ಗೂಗಲ್ ಕ್ರೋಮ್’ನಲ್ಲಿ ಕ್ಯಾಶೆ ಕ್ಲಿಯರ್ ಮಾಡುವುದು ಹೇಗೆ ಗೊತ್ತಾಗುತ್ತಿಲ್ಲವೇ? ಈ ಸುದ್ದಿ ಕ್ಲಿಕ್ ಮಾಡಿ

Published : Jun 28, 2018, 04:41 PM ISTUpdated : Jun 28, 2018, 04:42 PM IST
ಗೂಗಲ್ ಕ್ರೋಮ್’ನಲ್ಲಿ ಕ್ಯಾಶೆ ಕ್ಲಿಯರ್ ಮಾಡುವುದು ಹೇಗೆ ಗೊತ್ತಾಗುತ್ತಿಲ್ಲವೇ? ಈ ಸುದ್ದಿ ಕ್ಲಿಕ್ ಮಾಡಿ

ಸಾರಾಂಶ

ನಿಮ್ಮ ಫೋನ್ ಅಥವಾ ಸಿಸ್ಟಂನಲ್ಲಿರುವ ಕ್ಯಾಶೆಯನ್ನು ಕ್ಲಿಯರ್ ಮಾಡೋದು ಹೇಗೆಂದು ಗೊತ್ತಾಗುತ್ತಿಲ್ಲವೇ? ಸಿಸ್ಟಂ ಸ್ಲೋ ಆಗಿದ್ಯಾ? ಹಾಗಾದ್ರೆ ಹೀಗೆ ಮಾಡಿ 

ಫೋನ್‌ನಲ್ಲಿರುವ cache ಅಥವಾ ಗೌಪ್ಯ ಸಂಗ್ರಹವನ್ನು ಹೇಗೆ ಡಿಲೀಟ್ ಮಾಡೋದು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಫೋನ್‌ನಲ್ಲಿರುವ cache ಅಥವಾ ಗೌಪ್ಯ ಸಂಗ್ರಹವನ್ನು ಹೇಗೆ ಡಿಲೀಟ್ ಮಾಡೋದು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ.

ಈ cache ಬಗ್ಗೆ ಸರಳವಾಗಿ ಹೇಳಬೇಕು ಅಂದರೆ ಕ್ರೋಮ್‌ನಲ್ಲಿ ನೀವು ಒಂದು ಫೈಲ್ ಓಪನ್ ಮಾಡ್ತೀರಿ. ಅದರ ಒಂದು ಕಾಪಿ ಈ ಕ್ಯಾಶೆನಲ್ಲಿ ಸಂಗ್ರಹವಾಗಿರುತ್ತದೆ. ಇದರಿಂದ ಪ್ರತೀ ಬಾರಿ ಬೇಕಾದ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ತಪ್ಪುತ್ತದೆ. ಆದರೆ ಅನಗತ್ಯ ಸ್ಟೋರೇಜ್ ತಪ್ಪಿಸಲು ಆಗಾಗ ಈ ಕ್ಯಾಶ್ ಅನ್ನು ಕ್ಲಿಯರ್ ಮಾಡಬೇಕಾದ್ದು ಅವಶ್ಯಕ. ಕೆಲವೊಂದು ಸಲ ಈ ಕ್ಯಾಶೆ ಡಿಲೀಟ್ ಮಾಡುವುದರಿಂದ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತದೆ.

ಆ್ಯಂಡ್ರಾಯ್ಡ್ ನಲ್ಲಿ cache ಕ್ಲಿಯರ್ ಮಾಡೋದು ಹೇಗೆ?

1.  ಗೂಗಲ್ ಕ್ರೋಮ್ ಓಪನ್ ಮಾಡಿ ಅದರ ಬಲ ಬದಿಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.

2.  ಸೆಟ್ಟಿಂಗ್‌ನಲ್ಲಿ ಪ್ರೈವೆಸಿ ಆಪ್ಶನ್ ಇರುತ್ತೆ. ಪ್ರೈವೆಸಿಯಲ್ಲಿ ಕ್ಲಿಯರ್ ಬ್ರೌಸಿಂಗ್ ಡಾಟಾ ಆಯ್ಕೆ ಮಾಡಿ.

3.  ನೀವು ಡಿಲೀಟ್ ಮಾಡಬೇಕಾದ ಡಾಟಾವನ್ನು ಆಯ್ಕೆ ಮಾಡಿ ಕ್ಲಿಯರ್ ಬ್ರೌಸಿಂಗ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ cache  ಕ್ಲಿಯರ್ ಆಗುತ್ತೆ.

4.  ವಿಂಡೋಸ್ ಅಥವಾ ಮ್ಯಾಕ್‌ನಲ್ಲಾದರೆ ಕ್ರೋಮ್‌ನ ಬಲಭಾಗದ ಮೂರು ಚುಕ್ಕೆ ಮೇಲೆ ಕ್ಲಿಕ್ ಮಾಡಿ, ಮೋರ್ ಟೂಲ್ಸ್ ಆಯ್ಕೆಯಲ್ಲಿ ಕ್ಲಿಯರ್ ಬ್ರೌಸಿಂಗ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಕ್ಯಾಶ್ ಕ್ಲಿಯರ್ ಆಗುತ್ತೆ.

 5. ಐಫೋನ್‌ನಲ್ಲೂ ಬಲಭಾಗದ ಮೂರು ಡಾಟ್ ಮೇಲೆ ಟ್ಯಾಪ್ ಮಾಡಿ. ಸೆಟ್ಟಿಂಗ್ ಆಯ್ಕೆ ಮಾಡಿ ಅದರಲ್ಲಿ ಪ್ರೈವೆಸಿ ಆಯ್ಕೆ ಮಾಡಿ ಕ್ಲಿಯರ್ ಬ್ರೌಸಿಂಗ್ ಡಾಟಾ ಆಯ್ಕೆ ಮಾಡಿದ್ರಾಯ್ತು. ಸ್ಕ್ರೀನ್ ಕೆಳಭಾಗದಲ್ಲಿ 2 ಬಟನ್‌ಗಳಿರುವಲ್ಲಿ ಮತ್ತೆ

ಕ್ಲಿಯರ್ ಬ್ರೌಸಿಂಗ್ ಡಾಟಾ ಆಯ್ಕೆ ಕೊಡಿ. cache ಕ್ಲಿಯರ್ ಆಗುತೆ ಬಗ್ಗೆ ಸರಳವಾಗಿ ಹೇಳಬೇಕು ಅಂದರೆ ಕ್ರೋಮ್‌ನಲ್ಲಿ ನೀವು ಒಂದು ಫೈಲ್ ಓಪನ್ ಮಾಡ್ತೀರಿ. ಅದರ ಒಂದು ಕಾಪಿ ಈ ಕ್ಯಾಶೆನಲ್ಲಿ ಸಂಗ್ರಹವಾಗಿರುತ್ತದೆ. ಇದರಿಂದ ಪ್ರತೀ ಬಾರಿ ಬೇಕಾದ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ತಪ್ಪುತ್ತದೆ. ಆದರೆ ಅನಗತ್ಯ ಸ್ಟೋರೇಜ್ ತಪ್ಪಿಸಲು ಆಗಾಗ ಈ ಕ್ಯಾಶ್ ಅನ್ನು ಕ್ಲಿಯರ್ ಮಾಡಬೇಕಾದ್ದು ಅವಶ್ಯಕ. ಕೆಲವೊಂದು ಸಲ ಈ ಕ್ಯಾಶೆ ಡಿಲೀಟ್ ಮಾಡುವುದರಿಂದ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?