ಕ್ವಾಲಿಟಿ ಕಡಿಮೆಯಾದಂತೆ ವಾಟ್ಸಾಪ್‌ನಲ್ಲಿ ಇಮೇಜ್ ಕಳುಹಿಸುವುದು ಹೇಗೆ?

First Published Jun 3, 2018, 6:34 PM IST
Highlights

ಜನರ ಬದುಕಿನಲ್ಲಿ ಫೋನ್ ಏಷ್ಟು ಮುಖ್ಯವಾಗಿದೆಯೋ, ವಾಟ್ಸಾಪ್‌ ಕೂಡ ಅಷ್ಟೇ ಮುಖ್ಯವಾಗಿದೆ. ಇದೇ ವಾಟ್ಸಾಪ್‌ನಲ್ಲಿರುವ ಅನೇಕ ಟೆಕ್ನಿಕಲ್ ವಿಚಾರಗಳು ತಿಳಿದೇ ಇರುವುದಿಲ್ಲ. ಅದರಲ್ಲೂ ಕ್ವಾಲಿಟಿ ಕಡಿಮೆಯಾಗದಂತೆ ವ್ಯಾಟ್ಸಾಪ್ ಮೂಲಕ ಇಮೇಜ್ ಕಳುಹಿಸಲು ಸಾಧ್ಯವಿದೆ. ನೀವೂ ಇದರ ಸದುಪಯೋಗ ಪಡೆಯಬಹುದು.

ಬೆಂಗಳೂರು(ಜೂನ್.3): ವಾಟ್ಸಾಪ್‌ ಇಲ್ಲದೇ ಒಂದು ದಿನವೂ ಇರಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮನ್ನ ವಾಟ್ಸಾಪ್‌ ಆವರಿಸಿಕೊಂಡು ಬಿಟ್ಟಿದೆ. ಚಾಟ್, ಫಾರ್ವಡ್ ಮೆಸೇಜ್, ಫೋಟೋ, ವೀಡಿಯೋ ಶೇರಿಂಗ್.., ಹೀಗೆ ವಾಟ್ಸಾಪ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಕೆಲವೊಮ್ಮೆ ಫೋಟೋ  ಕ್ವಾಲಿಟಿ ಹೋಗದಂತೆ ಕಳುಹಿಸಲು ನಾವು ವಾಟ್ಸಾಪ್‌ ಬದಲು ಶೇರ್ ಇಟ್ ಅಥವಾ ಇನ್ನಿತಿರ ಆ್ಯಪ್ ಬಳಸುತ್ತೇವೆ. ಆದರೆ ಫೋಟೋ ಕ್ವಾಲಿಟಿ ಕಡಿಮೆಯಾಗದಂತೆ ವಾಟ್ಸಾಪ್‌ನಲ್ಲೂ ಇಮೇಜ್ ಕಳುಹಿಸಲು ಸಾಧ್ಯವಿದೆ.

ವಿಧಾನ 1: ರಿನೇಮ್ ಮಾಡಿ ಕಳುಹಿಸುವುದು
ಹೆಜ್ಜೆ 1: ಮೊದಲು ನಿಮ್ಮ ಫೋನ್‌ನಲ್ಲಿರುವ ಫೈಲ್ ಮ್ಯಾನೇಜರ್‌ಗೆ ಹೋಗಿ ಕಳುಹಿಸಬೇಕಾದ ಫೋಟೋ ಆಯ್ಕೆ ಮಾಡಿಕೊಳ್ಳಿ
ಹೆಜ್ಜೆ 2:  ಆಯ್ಕೆಮಾಡಿದ ಫೋಟೋ ರಿನೇಮ್ ಮಾಡೋ ಸಂದರ್ಭದಲ್ಲಿ image.Doc ಎಂದು ಬದಲಾಯಿಸಿಕೊಳ್ಳಿ
ಹೆಜ್ಜೆ 3: ಈಗ ನಿಮ್ಮ ಫೋಟೋ ಡಾಟ್ ಫೈಲ್ ಆಗಿ ಬದಲಾಗಿರುತ್ತೆ. ಬಳಿಕ ಸೆಂಡ್ ಆಯ್ಕೆಯಲ್ಲಿ ಕಳುಹಿಸಬೇಕಾದ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಕಳುಹಿಸಿ
ಹೆಜ್ಜೆ 4: ನೀವು ಕಳುಹಿಸಿದ ವ್ಯಕ್ತಿ ಫೋಟೋ ಡೌನ್‌ಲೋಡ್ ಮಾಡಿ ಜೆಪಿಜೆಯಾಗಿ ರಿನೇಮ್ ಮಾಡಿಕೊಳ್ಳಬೇಕು

ವಿಧಾನ 2: ಹೆಚ್ಚು ಫೋಟೋಗಳನ್ನ ಕಳುಹಿಸುವಾಗ ಝಿಪ್ ಫೈಲ್ ಆಗಿ ಬದಲಾಯಿಸಿ

ಹೆಜ್ಜೆ 1:  ಫೈಲ್ ಮ್ಯಾನೇಜರ್‌ನಲ್ಲಿ ನೀವು ಕಳುಹಿಸಬೇಕಾದ ಫೋಟೋಗಳನ್ನ ಆಯ್ಕೆ ಮಾಡಿಕೊಂಡು ಕಂಪ್ರೆಸ್ ಮಾಡಿಕೊಳ್ಳಿ(ಇತರ ಕಂಪ್ರೆಸ್ ಮಾಡೋ ಆ್ಯಪ್‌ಗಳಲ್ಲಿ ಮಾಡಬುಹುದು)

ಹೆಜ್ಜೆ 2: ಫೈಲ್ ಮ್ಯಾನೇಜರ್‌ನಲ್ಲಿರುವ ಝಿಪ್ ಫೋಲ್ಡರ್‌ನ್ನ ಶೇರ್ ಮಾಡಿಕೊಳ್ಳಿ. ಬಳಿಕ ನೀವು ಕಳುಹಿಸಬೇಕಾದ ವ್ಯಕ್ತಿಗೆ ಸೆಂಡ್ ಮಾಡಿ.

ಹೆಜ್ಜೆ 2: ಝಿಪ್ ಫೈಲ್ ಸ್ವೀಕರಿಸಿದ ವ್ಯಕ್ತಿ ಅನ್ ಕಂಪ್ರೆಸ್ ಮಾಡಬೇಕು. 

ಈ ಎರಡು ವಿಧಾನಗಳಲ್ಲಿ ಫೋಟೋಗಳ ಕ್ವಾಲಿಟಿ ಕಡಿಮೆಯಾಗದಂತೆ ಇತರರಿಗೆ ಕಳುಹಿಸಬಹುದು. 

click me!