ಈ ನಿಯಮ ಜಾರಿಗೆ ಬಂದರೆ ಭಾರತದಲ್ಲಿ Whatsapp ಗೋವಿಂದ!

By Web Desk  |  First Published Feb 7, 2019, 3:03 PM IST

ಸರ್ಕಾರವು ಸೋಶಿಯಲ್ ಮೀಡಿಯಾಗಳಿಗೆ ಕೆಲ ಮೂಲ ನಿಯಮಗಳನ್ನು ವಿಧಿಸಿದ್ದು, ಒಂದು ವೇಳೆ ಇದು ಜಾರಿಯಾದರೆ ಭಾರತದಲ್ಲಿ Whatsapp ತನ್ನ ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. 


ಭಾರತದಲ್ಲಿ ಕಾರ್ಯ ನಿರ್ವಹಿಸುವ ಸೋಶಿಯಲ್ ಮೀಡಿಯಾ ಕಂಪೆನಿಗಳ ಮೇಲೆ ಸರ್ಕಾರ ವಿಧಿಸಲು ಹೊರಟಿರುವ ನಿಯಮಗಳು ಜಾರಿಯಾದರೆ, ದೇಶದಲ್ಲಿ Whatsapp ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಬುಧವಾರದಂದು ಈ ವಿಚಾರವಾಗಿ ಮಾಹಿತಿ ನೀಡಿದ ಕಂಪೆನಿಯ ಉನ್ನತ ಕಾರ್ಯ ನಿರ್ವಾಹಕರು, ಭಾರತದಲ್ಲಿ ಪ್ರತಿ ತಿಂಗಳು ಸುಮಾರು 20 ಕೋಟಿ ಮಂದಿ Whatsapp ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಇದು ಕಂಪೆನಿಗೆ ಬಹು ದೊಡ್ಡ ಮಾರುಕಟ್ಟೆಯಾಗಿದೆ. ಜಗತ್ತಿನಾದ್ಯಂತ ನಾವು ಒಟ್ಟು 1.5 ಶತಕೋಟಿ ಬಳಕೆದಾರರನ್ನು ಹೊಂದಿದ್ದೇವೆ’ ಎಂದಿದ್ದಾರೆ.

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳೇ ಎಚ್ಚರ..!

Tap to resize

Latest Videos

ಸರ್ಕಾರವು ನೂತನ ನಿಯಮಗಳನ್ನು ಜಾರಿಗೊಳಿಸಿದ್ದು, ಇವುಗಳಲ್ಲಿ ಗ್ರಾಹಕರ ಸಂದೇಶಗಳ ಮಾಹಿತಿ ಒದಗಿಸಬೇಕೆಂದು ತಿಳಿಸಿದೆ. ಸದ್ಯ ಇದೇ ನಿಯಮ Whatsapp ಕಂಪೆನಿಗೆ ತಲೆನೋವಾಗಿ ಪರಿಣಮಿಸಿದೆ.

ಮಾಧ್ಯಮ ಕಾರ್ಯಾಗಾರವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ Whatsapp ಕಂಪೆನಿಯ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಕಾರ್ಲ್ ವೂಗ್ 'ಸರ್ಕಾರ ವಿಧಿಸಿರುವ ಮೂಲ ನಿಯಮಗಳಲ್ಲಿ ಸಂದೇಶಗಳ ಮಾಹಿತಿ ಪತ್ತೆ ಹಚ್ಚುವಿಕೆ ಮಹತ್ವ ನೀಡಿರುವುದೇ ಸದ್ಯ ಚಿಂತೆಗೀಡು ಮಾಡಿರುವ ವಿಚಾರವಾಗಿದೆ' ಎಂದಿದ್ದಾರೆ.

ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

'ಫೇಸ್ ಬುಕ್ ಒಡೆತನದ Whatsapp ಗ್ರಾಹಕರ ಸಂದೇಶಗಳನ್ನು  end-to-end encryption  ಮೂಲಕ ಸುರಕ್ಷಿತವಾಗಿಟ್ಟಿದೆ. ಅಂದರೆ ಕೇವಲ ಸಂದೇಶ ಕಳುಹಿಸಿದವರು ಮತ್ತು ಪಡೆದವರಷ್ಟೇ ಈ ಮೆಸೇಜ್ ನೋಡಬಹುದು. ಇದೆಷ್ಟರ ಮಟ್ಟಿಗೆ ಸುರಕ್ಷಿತವೆಂದರೆ ಖುದ್ದು Whatsapp ಕಂಪೆನಿಯೂ ಈ ಸಂದೇಶಗಳನ್ನು ನೋಡುವುದು ಅಸಾಧ್ಯ. ಹೀಗಿರುವಾಗ ಒಂದು ವೇಳೆ ಈ ಫೀಚರ್ ತೆಗೆದರೆ Whatsapp ತನ್ನ ಮೌಲ್ಯವನ್ನು ಕಳೆದುಕೊಳ್ಳುವುದರೊಂದಿಗೆ, ಈ ಆ್ಯಪ್ ಹೊಸತೊಂದು ಉತ್ಪಾದನೆಯಂತೆ ಕಂಡು ಬರಲಿದೆ' ಎಂಬುವುದು ವೂಗ್ ಅಭಿಪ್ರಾಯವಾಗಿದೆ.

ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

ವೂಗ್ ಈ ಹಿಂದೆ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾರ ಅವಧಿಯಲ್ಲಿ ಶ್ವೇತ ಭವನದಲ್ಲಿ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ವೂಗ್ ನೀಡಿರುವ ಮಾಹಿತಿಯಂತೆ ಒಂದು ವೇಳೆ ಸರ್ಕಾರ ವಿಧಿಸಿರುವ ಈ ಮೂಲ ನಿಯಮ ಜಾರಿಯಾದರೆ Whatsapp ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವುದರೊಂದಿಗೆ ಬಳಕೆದಾರರ ಸಂದೇಶಗಳು ಅಸುರಕ್ಷಿತಗೊಳ್ಳಲಿವೆ. 

ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

ಈ ನೂತನ ನಿಯಮ ಪಾಲಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವೂಗ್ 'ಸರ್ಕಾರದ ಈ ನಿಯಮದಿಂದ ಗ್ರಾಹಕರು ಬಯಸುವ ಗೌಪ್ಯತೆ ಕಾಪಾಡುವುದು ಅಸಾಧ್ಯ. ಮುಂದೇನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಕುರಿತಾಗಿ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ' ಎಂದಿದ್ದಾರೆ. ಈ ಮೂಲಕ ನಿಯಮ ಜಾರಿಗೊಳಿಸಿದರೆ Whatsapp ಭಾರತದಲ್ಲಿ ಕಾರ್ಯ ಸ್ಥಗಿತಗೊಳಿಸಲಿದೆ ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

click me!