ಕೇವಲ 30 ನಿಮಿಷದಲ್ಲಿ ಜಿಯೋ ಸಿಮ್ ಬರಲಿದೆ ನಿಮ್ಮ ಮನೆ ಬಾಗಿಲಿಗೆ...! ನೀವು ಮಾಡಬೇಕಿದ್ದು ಇಷ್ಟೆ

Published : Nov 22, 2016, 10:44 AM ISTUpdated : Apr 11, 2018, 12:54 PM IST
ಕೇವಲ 30 ನಿಮಿಷದಲ್ಲಿ ಜಿಯೋ ಸಿಮ್ ಬರಲಿದೆ ನಿಮ್ಮ ಮನೆ ಬಾಗಿಲಿಗೆ...! ನೀವು ಮಾಡಬೇಕಿದ್ದು ಇಷ್ಟೆ

ಸಾರಾಂಶ

ಸಿಮ್ ಅವಶ್ಯಕತೆ ಇರುವವರು ಆನ್ ಲೈನ್ ನಲ್ಲಿ ಸಿಮ್ ಪಡೆಯಬಹುದಾಗಿದ್ದು, ಬುಕ್ ಮಾಡಿದ 30 ನಿಮಿಷದಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ. 

ಮುಂಬೈ(ನ.22): ಕೋಟ್ಯಾಂತರ ಗ್ರಾಹಕರನ್ನು ಕಡಿಮೆ ಅವಧಿಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ದಿಂದ ಹೊಸದೊಂದು ಸೇವೆ ಆರಂಭವಾಗಿದ್ದು, ಸಿಮ್ ಅವಶ್ಯಕತೆ ಇರುವವರು ಆನ್ ಲೈನ್ ನಲ್ಲಿ ಸಿಮ್ ಪಡೆಯಬಹುದಾಗಿದ್ದು, ಬುಕ್ ಮಾಡಿದ 30 ನಿಮಿಷದಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ. 

ಸದ್ಯ ನೋಟು ಬದಲಾವಣೆಗೆ ಕ್ಯೂ ನಲ್ಲಿ ನಿಂತು ಸಾಕಾಗಿರುವರು ಜಿಯೋ ಸಿಮ್ ಗಾಗಿಯೂ ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲ ಎನ್ನುವವರು ಈ ಸೇವೆಯನ್ನು ಪಡೆಯ ಬಹುದಾಗಿದ್ದು, ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಜಿಯೋ ಈ ಸೇವೆಯನ್ನು ಆರಂಭಿಸಿದೆ ಎನ್ನಲಾಗಿದೆ . 

ಈ ಹಿಂದೆಯೂ ಈ ಸೇವೆಯನ್ನು ಆರಂಭಿಸಲಾಗಿತ್ತಾದರು ಸರಿಯಾದ ಮಟ್ಟದಲ್ಲಿ  ಜಾರಿಗೆ ತರಾಗಿರಲಿಲ್ಲ. ಸದ್ಯ ಮನೆ ಬಾಗಿಲಿಗೆ ಸಿಮ್ ನೀಡಲು ಜಿಯೋ ಮುಂದಾಗಿದೆ. ಆದರೆ ಇದು ಸ್ವತಂತ್ರ ಮನೆಗಳಿಗೆ ಈ ಸೇವೆ ಲಭ್ಯವಿಲ್ಲ ಬದಲಾಗಿ ಅಪರ್ಟ್ಮೆಂಟ್ ಇಲ್ಲವೇ ಹೌಸಿಂಗ್ ಸೋಸೈಟಿಗಳಿಗೆ ಈ ಸೇವೆ ಲಭ್ಯವಿದೆ. 

ಜಿಯೋ ವೆಬ್ ಸೈಟಿನಲ್ಲಿ 'ಜಿಯೋ ಅಟ್ ಯುವರ್ ದೋರ್ ಸ್ಟೇಪ್' ಎಂಬ ಆಯ್ಕೆಯನ್ನು ನೀಡಲಾಗಿದ್ದು, ಅಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿದರೆ ಜಿಯೋ ಸಿಮ್ ನೀವು ಇರುವ ಜಾಗಜ್ಜೆ ಬಂದು ಸೇರಲಿದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ತನ್ನ ಮೊದಲ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ Google Pay, ಏನಿದರ ವಿಶೇಷತೆ?