ನವದೆಹಲಿ (ಡಿ.09): ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat ) ಸೇರಿ ಅನೇಕರು ಪ್ರಯಾಣಿಸುತ್ತಿದ್ದ ಎಂಐ-17 ಸೀರೀಸ್‌ನ ಸೇನಾ ಹೆಲಿಕಾಪ್ಟರ್ (Army Helicopter) ತಮಿಳುನಾಡಿನಲ್ಲಿ (Tamilnadu) ಪತನಗೊಂಡಿದೆ. ಎಂಐ-17 ಅನ್ನು ಪ್ರಪಂಚದಲ್ಲಿರುವ ಅತ್ಯಂತ ಬಹುಮುಖ ಮತ್ತು ಸುಧಾರಿತ ಮಿಲಿಟರಿ ಹೆಲಿಕಾಪ್ಟರ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ ಎಂಐ-17 (MI 17) ಸರಣಿಗೆ ಸೇರಿದ ಹೆಲಿಕಾಪ್ಟರ್‌ಗಳು ಅನೇಕ ಬಾರಿ ಪತನಗೊಂಡು ಇಂಥದ್ದೇ ಅವಘಡಗಳು ನಡೆದಿವೆ. ಸದ್ಯ ರಾವತ್ ಅವರು ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್ ಅನ್ನು ಮಧ್ಯಮ ಎಂಐ-17ವಿ-5 ಎಂದು ಗುರುತಿಸಲಾಗಿದ್ದು, ಇದೂ ಸಹ ವಿಶ್ವದ ಅತ್ಯಾಧುನಿಕ ಮತ್ತು ಸುಧಾರಿತ ಕಾಪ್ಟರ್‌ಗಳಲ್ಲಿ ಒಂದು ಎನ್ನಲಾಗುತ್ತಿದೆ. ಅದರ ಇನ್ನಷ್ಟು ವಿಶೇಷತೆಗಳೇನು ಎಂಬ ವಿವರ ಇಲ್ಲಿದೆ.
ಸುರಕ್ಷತೆಗೆ ಜಾಗತಿಕ ಪ್ರಸಿದ್ಧಿ
undefined
ಎಂಐ-8/17 ಕುಟುಂಬ ಬಳಕೆಯ ಹೆಲಿಕಾಪ್ಟರ್‌ಗಳಾದರೆ (Helicopter), ಎಂಐ-17ವಿ-5 ಮಿಲಿಟರಿ ಸಾರಿಗೆ. ಇದು ಅತ್ಯಂತ ಸರ್ವ ಸಮರ್ಥ, ವಿಶ್ವಾಸಾರ್ಹ ಮತ್ತು ಹಣಕ್ಕೆ ತಕ್ಕ ಸುರಕ್ಷತಾ ಸೌಕರ‍್ಯಗಳನ್ನು ಒಳಗೊಂಡ ಜಾಗತಿಕ ಪ್ರಸಿದ್ಧಿ ಪಡೆದ ಸೇನಾ ಕಾಪ್ಟರ್. ಇವುಗಳನ್ನು ರಷ್ಯಾದ (Russia) ಹೆಲಿಕಾಪ್ಟರ್‌ಗಳ ಅಂಗ ಸಂಸ್ಥೆ ಕಜನ್ ಹೆಲಿಕಾಪ್ಟರ್ ಉತ್ಪಾದಿಸುತ್ತದೆ. ಈ ಕಾಪ್ಟರ್‌ಗಳನ್ನು ಸೈನ್ಯ ಮತ್ತು ಶಸ್ತ್ರಾಸ್ತ್ರ ಸಾರಿಗೆ, ಅಗ್ನಿಶಾಮಕ ದಳ, ಬೆಂಗಾವಲು ಪಡೆ, ಗಸ್ತು ಮತ್ತು ಶೋಧ ಸೇರಿ ಅನೇಕ ಮಿಲಿಟರಿ ಕಾರ್ಯಾಚರಣೆಗಳಿಗೆ ಬಳಕೆ ಮಾಡಲಾಗುತ್ತದೆ. ಭಾರತೀಯ ವಾಯುಪಡೆಯಲ್ಲಿ ಇಂಥ ಕಾಪ್ಟರ್‌ಗಳ ಬಳಕೆಗಾಗಿ ರಕ್ಷಣಾ ಸಚಿವಾಲಯವು ಡಿಸೆಂಬರ್ 2008ರಲ್ಲಿ ರಷ್ಯಾದಿಂದ 80 ಹೆಲಿಕಾಪ್ಟರ್‌ಗಳಿಗೆ ಆರ್ಡರ್ ಮಾಡಿತ್ತು. 2011ರಿಂದ ಈ ಹೆಲಿಕಾಪ್ಟರ್ ವಿತರಣೆ ಆರಂಭವಾಗಿ 2018ರಲ್ಲಿ ಅಷ್ಟೂಕಾಪ್ಟರ್‌ಗಳನ್ನು ರಷ್ಯಾ ಭಾರತಕ್ಕೆ ಹಸ್ತಾಂತರಿಸಿದೆ.
ಎಂಜಿನ್ ಮತ್ತು ಕಾರ‍್ಯಕ್ಷಮತೆ
ಎಂಐ-17ವಿ-5 ವಿಮಾನವನ್ನು ಕ್ಲಿಮೋವ್ ಟಿವಿ3-117ವಿಎಂ ಅಥವಾ ವಿಕೆ-2500 ಟರ್ಬೋ ಶಾಫ್ಟ್ ಎಂಜಿನ್‌ನಿಂದ ನಿಯಂತ್ರಿಸಲಾಗುತ್ತದೆ. ಟಿವಿ3-117ವಿಎಂ ಗರಿಷ್ಠ 2100 ಎಚ್‌ಪಿ ಶಕ್ತಿಯನ್ನು ಉತ್ಪಾದಿಸಿದರೆ, ವಿಕೆ-2500 ಗರಿಷ್ಠ 2700ಎಚ್‌ಪಿ ವಿದ್ಯುತ್ (Electricity) ಅನ್ನು ಒದಗಿಸುತ್ತದೆ. ವಿಕೆ-2500 ಎಂಜಿನ್ ಹೊಂದಿರುವ ಕಾಪ್ಟರ್‌ಗಳನ್ನು ಅತ್ಯಂತ ಸುಧಾರಿತ ಮತ್ತು ಡಿಜಿಟಲ್ ನಿಯಂತ್ರಣ ಹೊಂದಿದ ಕಾಪ್ಟರ್‌ಗಳೆಂದು ಪರಿಗಣಿಸಲಾಗುತ್ತದೆ. ಇದು 580 ಕಿ.ಮೀ ಎತ್ತರದಲ್ಲಿ, ಗಂಟೆಗೆ 250 ಕಿ.ಮೀ ದೂರ ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಎರಡು ಸಹಾಯಕ ಇಂಧನ ಟ್ಯಾಂಕ್‌ಗಳನ್ನು (tank) ಅಳವಡಿಸಿದಾಗ ಹಾರುವ ಸಾಮರ್ಥ್ಯವನ್ನು 1,065 ಕಿಮೀ ಎತ್ತರಕ್ಕೆ ವಿಸ್ತರಿಸಬಹುದು. ಹೆಲಿಕಾಪ್ಟರ್ ಗರಿಷ್ಠ 6,000 ಮೀಟರ್ ಎತ್ತರದಲ್ಲಿ ಹಾರಬಲ್ಲದು.
ಕ್ಯಾಬಿನ್ ಮತ್ತು ವೈಶಿಷ್ಟ್ಯಗಳು
ಎಂಐ-17 ಸಾರಿಗೆ ಹೆಲಿಕಾಪ್ಟರ್ ದೊಡ್ಡ ಕ್ಯಾಬಿನ್ ಜೊತೆಗೆ ಸ್ಟಾಂಡರ್ಡ್ ಪೋರ್ಟ್‌ಸೈಡ್ ಬಾಗಿಲು (Port Side Door) ಹೊಂದಿರುತ್ತದೆ. ತ್ವರಿತ ಪಡೆ ಮತ್ತು ಸರಕು ಸಾಗಣೆಗಾಗಿ ಹಿಂಭಾಗದಲ್ಲಿ ರಾಂಪ್ ಹೊಂದಿರುತ್ತದೆ. ಹೆಲಿಕಾಪ್ಟರ್ ಗರಿಷ್ಠ 13,000 ಕೆಜಿ ವಸ್ತುವೊಂದಿಗೆ ಟೇಕ್‌ಆಫ್ (Take Off) ಆಗುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 36 ಶಸ್ತ್ರಸಜ್ಜಿತ ಸೈನಿಕರು ಅಥವಾ 4,500 ಕೇಜಿ ಭಾರವನ್ನು ಜೋಲಿ ಮೇಲೆ ಸಾಗಿಸಬಹುದು. ಉಷ್ಣವಲಯ, ಕಡಲ ಹವಾಮಾನ ಹಾಗೆಯೇ ಮರುಭೂಮಿ ಸೇರಿದಂತೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಇವುಗಳನ್ನು ಬಳಕೆ ಮಾಡಬಹುದು.
ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್
ಎಂಐ-17ವಿ-5 ನಾಲ್ಕು ಮಲ್ಟಿಫಂಕ್ಷನ್ ಡಿಸ್ಪೆಲ್ಸ್, ರಾತ್ರಿ ದೃಷ್ಟಿಉಪಕರಣಗಳು, ಆನ್-ಬೋರ್ಡ್ ಹವಾಮಾನ ರಾಡಾರ್ ಮತ್ತು ಆಟೋಪೈಲಟ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಏವಿಯಾನಿಕ್ಸ್ ಅನ್ನು ಹೊಂದಿರುವ ಗಾಜಿನ ಕಾಕ್‌ಪಿಟ್ ಹೊಂದಿರುತ್ತದೆ. ಭಾರತದಲ್ಲಿ ಎಂಐ-17ವಿ-5 ಹೆಲಿಕಾಪ್ಟರ್‌ಗಳು ನ್ಯಾವಿಗೇಷನ್, ಮಾಹಿತಿ-ಪ್ರದರ್ಶನಗಳು ಮತ್ತು ಕ್ಯೂಯಿಂಗ್ ಸಿಸ್ಟಮ್‌ಗಳನ್ನೂ ಒಳಗೊಂಡಿರುತ್ತವೆ.
ಶಸ್ತ್ರಾಸ್ತ್ರ ವ್ಯವಸ್ಥೆ
ಎಂಐ-17ವಿ-5 ಅನ್ನು ಕೇವಲ ಸಾರಿಗೆಯಾಗಿ ಮಾತ್ರವಲ್ಲದೆ ಪ್ರತಿಕೂಲ ವಾತಾವರಣದಲ್ಲೂ ಸೇನಾ ಕಾರ‍್ಯಚರಣೆ ಮತ್ತು ಸರಕು ಸಾಗಣೆಗೆ ಬಳಕೆಯಾಗುತ್ತವೆ. ಎಸ್-8ರಾಕೆಟ್, 23ಎಂಎಂ ಮಷಿನ್ ಗನ್, ಪಿಕೆಟಿ ಮಷಿನ್ ಗನ್, ಎಕೆಎಂ ಸಬ್ ಮಷಿನ್ ಗನ್‌ಗಳನ್ನು ಇದರಲ್ಲಿ ಲೋಡ್ ಮಾಡಬಹುದು.
ಮೋದಿ ಪ್ರಯಾಣಿಸಿದ್ದ ಕಾಪ್ಟರ್
2017ರಲ್ಲಿ ಎಂಐ-17ವಿ5 ವಿಮಾನಗಳನ್ನು ವಿವಿಐಪಿ ಸಾರಿಗೆಯಾಗಿ ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಪ್ರಯಾಣಕ್ಕೆ ಬಳಕೆ ಮಾಡಲು ಭಾರತೀಯ ವಾಯುಸೇನೆ ನಿರ್ಧರಿಸಿತ್ತು. ಹೀಗಿ ವಿವಿಐಪಿ ಪ್ರಯಾಣಿಕ ಕಾಪ್ಟರ್ ಆಗಿ ಮಾರ್ಪಾಡಾದ ಎಂಐ-17ವಿ5 ಸರಣಿ ವಿಮಾನವನ್ನು ಒಮ್ಮೆ ಪ್ರಧಾನಿ ಮೋದಿ ಅವರ ಪ್ರಯಾಣಕ್ಕೂ ಬಳಕೆ ಮಾಡಲಾಗಿತ್ತು.