯೋಗಿಗಳಿಗೆ ಮತ್ತೆ ಮಣೆ ಹಾಕುತ್ತಿದೆ.  ಅನುಭವಿಗಳು ಮೌಲ್ಯ ಕಂಪೆನಿಗೆ ಈಗ ಮನವರಿಯುತ್ತಿದೆ.

ಅಕ್ಟೋಬರ್ ಅಂತ್ಯದಲ್ಲಿ ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ  ಶುಕ್ರವಾರ ಇ-ಮೇಲ್‌ ಮೂಲಕ ಸುಮಾರು 3,700 ಜನರನ್ನು ಕಂಪೆನಿಯಿಂದ ಕಿತ್ತು ಹಾಕಲಾಗಿತ್ತು. ಇದಾದ ಬೆನ್ನಿಗೆ ಕಂಪನಿಯ ಸಿಸ್ಟಂಗಳಿಗೆ ಪ್ರವೇಶವನ್ನು ಕೂಡ ನಿರ್ಬಂಧಿಸಲಾಗಿತ್ತು. ಈ ಬೆಳವಣಿಗೆ ನಡೆದ ಮೂರು ದಿನದಲ್ಲಿ ಕಂಪೆನಿಯ ಪರಿಸ್ಥಿತಿ ಅಸ್ತವ್ಯಸ್ತವಾಗಿದ್ದು, ತನ್ನ ತಪ್ಪನ್ನು ಅರಿತಿರುವ ಟ್ವಿಟ್ಟರ್ ಮತ್ತೆ ಹಳೆ ಉದ್ಯೋಗಿಗಳಿಗೆ ಉದ್ಯೋಗದ ಕರೆ ಕೊಟ್ಟಿದೆ. 

ಟ್ವಿಟ್ಟರ್‌ನ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರ ಪ್ರಕಾರ ಕಂಪನಿಯಲ್ಲೀಗ 3,700 ಉದ್ಯೋಗಿಗಳು ಉಳಿದಿದ್ದಾರೆ. ಇವರಿಗೆ ಹೊಸ ಹೊಸ ಕೆಲಸಗಳನ್ನು ಮಸ್ಕ್‌ ನೀಡುತ್ತಿದ್ದು, ಟಾರ್ಗೆಟ್ ಮುಂಚೆ ಪೂರೈಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ಸಂದರ್ಭಗಳಲ್ಲಿ ಕೊಟ್ಟಿರುವ ಟಾರ್ಗೆಟ್ ತಲುಪಲು  ಉದ್ಯೋಗಿಗಳು ಕಚೇರಿಯಲ್ಲೇ ಮಲಗಿದ್ದೂ ಇದೆ ಎಂದು ವರದಿಗಳು ತಿಳಿಸಿದೆ.

ತಾವು ಖರೀದಿಸಿರುವ ಟ್ವಿಟರ್‌ ಮೇಲೆ ಸಾಮಾಜಿಕ ಹೋರಾಟರಾರರ ಒತ್ತಡವಿದೆ ಎಂದು ಹೇಳಿದ್ದ ಎಲಾನ್‌ ಮಸ್ಕ್‌ ಕಂಪನಿಗೆ ದಿನವೊಂದಕ್ಕೆ  4 ಮಿಲಿಯನ್ ಡಾಲರ್  ನಷ್ಟವಾಗುತ್ತಿದೆ. ನೌಕರರ ವಜಾಗೊಳಿಸುವುದು ಬಿಟ್ಟು ತಮಗೆ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದರು. ಕಾನೂನಿನ ಪ್ರಕಾರ ವಜಾಗೊಂಡಿರುವ ಉದ್ಯೋಗಿಗಳಿಗೆ 3 ತಿಂಗಳ ಮುಂಗಡ ವೇತನ ಕೂಡ ನೀಡಲಾಗಿದೆ ಎಂದಿದ್ದರು.

#OneTeam ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್‌ಗೆ ಭಾವುಕ ಗುಡ್‌ಬೈ ಹೇಳಿದ ಉದ್ಯೋಗಿಗಳು

ಭಾರತದಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳನ್ನು ಟ್ವಿಟ್ಟರ್ ವಜಾ ಮಾಡಿತ್ತು. ಸುಮಾರು 200 ಉದ್ಯೋಗಿಗಳನ್ನು ಟ್ವಿಟ್ಟರ್ ತೆಗೆದುಹಾಕಿದ್ದು, ಈ ಬಗ್ಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ. ಭಾರತದಲ್ಲಿ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾ ಮಾಡಿರುವ ವಿಧಾನವನ್ನು ನಾವು ಖಂಡಿಸುತ್ತೇವೆ.  ಉದ್ಯೋಗಿಗಳಿಗೆ ಪರಿವರ್ತನೆಗಾಗಿ ನ್ಯಾಯಯುತ ಸಮಯವನ್ನು ನೀಡಬೇಕಿತ್ತು ಎಂದಿದ್ದಾರೆ. 

ಭಾರತದಲ್ಲಿನ ಟ್ವಿಟ್ಟರ್ ಉದ್ಯೋಗಿಗಳನ್ನು ತೆಗೆದುಹಾಕಿದ್ದಕ್ಕೆ ಕೇಂದ್ರ ಐಟಿ ಸಚಿವ ಟೀಕೆ

ಟ್ವಿಟ್ಟರ್ ಇತಿಹಾಸದಲ್ಲಿ ಇದುವರೆಗೆ ಅತಿದೊಡ್ಡ ವಜಾ ಪ್ರಕ್ರಿಯೆಯಾಗಿದೆ. ಇದಕ್ಕೆ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಭಾರತದಲ್ಲಿ ವಜಾಗಳನ್ನು  ಟ್ವಿಟ್ಟರ್ ನ ಎಲ್ಲಾ ವಿಭಾಗಗಳಲ್ಲಿ ಮಾಡಲಾಗಿದೆ ಸೇಲ್ಸ್ ವಿಭಾಗದಿಂದ ಮಾರ್ಕೆಟಿಂಗ್‌ವರೆಗೆ, ವಿಷಯ ಸಂಗ್ರಹಣೆಯಿಂದ ಕಾರ್ಪೊರೇಟ್ ಸಂವಹನಗಳವರೆಗೆ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

click me!