ಅಮೇಜಾನ್‌ನ ಅಪರೂಪದ ಸೇಲ್ ಐತಿ, iPhoneಗಳ ಮೇಲೆ ಭರ್ಜರಿ ರಿಯಾಯಿತಿ!

By Web Desk  |  First Published Dec 10, 2018, 1:34 PM IST

ಅಪರೂಪದ ಸಂದರ್ಭಗಳ ಹೊರತಾಗಿ Apple ಪ್ರಾಡಕ್ಟ್‌ಗಳು ಜನಸಾಮನ್ಯರ ಕೈಗೆಟಕುವುದಿಲ್ಲ. ಇದೀಗ ಭಾರತದಲ್ಲಿ Apple Fest Saleಗೆ ಚಾಲನೆ ನೀಡಿರುವ ಇ-ಕಾಮರ್ಸ್ ದೈತ್ಯ Amazon, Apple ಪ್ರಾಡಕ್ಟ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. 


Apple ಪ್ರಾಡಕ್ಟ್‌ಗಳೆಂದರೆ ಬಹಳ ಕಾಸ್ಟ್ಲೀ ಎಂಬ ಭಾವನೆ ಸಾಮಾನ್ಯ. ಜನಸಾಮಾನ್ಯರು iPhone ಕೊಳ್ಳುವುದು ಸಾಮಾನ್ಯ ಮಾತಲ್ಲ. iPhone, MacBookಗಳಂತಹ Apple ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ಇರುವುದು ಕೂಡಾ ಅಪರೂಪ.  ಆದರೆ ಇ-ಕಾಮರ್ಸ್ ದೈತ್ಯ Amazon, Apple ಗ್ಯಾಜೆಟ್‌ಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದೆ.

ಭಾರತದಲ್ಲಿ Apple Fest Saleಗೆ ಚಾಲನೆ ನೀಡಿರುವ Amazon,  Apple ಪ್ರಾಡಕ್ಟ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಡಿ.08ರಂದು ಆರಂಭವಾಗಿರುವ ಈ ಸೇಲ್ ಡಿ.14ರವರೆಗೆ ನಡೆಯಲಿದೆ. 

Tap to resize

Latest Videos

Apple iPhone, MacBook, ಅಥವಾ ಇನ್ನಾವುದಾದರೂ Apple ಗ್ಯಾಜೆಟ್ ಖರೀದಿಸುವ, ಅಪ್ಗ್ರೇಡ್ ಮಾಡುವ  ಅಥವಾ ಗಿಫ್ಟ್ ಮಾಡುವ ಯೋಚನೆಯಲ್ಲಿರುವವರಿಗೆ ಇದು ಸಕಾಲ! ಆ್ಯಪಲ್ ಕಾಲ! 

iPhoneಗಳ ಮೇಲೆ ಸುಮಾರು ₹16,000 ವರೆಗೆ  ಹಾಗೂ MacBookಗಳ ಮೇಲೆ ₹9,000 ಗಳಷ್ಟು ಡಿಸ್ಕೌಂಟನ್ನು Amazon ಪ್ರಕಟಿಸಿದೆ. ಜೊತೆಗೆ, EMIಯಾಗಿ ಪರಿವರ್ತಿಸುವ ಅವಕಾಶವನ್ನೂ Amazon ನೀಡಿದೆ. 

ಇದನ್ನೂ ಓದಿ: ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ Xiaomi! ಹೇಗಿದೆ ನೋಡಿ...

Appple Fest ಸೇಲ್‌ಗಾಗಿ Amazon ಒಂದು ಇಡಿಯ ಪೇಜನ್ನೇ ಮೀಸಲಾಗಿಟ್ಟಿದೆ.  ಕೆಲವು ಬೆಸ್ಟ್ ಡೀಲ್‌ಗಳನ್ನು ಇಲ್ಲಿ ಕೊಡಲಾಗಿದೆ.

iPhone X 64GB ಬರೇ ₹ 74,999 ಗೆ ಲಭ್ಯ (₹ 5,000 off) +  9 months EMI ಅವಕಾಶ

iPhone 6S 32GB ಬರೇ ₹24,999 ಗೆ ಲಭ್ಯ (₹5,000 off)

iPhone 6 32GB ಬರೇ ₹20,999 ಗೆ ಲಭ್ಯ (₹2,751 off) 

iPhone X ಹೊರತುಪಡಿಸಿ ಎಲ್ಲಾ  iPhoneಗಳಿಗೆ 6 ತಿಂಗಳು ಜೀರೋ ಕಾಸ್ಟ್  EMI ಅವಕಾಶ ಲಭ್ಯವಿದೆ.

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

MacBookಗಳ ಮೇಲೆ ಇರುವ ಆಫರ್‌ಗಳು:

MacBook Air 2018 8GB+128GB ಗೆ ₹1,05,900 (₹ 9,000 off)

MacBook Air 8GB+128GB ಗೆ ₹ 57,990 (₹ 5,000 off)

MacBook ಖರೀದಿ ಮೇಲೆಯೂ ಜೀರೋ ಕಾಸ್ಟ್  EMI ಅವಕಾಶ ಲಭ್ಯವಿದ್ದೂ, ವಿನಿಮಯ ಆಫರ್ ಕೂಡಾ ಇದೆ!

click me!