ಕವಾಸಕಿ ನಿಂಜಾ 300 ಗಿಂತ ಕವಾಸಕಿ ನಿಂಜ 400 ವಿಭಿನ್ನ ಯಾಕೆ?

First Published Jun 3, 2018, 8:41 PM IST
Highlights

ಕವಾಸಕಿ ನಿಂಜ 400 ಬೈಕ್ ಹಲವು ವಿಶೇಷತೆಗಳಿಂದ ಕೂಡಿದೆ. ಈ ಹಿಂದಿನ ಮಾಡೆಲ್ ನಿಂಜ 300 ಗಿಂತಲೂ ಹೆಚ್ಚೂ ಬಲಿಷ್ಠ ಹಾಗೂ ಅಭಿವೃದ್ಧಿಪಡಿಸಿರುವ ಇಂಜಿನ್ ಹೊಂದಿದೆ.

ಬೆಂಗಳೂರು(ಜೂನ್.3): ಭಾರತದಲ್ಲಿ ಕವಾಸಕಿ ಬೈಕ್ ತನ್ನದೇ ಆದ ಮಾರುಕಟ್ಟೆ ಹೊಂದಿದೆ. ದುಬಾರಿ ಬೆಲೆ, ಸ್ಟೈಲೀಶ್ ಬೈಕ್‌ಗೆ ಹೆಸರುವಾಸಿಯಾಗಿರುವ ಕವಾಸಕಿಯ ನೂತನ ಕವಾಸಕಿ ನಿಂಜ 400, ಹಿಂದಿನ ಕವಾಸಕಿ ನಿಂಜ 300 ಬೈಕ್‌ಗಿಂತಲೂ ವಿಶಿಷ್ಠವಾಗಿದೆ.

ಕವಾಸಕಿ ನಿಂಜ 400 ವಿನ್ಯಾಸದಲ್ಲೂ ಅಲ್ಪ ಬದಲಾವಣೆ ಮಾಡಲಾಗಿದೆ. ಚಿನ್ ಸ್ಪಾಯ್ಲಿರ್ ಕೆಳಭಾಗದಲ್ಲಿ 2 ಎಲ್ಇಡಿ ಹೆಡ್‌ಲೈಟ್ ನೀಡಲಾಗಿದೆ. ಕವಾಸಕಿ ನಿಂಜ ಭಾರತದಲ್ಲಿ ಕೆಆರ್‌ಟಿ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ನಿಂಜ 300 ಬೈಕ್‌ನಲ್ಲಿ ಟ್ಯಾಂಕ್ ಕಪ್ಪುಬಣ್ಣದ್ದಾಗಿದ್ದರೆ, ನಿಂಜ 400 ರಲ್ಲಿ ಹಸಿರು ಬಣ್ಣ ನೀಡಲಾಗಿದೆ. 300 ನಿಂಜ ಬೈಕ್‌ನಲ್ಲಿ ಹೆಚ್ಚು ಬ್ಲಾಕ್ ಕಲರ್ ಬಳಸಲಾಗಿತ್ತು. ಆದೆರೆ ನಿಂಜ 400 ನಲ್ಲಿ ಹಸಿರು ಕಲರ್ ಬಳಸಲಾಗಿದೆ. ಜೊತೆಗೆ ಹೊರಭಾಗದ ಡಿಸೈನ್‌ನಲ್ಲೂ ಕೊಂಚ ಬದಲಾವಣೆ ಮಾಡಿ ರೇಸ್‌ಗೆ ಹೇಳಿ ಮಾಡಿಸಿದಂತಿದೆ.

400 ನಿಂಜ 399 ಸಿಸಿ ಇಂಜಿನ್ ಹೊಂದಿದೆ. ಪ್ಯಾರಲಲ್ ಟ್ವಿನ್, ಡಿಓಹೆಚ್‌ಸಿ, ಲಿಕ್ವಿಡ್ ಕೂಲೆಡ್ ಹಾಗೂ ಫ್ಯೂಯೆಲ್ ಇಂಜೆಕ್ಟೆಡ್ ಹೊಂದಿದೆ. 10 ಸಾವಿರ ಆರ್‌ಪಿಎಮ್ ಜೊತೆಗೆ 49ಪಿಎಸ್ ಹೊಂದಿದೆ. ಹೀಗಾಗಿ ಸುಲಭವಾಗಿ  ಇಂಜಿನ್ ಕಂಟ್ರೋಲ್‌ಗೆ ಬರಲಿದೆ ಎಂದು ಕವಾಸಕಿ ಹೇಳಿದೆ. 6 ಸ್ಪೀಡ್ ಗೇರ್ ಹೊಂದಿರುವ ನಿಂಜ 400, ಎಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿದೆ. ನಿಂಜ 300 ಬೈಕ್‌ನಲ್ಲಿ 37ಎಮ್‌ಎಮ್ ಯೂನಿಟ್ ಫೋರ್ಕ್ ಬಳಸಿದ್ದರೆ, ನಿಂಜ 400 ಬೈಕ್‌ನಲ್ಲಿ 41 ಎಮ್‌ಎಮ್ ಫೋರ್ಕ್ ಬಳಸಲಾಗಿದೆ. ನೂತನ ಪೆಟಲ್ ಡಿಸ್ಕ್‌ನಿಂದ ಡಿಸ್ಕ್ ಬಿಸಿಯಾಗೋದನ್ನ ತಪ್ಪಿಸುತ್ತದೆ.

ಕವಾಸಕಿ ನಿಂಜ 400 ಬೈಕ್‌ನ ಬೆಲೆ 4.69 ಲಕ್ಷ(ದೆಹಲಿ ಎಕ್ಸ್ ಶೋ ರೂಮ್) ಇನ್ನು ನಿಂಜ 300 ಬೈಕ್‌ಗೆ 3.6 ಲಕ್ಷ ರೂಪಾಯಿ(ಎಕ್ಸ್ ಶೋ ರೂಮ್). ನಿಂಜ 400 ಬೆಲೆ ದುಬಾರಿಯಾಗಿದೆ ನಿಜ.  ಕವಾಸಕಿ ಬೈಕ್ ದುಬಾರಿಯಾಗಲು ಮುಖ್ಯ ಕಾರಣ ಬೈಕ್‌ನ ಎಲ್ಲಾ ಬಿಡಿಭಾಗಗಳನ್ನ ಥಾಯ್ಲೆಂಡ್‌ನಿಂದ ತರಿಸಿ ಭಾರತದಲ್ಲಿ ಜೋಡಿಸಲಾಗುತ್ತೆ. ಇದೂ ಕೂಡ ಕವಾಸಕಿ ಬೈಕ್ ದುಬಾರಿಯಾಗಲು ಒಂದು ಕಾರಣ

click me!