WhatsApp Disappearing Messages ಸಕ್ರಿಯಗೊಳಿಸುವುದು ಹೇಗೆ? ಇದರಿಂದಾಗುವ ಲಾಭಗಳೇನು?

Published : Dec 09, 2021, 12:53 PM ISTUpdated : Dec 09, 2021, 01:14 PM IST
WhatsApp Disappearing Messages ಸಕ್ರಿಯಗೊಳಿಸುವುದು ಹೇಗೆ? ಇದರಿಂದಾಗುವ ಲಾಭಗಳೇನು?

ಸಾರಾಂಶ

*WhatsApp ಡಿಸಪಿಯರಿಂಗ್‌ ಮೇಸೆಜಿಸ್‌ ಬಳಸುವುದು ಹೇಗೆ? *ಸಂದೇಶಗಳು ಕಣ್ಮರೆಯಾಗುವುದರಿಂದ ನಿಮಗೇನು ಲಾಭ? *ಇಲ್ಲಿದೆ Disappearing Messages Step by Step ಡಿಟೇಲ್ಸ್‌!

ಪ್ರಪಂಚದಲ್ಲೇ ಅತಿ ಹೆಚ್ಚು ಬಳಕೆಯಾಗುವ ಮೇಸೆಜಿಂಗ್‌ ಟೂಲ್ಸ್‌ಗಳಲ್ಲಿ ವಾಟ್ಸಪ್‌‌ (WhatsApp) ಕೂಡ ಒಂದು. ಮೆಟಾ - ಫೇಸ್‌ಬುಕ್ (Meta- Facebook) ಒಡೆತನದ ವಾಟ್ಸ್‌ಪ್ ನಿಮ್ಮ ಮೇಸೆಜಿಂಗ್‌ ಅನುಭವವನ್ನು ಉತ್ತಮಗೊಳಿಸಲು ಹಲವಾರು ಆಯ್ಕೆಗಳನ್ನು ನೀಡುತ್ತದೆ. ಜತೆಗೆ ಬಳಕೆದಾರರ ಪ್ರೈವಸಿ (ಗೌಪ್ಯತೆ- Privacy) ಕಾಪಾಡಲು ಚಾಟ್‌ ಎನ್‌ಕ್ರಿಪ್ಶನ್‌ನಂತಹ (Chat Encryption) ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಾಟ್ಸಾಪ್ ಕಳೆದ ವರ್ಷ ಕಣ್ಮರೆಯಾಗುವ ಸಂದೇಶಗಳ ( Disappearing Messages) ಫೀಚರ್ ಪರಿಚಯಿಸಿತ್ತು. ಈ ಫೀಚರ್‌ಅನ್ನು ಆನ್‌ ಮಾಡಿದಾಗ  ನಾವು ಇತರರಿಗೆ ಕಳುಹಿಸಿದ ಅಥವಾ ಇತರರಿಂದ ಪಡೆದ ಮೇಸೆಜ್‌ಗಳು ನಿರ್ದಿಷ್ಟ ಅವಧಿ ನಂತರ ಚಾಟ್‌ನಿಂದ ಡಿಲೀಟ್‌ ಆಗುತ್ತವೆ.

ಈಗ ಈ ಡಿಸಪಿಯರಿಂಗ್‌ ಮೆಸೆಜಿಸ್‌ಗೆ  ಇನ್ನಷ್ಟು ವೈಶಿಷ್ಟ್ಯಗಳನ್ನು ಸೇರಿಸಿದ್ದು  ಈಗ ಬಳಕೆದಾರರು ಕಣ್ಮರೆಯಾಗುವ ಸಂದೇಶಗಳ ಸಮಯವನ್ನು 90 ದಿನಗಳವರೆಗೆ ಹೆಚ್ಚಿಸಲು ಅವಕಾಶ ನೀಡಿದೆ. ಇದಲ್ಲದೆ, ವಾಟ್ಸ್‌ಪ್ ಬಳಕೆದಾರರು ಎಲ್ಲಾ ಹೊಸ ಚಾಟ್‌ಗಳಿಗೆ ಡೀಫಾಲ್ಟ್ (Default) ಆಗಿ ಕಣ್ಮರೆಯಾಗುವ ಸಂದೇಶಗಳನ್ನು ಆನ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.

ಇಲ್ಲಿಯವರೆಗೆ, ಕಣ್ಮರೆಯಾಗುವ ಸಂದೇಶಗಳ ಫೀಚರ್ ಏಳು ದಿನಗಳ ನಂತರ ಚಾಟ್‌ನಿಂದ‌ ಎಲ್ಲ ಸಂದೇಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತಿತ್ತು. ಈ ಫೀಚರ್ ಸಕ್ರಿಯಗೊಳಿಸಿದಾಗ ಚಾಟ್‌ನಿಂದ ಎಲ್ಲಾ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತವೆ. ಕಣ್ಮರೆಯಾಗುವ ಸಂದೇಶಗಳಿಗೆ ಕಂಪನಿಯು ಎರಡು ಹೊಸ ಅವಧಿಗಳನ್ನು ಸೇರಿಸಿದ್ದು 24 ಗಂಟೆಗಳು ಮತ್ತು 90 ದಿನಗಳು ನಂತರ ಮೇಸೆಜ್‌ಗಳು ಅಳಿಸಿ ಹೋಗುವಂತೆ ಮಾಡಲು ಆಯ್ಕೆ ನೀಡಿದೆ. ಜತೆಗೆ ಈಗಾಗಲೇ ಇದ್ದ  ಏಳು ದಿನಗಳ ಆಯ್ಕೆ ಕೂಡ ಹಾಗೆಯೇ ಇರಲಿದೆ. ಹಾಗಾಗಿ ಒಟು 3 ಅವಧಿಗಳಲ್ಲಿ ಡಿಸಪಿಯರಿಂಗ್‌ ಫೀಚರ್‌ ಬಳಸಬಹುದಾಗಿದೆ.

ಕಣ್ಮರೆಯಾಗುವ ಸಂದೇಶಗಳನ್ನು (Disappearing Messages) ಹೇಗೆ ಸಕ್ರಿಯಗೊಳಿಸುವುದು?

1. WhatsApp ಚಾಟ್ ತೆರೆಯಿರಿ.

2. ಕಾಂಟ್ಯಾಕ್ಟ ಹೆಸರನ್ನು (contact’s name)ಟ್ಯಾಪ್ ಮಾಡಿ.

3. ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ (Prompt) ಮಾಡಿದರೆ, 'Continue' ಟ್ಯಾಪ್ ಮಾಡಿ.

4. 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ಡೀಫಾಲ್ಟ್ ಆಗಿ ಈ ಪೀಚರ್ ಸಕ್ರಿಯಗೊಂಡಾಗ, ಎಲ್ಲಾ ಹೊಸ ಚಾಟ್‌ಗಳು (ನೀವು ಅಥವಾ ಇನ್ನೊಬ್ಬ ವ್ಯಕ್ತಿ)  ನೀವು ಆಯ್ಕೆ ಮಾಡಿದ ಅವಧಿಯಲ್ಲಿ ಕಣ್ಮರೆಯಾಗುತ್ತವೆ. ಗೌಪ್ಯತೆ ಸೆಟ್ಟಿಂಗ್‌ಗಳಿಗೆ (Privacy settings ) ಹೋಗಿ ಮತ್ತು 'ಡೀಫಾಲ್ಟ್ ಸಂದೇಶ ಟೈಮರ್' ಆಯ್ಕೆಮಾಡಿ ಇದನ್ನು ಬದಲಾಯಿಸಬಹುದು.

ಕಣ್ಮರೆಯಾಗುವ ಸಂದೇಶಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಯಾವುದೇ ಬಳಕೆದಾರರು ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳಿಸಬಹುದು. ಒಮ್ಮೆ ನಿಷ್ಕ್ರಿಯಗೊಳಿಸಿದರೆ, ಚಾಟ್‌ನಲ್ಲಿ ಕಳುಹಿಸಲಾದ ಹೊಸ ಸಂದೇಶಗಳು ಇನ್ನು ಮುಂದೆ ಡಿಲೀಟ್‌ ಆಗುವುದಿಲ್ಲ.

1. WhatsApp ಚಾಟ್ ತೆರೆಯಿರಿ.

2. ಕಾಂಟ್ಯಾಕ್ಟ ಹೆಸರನ್ನು (contact’s name)ಟ್ಯಾಪ್ ಮಾಡಿ.

3. ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ ಮಾಡಿದರೆ, 'Continue' ಟ್ಯಾಪ್ ಮಾಡಿ.

4. ಆಫ್ ಆಯ್ಕೆಮಾಡಿ (Select OFF)

ಈ ಫೀಚರ್‌ ವಾಟ್ಸಾಪ್ ಗ್ರೂಪ್‌ಗಳಿಗೂ ಆನ್ ಮಾಡಲು ನಿಮಗೆ ಅವಕಾಶ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಈ ಹೊಸ ವೈಶಿಷ್ಟ್ಯವು ಐಚ್ಛಿಕವಾಗಿದೆ (optional) ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಯಾವುದೇ ಚಾಟ್‌ಗಳನ್ನು ಬದಲಾಯಿಸುವುದಿಲ್ಲ ಅಥವಾ ಅಳಿಸುವುದಿಲ್ಲ.

“ಚಾಟ್‌ನಲ್ಲಿನ ಸಂದೇಶ ಎಷ್ಟು ಕಾಲ ಉಳಿಯಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿರಬೇಕು. ನಾವು ಟೈಪ್ ಮಾಡುವ ಪ್ರತಿಯೊಂದರ ಡಿಜಿಟಲ್ ಪ್ರತಿಯನ್ನು ಅದರ ಬಗ್ಗೆ ಯೋಚಿಸದೆ ಹಾಗೆಯೇ ಬಿಟ್ಟು ಬಿಡುವ ಹವ್ಯಾಸ ಬೆಳೆಸಿಕೊಂಡಿದ್ದೇವೆ. ಇದು ನಾವು ಹೇಳಿದ ಪ್ರತಿಯೊಂದು ಮಾತಿನ ಶಾಶ್ವತ ದಾಖಲೆಯನ್ನು ಮಾಡಲು ನಮ್ಮ  ಸುತ್ತಲೂ ತಿರುಗಾಡುತ್ತ ಟಿಪ್ಪಣಿ ತೆಗೆದುಕೊಳ್ಳುವವರಿಗೆ ಸಮಾನವಾಗಿದೆ. ಇದಕ್ಕಾಗಿಯೇ ಕಳೆದ ವರ್ಷ ನಾವು ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಪರಿಚಯಿಸಿದ್ದೇವೆ ಮತ್ತು ಇತ್ತೀಚೆಗೆ ಫೋಟೋಗಳು ಮತ್ತು ವೀಡಿಯೊಗಳು ಒಮ್ಮೆ ವೀಕ್ಷಿಸಿದ ನಂತರ ತಕ್ಷಣವೇ ಕಣ್ಮರೆಯಾಗುತ್ತವೆ, ”ಎಂದು ಕಂಪನಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ