ಜನಪ್ರಿಯ ಸೋಶಿಯಲ್ ಮೀಡಿಯಾವಾದ WhatsAppನಲ್ಲಿ ಇನ್ಮುಂದೆ ಬೇಕಾಬಿಟ್ಟಿ ಗ್ರೂಪ್‌ಗಳನ್ನು ಸೃಷ್ಟಿಸಿ, ಸದಸ್ಯರನ್ನು ಸೇರಿಸುವ ಚಾಳಿಗೆ ಕಡಿವಾಣ ಬೀಳಲಿದೆ. ಹೊಸ ನಿಯಮವನ್ನು ರೂಪಿಸುವಂತೆ ಕೇಂದ್ರ ಸರ್ಕಾರ WhatsAppಗೆ ಹೇಳಿದೆ. ಅದೇನು ನಿಯಮ? ಇಲ್ಲಿದೆ ಡೀಟೆಲ್ಸ್
ಸುಳ್ಳು ಸುದ್ದಿ, ವದಂತಿಗಳು ಜನಪ್ರಿಯ ಇನ್ಸ್ಟಂಟ್ ಮೆಸೇಜಿಂಗ್ ತಾಣವಾದ WhatsApp ಹಾಗೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.ಇವುಗಳಿಗೆ ಕಡಿವಾಣ ಹಾಕಲು ವಾಟ್ಸಪ್ ಹಾಗೂ ಸರ್ಕಾರ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಲೇ ಇವೆ.
ಇನ್ನೊಂದು ಕಡೆ, ಬೇಕಾಬಿಟ್ಟಿಯಾಗಿ ಯಾವುದೇ ಗೊತ್ತುಗುರಿಯಿಲ್ಲದ ಗ್ರೂಪ್‌ಗಳನ್ನು ಸೃಷ್ಟಿಸಿ ಸದಸ್ಯರನ್ನು ಸೇರಿಸುವುದು ಕೂಡಾ ಕೆಟ್ಟ ಚಾಳಿಯಾಗಿ ಬಿಟ್ಟಿದೆ. ಇದೀಗ ಅಂತಹ ಕೆಟ್ಟ ಚಟಗಳಿಗೆ ಚಾಟಿ ಬೀಸಲು ಸರ್ಕಾರ ಮುಂದಾಗಿದೆ.
ಗ್ರೂಪ್‌ಗೆ ಯಾರಾನ್ನಾದರೂ ಸೇರಿಸುವ ಮುನ್ನ ಅವರ ಅನುಮತಿಯನ್ನು ಪಡೆಯುವಂತೆ ಫೀಚರ್ ಒಂದನ್ನು ರೂಪಿಸಲು ಕೇಂದ್ರ ಇಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಇಲಾಖೆಯು ವಾಟ್ಸಪ್‌ಗೆ ಮನವಿ ಮಾಡಿದೆ.
ಕೆಲವರು ಅನುಮತಿ ಪಡೆಯದೇ ಗ್ರೂಪ್‌ಗಳಲ್ಲಿ ಸುಖಾಸುಮ್ಮನೆ ಸೇರಿಸುತ್ತಾರೆ. ಹೊರಬಂದರೂ ಪುನ: ಸೇರಿಸುತ್ತಾರೆ, ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: WhatsAppನಿಂದ ಮತ್ತೊಂದು ಬಂಪರ್ ಫೀಚರ್! ಬೇಕಂತಿಲ್ಲ ‘ಲಾಸ್ಟ್ ಸೀನ್‘ ಟೆನ್ಷನ್
WhatsAppನ ಸದ್ಯದ ನಿಯಮಗಳ ಪ್ರಕಾರ ಯಾರನ್ನದಾರೂ ಗ್ರೂಪ್‌ಗೆ ಸೇರಿಸಬೇಕಾದರೆ, ಆ ವ್ಯಕ್ತಿಯ ನಂ. ಅಡ್ಮಿನ್‌ನ ಫೋನ್‌ಬುಕ್‌ನಲ್ಲಿ ಸೇವ್ ಆಗಿರಬೇಕು. ಗ್ರೂಪ್‌ನಿಂದ ಸದಸ್ಯನೊಬ್ಬ 2ನೇ ಬಾರಿ ಹೊರಹೋದರೆ, 3ನೇ ಬಾರಿ ಆತ/ಆಕೆಯನ್ನು ಗ್ರೂಪ್‌ಗೆ ಸೇರಿಸುವಂತಿಲ್ಲ.
ಆದರೆ, ಅದಕ್ಕೂ ಕೆಲ ಕಳ್ಳದಾರಿಗಳನ್ನು ಕೆಲವರು ಹುಡುಕಿಕೊಂಡಿದ್ದಾರೆ. ಇನ್ನೊರ್ವ ಅಡ್ಮಿನ್ ಮೂಲಕ ಅಂಥವರನ್ನು ಮತ್ತೊಮ್ಮೆ ಆ ಗ್ರೂಪ್‌ಗೆ ಸೇರಿಸಬಹುದಾಗಿದೆ.
ಇದನ್ನೂ ಓದಿ: ಇನ್ಮುಂದೆ ಈ ಫೋನ್‌ಗಳಿಗೆ ಸಾಫ್ಟ್ ವೇರ್ ಅಪ್ಡೇಟ್ ಸಿಗಲ್ಲ!
ಆದ್ದರಿಂದ, ಹಾಲಿ ಚಾಲ್ತಿಯಲ್ಲಿರುವ ನಿಯಮಗಳು ಸಾಲಲ್ಲ, ಹೊಸ ನಿಯಮಗಳನ್ನು ರೂಪಿಸುವುದು ಅನಿವಾರ್ಯ ಎಂದು ಇಲಾಖೆಯು ವಾಟ್ಸಪ್‌ಗೆ ಹೇಳಿದೆ. WhatsApp ಈ ಮನವಿಗೆ ಹೇಗೆ ಸ್ಪಂದಿಸುತ್ತದೆ ಎಂದು ಕಾದುನೋಡಬೇಕು.
ಈ ಹಿಂದೆ, ಕೇಂದ್ರ ಸರ್ಕಾರದ ಮನವಿಯಂತೆ ಭಾರತದಲ್ಲಿ ಗ್ರೀವಿಯೆನ್ಸ್ ಅಧಿಕಾರಿಯನ್ನು ನೇಮಿಸಲು WhatsApp ಒಪ್ಪಿಕೊಂಡಿತ್ತು.