ವಾಟ್ಸಪ್‌ನಲ್ಲಿ ಯಾವುದೇ ಇಮೇಜ್‌ಗಳು ಬಂದರೂ ಅವು ಗ್ಯಾಲರಿಯಲ್ಲಿ ಹೋಗಿ ಸೇವ್ ಆಗಿ ಅನಗತ್ಯ ಕಿರಿಕಿರಿಗೆ ಮುಕ್ತಿ ಸಿಕ್ಕಿದೆ. ವಾಟ್ಸಾಪ್ ಹೊಸ ಫೀಚರೊಂದನ್ನು ಪರಿಚಯಿಸುತ್ತಿದ್ದು ಇಮೇಜ್’ಗಳನ್ನು ನಿಮಗೆ ಬೇಕಾದ ಫೋಲ್ಡರ್’ಗೆ ಹೋಗಿ ಸೇವ್ ಆಗುವಂತೆ ನೋಡಿಕೊಳ್ಳಬಹುದು.
ವಾಟ್ಸಪ್‌ನಲ್ಲಿ ಯಾವುದೇ ಇಮೇಜ್‌ಗಳು ಬಂದರೂ ಅವು ಗ್ಯಾಲರಿಯಲ್ಲಿ ಹೋಗಿ ಸೇವ್ ಆಗಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದ ಕಾಲಕ್ಕೆ ಬ್ರೇಕ್ ಬಿದ್ದಿದೆ.
ಈಗ ವಾಟ್ಸಪ್ ಲೇಟೆಸ್ಟ್ ವರ್ಸನ್ 2.18.195 ಅಪ್‌ಡೇಟ್ ಮಾಡಿಕೊಂಡರೆ ಸೀದಾ ಗ್ಯಾಲರಿಯಲ್ಲಿ ಹೋಗಿ ಸೇವ್ ಆಗುವ ಇಮೇಜ್‌ಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ಪ್ರತಿ ವೈಯಕ್ತಿಕ ನಂಬರ್‌ಗೂ ಹೈಡ್ ಮೀಡಿಯಾ ಎನ್ನುವ ಅವಕಾಶ ನೀಡಲಾಗಿದೆ. ನ್ಯೂ ವರ್ಸನ್ ಅಪ್‌ಡೇಟ್ ಮಾಡಿಕೊಂಡ ನಂತರ ಸಿಟ್ಟಿಂಗ್‌ನಲ್ಲಿ ಚಾಟ್ಸ್ ಆಯ್ಕೆಯನ್ನು ಒತ್ತಿದರೆ ಕೊನೆಯಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣುತ್ತದೆ. ಇದರಲ್ಲಿ ಯಸ್ ಮತ್ತು ನೋ ಎನ್ನವ ಎರಡು ಆಯ್ಕೆಗಳಿದ್ದು, ವ್ಯಕ್ತಿಯ ಯಾವುದೇ ಮಲ್ಟಿಮೀಡಿಯಾ ಸಂದೇಶಗಳು ನಿಮ್ಮ ಗ್ಯಾಲರಿಯಲ್ಲಿ ನೇರವಾಗಿ ಸೇವ್ ಆಗದಿರಲು ನೋ ಆಪ್ಶನ್ ಆಯ್ಕೆ ಮಾಡಿಕೊಳ್ಳಬಹುದು.
ಇದು ವಾಟ್ಸಪ್ ಗ್ರೂಪ್‌ಗಳಿಗೂ ಅನ್ವಯವಾಗುತ್ತದೆ. ಇದರಿಂದಾಗಿ ಅನಗತ್ಯ ಮಲ್ಟಿಮೀಡಿಯಾ ಸಂದೇಶಗಳಿಂದ ಗ್ಯಾಲರಿ ತುಂಬಿ ಹೋಗುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.