Cyber Fraud:‌ ಟ್ರಾಫಿಕ್‌ ಪೋಲಿಸರಿಗೆ ಆನಲೈನ್‌ನಲ್ಲಿ ದಂಡ ಪಾವತಿಸಲು ಹೋಗಿ ₹60,000 ಕಳೆದುಕೊಂಡ ವ್ಯಕ್ತಿ!

Published : Dec 07, 2021, 10:39 AM ISTUpdated : Dec 07, 2021, 10:42 AM IST
Cyber Fraud:‌ ಟ್ರಾಫಿಕ್‌ ಪೋಲಿಸರಿಗೆ ಆನಲೈನ್‌ನಲ್ಲಿ ದಂಡ ಪಾವತಿಸಲು ಹೋಗಿ  ₹60,000 ಕಳೆದುಕೊಂಡ ವ್ಯಕ್ತಿ!

ಸಾರಾಂಶ

*ಇ-ಚಲನ್ ಮೂಲಕ  ಟ್ರಾಫಿಕ್ ಪೋಲೀಸ್‌ರಿಗೆ ಹಣ ಪಾವತಿ *Transaction ಸಮಸ್ಯೆ ಎಂದು ಕಸ್ಟಮರ್‌ ಕೇರ್‌ಗೆ ಕಾಲ್‌ *Customer Care ಹೆಸರಿನಲ್ಲಿ ವಂಚಕರಿಂದ ಮೋಸ!

ಮುಂಬೈ(ಡಿ. 07): ವ್ಯಕ್ತಿಯೊಬ್ಬರು ಇ-ಚಲನ್ (E-Challan) ಮೂಲಕ  ಟ್ರಾಫಿಕ್ ಪೋಲೀಸ್‌ರಿಗೆ (Traffic Police) ಹಣ ಪಾವತಿ ಮಾಡಲು ಹೋಗಿ ತಮ್ಮ ಬ್ಯಾಂಕ್ ಖಾತೆಯಿಂದ 60,000 ರೂಪಾಯಿಗಳನ್ನು ಕಳೆದುಕೊಂಡ ಘಟನೆ ಮುಂಬೈನ ಮಾನ್‌ಖುರ್ಧ್‌ನಲ್ಲಿ (Mumbai - Mankhurd) ನಡೆದಿದೆ. ಮಾನ್‌ಖುರ್ಧ್‌ ನಿವಾಸಿ ಎಸ್.ಬಿ.ವಾಕಾಸೆ (SB Wakase) ಹಣ ಕಳೆದುಕೊಂಡ ವ್ಯಕ್ತಿ. ಪೋಲಿಸರಿಗೆ ದಂಡ ಪಾವತಿಸಲು ಇ-ಚಲನ್‌ ಪಾವತಿ ಮಾಡಿದ ಬಳಿಕ ವಾಕಾಸೆ ಅವರ ಖಾತೆಯಿಂದ ಹಣ ಡೆಬಿಟ್‌  ಆಗಿದೆ. ಆದರೆ ಆನ್‌ಲೈನ್ ಪಾವತಿ ಮಾಡಿದ ವ್ಯಾಲೆಟ್‌ ಆ್ಯಪ್‌ನಲ್ಲಿ ಹಣ ಡೆಬಿಟ್‌ ಟ್ರಾನ್ಸಾಕ್ಷನ್‌  (Transaction) ಬಗ್ಗೆ ಯಾವುದೇ ನೋಟಿಫಿಕೇಶನ್‌ ಇರಲಿಲ್ಲ. 

ರಿಮೋಟ್ ಆಕ್ಸೆಸ್ ಕಂಟ್ರೋಲ್ ಅಪ್ಲಿಕೇಶನ್ ಡೌನ್‌ಲೋಡ್!

ಆತಂಕಗೊಂಡು ಆ್ಯಪ್‌ನ ಕಸ್ಟಮರ್‌ ಕೇರ್‌ಗೆ (Customer Care) ಕರೆ ಮಾಡಲು ವಾಕಾಸೆ  ನಿರ್ಧರಿಸಿದ್ದಾರೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಕಸ್ಟಮರ್‌ ಕೇರ್‌ ನಂಬರ್‌ಗಾಗಿ ಹುಡುಕಾಡಿದ್ದಾರೆ. ಆದರೆ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಅನಲೈನ್‌ನಲ್ಲಿ ಫೋನ್‌ ನಂಬರ್‌ ಹಾಕಿದ್ದ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಕಸ್ಟಮರ್‌ ಕೇರ್ ಅಂದುಕೊಂಡು ವಂಚಕರ ಬಲೆಗೆ ಬಿದ್ದಿದ್ದ ವಾಕಾಸೆ  ತಮ್ಮ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ವಂಚಕರ ಆದೇಶದಂತೆ ಅವರ ಫೋನ್‌ನಲ್ಲಿ ರಿಮೋಟ್ ಆಕ್ಸೆಸ್ ಕಂಟ್ರೋಲ್ ಅಪ್ಲಿಕೇಶನ್ (Remote Access Control) ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಇದರಿಂದ ಮೊಬೈಲ್‌ನ ರಿಮೋಟ್‌ ಆಕ್ಸೆಸ್ ಪಡೆದ ಆನ್‌ಲೈನ್ ವಂಚಕರು ಹಣ ಡೆಬಿಟ್‌ ಮಾಡಿದ್ದಾರೆ.

Bitcoin Scam : ಇದೇ ಮೊದಲು.. ಡ್ರಗ್ ಡೀಲರ್‌ಗಳ ಬಿಟ್ ಕಾಯಿನ್ ಅಕೌಂಟ್  ಫ್ರೀಜ್!

ಪೋಲೀಸರ ಪ್ರಕಾರ ದೂರುದಾರ ಎಸ್.ಬಿ.ವಾಕಾಸೆ. ನವೆಂಬರ್ 24 ರಂದು ತಮ್ಮ ಕಾರಿಗಾಗಿ ಟ್ರಾಫಿಕ್ ಪೊಲೀಸರಿಗೆ 400 ರೂ ಇ-ಚಲನ್ ದಂಡವನ್ನು ಪಾವತಿಸಲು ಪ್ರಯತ್ನಿಸಿದ್ದರು. ವಾಕಾಸೆ  ಖಾತೆಯಿಂದ ಹಣ ಡೆಬಿಟ್ ಆಗಿದ್ದರೂ, ಹಣವು ಅವರ ಇ-ಪಾವತಿ ವಾಲೆಟ್‌ನಲ್ಲಿ ಪ್ರತಿಫಲಿಸಲಿಲ್ಲ. ಆತಂಕಕ್ಕೊಳಗಾದ ವಾಕಾಸೆ ಇ-ಪಾವತಿ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕಿದಾಗ ಒಂದು ಸಂಖ್ಯೆ ಸಿಕ್ಕಿದೆ.

Aadhaar Fraud: ಆಧಾರ್‌ ಪಡೆದು ಮೆಗಾ ಮೋಸ: ಕಂಗಾಲಾದ ಜನ..!

"ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು  ಉತ್ತರಿಸಿದ ವಂಚಕರು ಹಣವನ್ನು ಹಿಂದಿರುಗಿಸುವ ನೆಪದಲ್ಲಿ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಪ್ರೇರೇಪಿಸಿ, ರಿಮೋಟ್ ಆಕ್ಸೆಸ್ ಕಂಟ್ರೋಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಮಾಡಿದ್ದಾರೆ. ಜತೆಗೆ ಓಟಿಪಿ ನಂಬರ್‌ ಹೇಳುವಂತೆ ತಿಳಿಸಿದ್ದಾರೆ. ವಂಚಕರ ಹೇಳಿದಂತೆ ವಾಕಾಸೆ ಎಲ್ಲ ಮಾಹಿತಿ ನೀಡಿದ್ದಾರೆ. ಹಾಗಾಗಿ ನಾಲ್ಕು ವಿಭಿನ್ನ ಟ್ರಾನ್ಸ್ಯಾಕ್ಷನ್‌ಗಳಲ್ಲಿ 60000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ"ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯಿದೆಯ ಅನ್ವಯ ದೂರು ದಾಖಲು!

ತಾನು ವಂಚನೆಗೊಳಗಾಗಿದ್ದೇನೆ ಎಂದು ಅರಿತ ವಾಕಾಸೆ  ಟ್ರಾಂಬೆ ಪೊಲೀಸರನ್ನು (Trombay police) ಸಂಪರ್ಕಿಸಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ -Punishment for cheating by personation) ಮತ್ತು 420 (ವಂಚನೆ- cheating) ಮತ್ತು ಸೆಕ್ಷನ್ 66 ಸಿ (ಗುರುತಿನ ಕಳ್ಳತನಕ್ಕೆ ಶಿಕ್ಷೆ - punishment for identity theft), ಮಾಹಿತಿ ತಂತ್ರಜ್ಞಾನ ಕಾಯಿದೆಯ 66D (punishment for cheating by personation by using computer resource) ಅನ್ವಯ ಪ್ರಕರಣವನ್ನು ದಾಖಲಿಸಿದ್ದಾರೆ. 

ಮತ ಚಲಾವಣೆ ವೇಳೆ ವಂಚನೆ : ಸಾವಿರಾರು ರುಪಾಯಿ ಹಣ ಕಳೆದುಕೊಂಡ ಮಹಿಳೆಯರು!

ಇತ್ತೀಚೆಗೆ ನಡೆದ ಬಿಹಾರ ಪಂಚಾಯತ್‌ ಚುನಾವಣೆಯಲ್ಲಿ (Bihar Panchayat Elections) ಮತದಾನ ಮಾಡಿದ (Vote) ಕೆಲ ಮಹಿಳೆಯರು, ಮತ ಚಲಾಯಿಸಿ ಕೆಲ ಹೊತ್ತಿನಲ್ಲೇ ತಮ್ಮ ಬ್ಯಾಂಕ್‌ ಖಾತೆಯಲ್ಲಿ (Bank Account) ಇಟ್ಟಿದ್ದ ಸಾವಿರಾರು ರುಪಾಯಿ ಹಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ಪುರ್ನಿಯಾ ಜಿಲ್ಲೆಯ (Purniya District) ಚೋಪ್ರಾ ಪಂಚಾಯತ್‌ನ ರಿಹುವಾ ಗ್ರಾಮದಲ್ಲಿ ನ.29ರಂದು ಪಂಚಾಯತ್‌ ಚುನಾವಣೆಗೆ ಮತದಾನ ನಡೆದಿತ್ತು.

ಚುನಾವಣಾಧಿಕಾರಿಗಳು (Election Officer) ತಾವು ಮತ ಚಲಾವಣೆಗೆ ಬಂದಾಗ ಬಯೋಮೆಟ್ರಿಕ್‌ನಲ್ಲಿ ತಮ್ಮ ಫಿಂಗರ್‌ಪ್ರಿಂಟ್‌ (Finger Print) ಪಡೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೆನರಾ ಬ್ಯಾಂಕ್‌ನಲ್ಲಿದ್ದ (Canara Bank) ತಮ್ಮ ಹಣವೆಲ್ಲಾ ಮಾಯವಾಗಿದೆ ಎಂದು ಮತ ಚಲಾಯಿಸಿದ 30ಕ್ಕೂ ಹೆಚ್ಚು ಮಹಿಳೆಯರು ದೂರಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ