ಅಮೆಜಾನ್‌, ಫ್ಲಿಪ್‌ಕಾರ್ಟ್‌ನಿಂದ ಡಿಸ್ಕೌಂಟ್‌ ವಿವರ ಕೇಳಿದ ಸರ್ಕಾರ

By Kannadaprabha News  |  First Published Oct 21, 2019, 11:03 AM IST

ಖ್ಯಾತ ಆನ್ ಲೈನ್ ಕಂಪನಿಗಳಾದ ಅಮೇಜಾನ್, ಫ್ಲಿಪ್ ಕಾರ್ಟ್ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಬಿಗ್ ಬಿಲಿಯನ್ ಆಫರ್ ಗಳನ್ನು ನೀಡಿದ್ದವು. ಭರಪೂರ ಆಫರ್ ಗಳನ್ನು ನೀಡಿದ್ದವು. ಕೋಟ್ಯಾಂತರ ರೂ ವ್ಯವಹಾರ ನಡೆದಿದೆ.  ಈ ವಹಿವಾಟಿನ ಮಾಹಿತಿಯ ಸರ್ಕಾರ ಕೇಳಿದೆ. 


ನವದೆಹಲಿ (ಅ. 21): ಹಬ್ಬದ ಕೊಡುಗೆಯಾಗಿ ಗ್ರಾಹಕರಿಗೆ ಭಾರಿ ಡಿಸ್ಕೌಂಟ್‌ ಹಾಗೂ ಆಫರ್‌ಗಳನ್ನು ನೀಡಿ ಕೋಟ್ಯಂತರ ರುಪಾಯಿ ಗಳಿಸಿದ್ದ ಆನ್‌ಲೈನ್‌ ಮಾರುಕಟ್ಟೆಕಂಪನಿಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗೆ ಈಗ ಸಂಕಷ್ಟ ಎದುರಾಗಿದೆ.

ಈ ತಾಣಗಳನ್ನು ಬಳಸಿಕೊಂಡು ಅತೀ ಹೆಚ್ಚು ವ್ಯಾಪಾರ ಮಾಡಿದ ಟಾಪ್‌ 5 ಕಂಪನಿಗಳು, ಮಾರಾಟಗಾರರ ಸರಕುಗಳ ದರ ಪಟ್ಟಿ, ಅವರಿಗೆ ಸಂಸ್ಥೆ ನೀಡಿದ ಬೆಂಬಲ, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ದರ ಪಟ್ಟಿ, ಬಂಡವಾಳ ರಚನೆ, ವ್ಯವಹಾರ ಮಾದರಿ ಮತ್ತು ದಾಸ್ತಾನು ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ವಿಸ್ತೃತ ಮಾಹಿತಿ ನೀಡುವಂತೆ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಈ ಸಂಸ್ಥೆಗಳನ್ನು ಕೋರಿದೆ ಎಂದು ತಿಳಿದು ಬಂದಿದೆ.

Tap to resize

Latest Videos

undefined

ಜಿಯೋ ಗ್ರಾಹಕರಿಗೆ ಬೊಂ 'ಬಾಟ್' ಸೇವೆ; ಭಾರತದಲ್ಲಿ ಇದೇ ಮೊದಲ ಹೆಜ್ಜೆ!

ಆನ್‌ಲೈನ್‌ ಮಾರುಕಟ್ಟೆಸಂಸ್ಥೆಗಳು ಎಫ್‌ಡಿಐ ನೀತಿ ಉಲ್ಲಂಘನೆ ಸೇರಿದಂತೆ ಹಲವು ಅನೈತಿಕ ವ್ಯಾಪಾರ ಪದ್ಧತಿಯನ್ನು ಅನುಸರಿಸುತ್ತಿವೆ ಎಂದು ವ್ಯಾಪಾರಿಗಳ ಸಂಘ ಸಿಎಐಟಿ ನೀಡಿದ ಸತತ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಎರಡೂ ಸಂಸ್ಥೆಗಳಿಗೆ ಇ- ಮೇಲ್‌ ಮಾಡಲಾಗಿದ್ದು, ಇನ್ನೂ ಉತ್ತರ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.

click me!