
ನವದೆಹಲಿ (ಮೇ.09): ಪ್ರತಿಷ್ಠಿತ ಕಂಪೆನಿ ಗೂಗಲ್ ತನ್ನ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ಗ್ರಾಹಕರಿಗೆ ಬುಧವಾರ ಗೂಗಲ್ ವ್ಯಾಲೆಟ್ ಎನ್ನುವ ವಿಶೇಷ ಅಪ್ಲಿಕೇಶನ್ ಪರಿಚಯಿಸಿದೆ. ಗೂಗಲ್ ಪರಿಚಯಿಸಿರುವ ಈ ವ್ಯಾಲೆಟ್‌ನಿಂದ ಬೋರ್ಡಿಂಗ್ ಪಾಸ್, ಲಾಯಲ್ಟಿ ಕಾರ್ಡ್, ಕಾರ್ಯಕ್ರಮಗಳ ಟಿಕೆಟ್ , ಸಾರ್ವಜನಿಕ ಸಾರಿಗೆ ಪಾಸ್‌ಗಳು ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ. ಜೊತೆಗೆ ಗ್ರಾಹಕರ ದಾಖಲೆಗಳು ಕೂಡ ಭದ್ರವಾಗಿರಲಿದೆ.
‘ಬುಧವಾರದಿಂದಲೇ ಈ ಡಿಜಿಟಲ್ ಅಪ್ಲಿಕೇಶನ್ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದೆ, ಆದರೆ ಗೂಗಲ್ ಪೇಗೂ ಇದಕ್ಕೂ ನಂಟಿಲ್ಲ. ಗೂಗಲ್ ಪೇ ಪೇಮೆಂಟ್ ಆ್ಯಪ್ ಆದರೆ, ವ್ಯಾಲೆಟ್ ನಾನ್ ಪೇಎಂಟ್ ಬಳಕೆದಾರರಿಗೆ. ಈ ತಂತ್ರಜ್ಞಾನವನ್ನು ಭದ್ರತೆ ಮತ್ತು ಗೌಪ್ಯತೆ ತಳಹದಿಯ ಮೇಲೆ ಪ್ರಾರಂಭಿಸಲಾಗಿದೆ. ಇದು ಗ್ರಾಹಕರಿಗೆ ಸುರತಕ್ಷತೆ,ಮುಕ್ತತೆ ಮತ್ತು ಗೌಪ್ಯತೆನ್ನು ಒದಗಿಸುತ್ತದೆ’ ಎಂದು ಕಂಪನಿ ಹೇಳಿದೆ.
Lok Sabha Elections 2024: ಕಾಂಗ್ರೆಸ್ ಗೆದ್ದರೆ ಅಯೋಧ್ಯೆಗೆ ಬಾಬ್ರಿ ಬೀಗ: ಅಮಿತ್ ಶಾ ಗುಡುಗು
ಭಾರತದಲ್ಲಿ ಈಗ ಇಂಡಿಗೋ, ಏರ್ ಇಂಡಿಯಾ, ಫ್ಲಿಪ್‌ಕಾರ್ಟ್, ಪಿವಿಆರ್, ಐನಾಕ್ಸ್, ಕೊಚ್ಚಿ ಮೆಟ್ರೋ ಸೇರಿ 20 ಬ್ರಾಂಡ್‌ಗಳ ಜತೆ ಇದು ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಈ ಗೂಗಲ್ ವ್ಯಾಲೆಟ್ ಒಟ್ಟು 80 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೂಗಲ್ ಶೀಘ್ರದಲ್ಲೇ ಭವಿಷ್ಯದಲ್ಲಿ ಪಾವತಿ ಮತ್ತು ಪಾವತಿ ರಹಿತ ವ್ಯವಸ್ಥೆಯನ್ನು ಎರಡನ್ನೂ ಒಂದೇ ಆ್ಯಪ್ನಲ್ಲಿ ತರುವ ಪ್ರಯತ್ನ ಮಾಡಲಿದೆ. ಗೂಗಲ್ ವಾಲೆಟ್ ಅನ್ನು ರಕ್ಷಣೆ ಮತ್ತು ಖಾಸಗಿತನ ಅಧಾರದ ಮೇಲೆ ಅಭಿವೃದ್ಧಿ ಮಾಡಲಾಗಿದೆ. ಇದು ಬಳಕೆದಾರರಿಗೆ ಮುಕ್ತ, ಆಯ್ಕೆ ಮತ್ತು ಸುರಕ್ಷತೆ ಭರವಸೆ ನೀಡಲಿದೆ ಎಂದು ಗೂಗಲ್ ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.