ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್

By Suvarna News  |  First Published Dec 26, 2019, 3:27 PM IST

ಗೂಗಲ್ ಪೇ, ಪೇಟಿಎಂ ಹಾಗೂ ಇನ್ನಿತರ ಡಿಜಿಟಲ್ ವ್ಯಾಲೆಟ್‌ಗಳು ಜನಪ್ರಿಯವಾಗುತ್ತಿರುವ ಜೊತೆಗೆ ಸೈಬರ್ ಫ್ರಾಡ್‌ಗಳು ಕೂಡಾ ಅವುಗಳನ್ನೇ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ. ಸೈಬರ್ ವಂಚಕರು ಮತ್ತು ಕ್ರಿಮಿನಲ್‌ಗಳನ್ನು ದೂರವಿಡಲು ಬಳಕೆದಾರರು ಪಾಲಿಸಬೇಕಾದ ಕ್ರಮಗಳನ್ನು ಗೂಗಲ್ ಪ್ರಕಟಿಸಿದೆ.


UPI ಪಿನ್‌ ನಂಬರನ್ನು ಗೌಪ್ಯವಾಗಿಟ್ಟುಕೊಳ್ಳಿ.  ಗೂಗಲ್ ಪೇಯಲ್ಲಿ 2 ಹಂತದ ಸೆಕ್ಯೂರಿಟಿ ಇದೆ. ಮೊದಲನೆಯದ್ದು ಆ್ಯಪ್ ಅನ್ಲಾಕ್ ಮಾಡಲು, ಎರಡನೆಯದ್ದು (UPI PIN) ವ್ಯವಹಾರ ಕಂಪ್ಲೀಟ್ ಮಾಡೋದಕ್ಕೆ ಇದೆ. ATM ಪಿನ್ನನ್ನು ಹೇಗೆ ಗೌಪ್ಯವಾಗಿಡುತ್ತೀರೋ, ಹಾಗೇನೆ, UPI PIN ಕೂಡಾ ಸೀಕ್ರೆಟ್ ಆಗಿರಲಿ ಎಂದು ಗೂಗಲ್ ಹೇಳಿದೆ.

ನಿಮ್ಮ ಫೋನ್‌ಗಳಲ್ಲಿ ಇನ್ನಿತರ  ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡುವಾಗ, ಅದರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಅನುಮಾನ ಬಂದ್ರೂ, ಕಸ್ಟಮರ್ ಕೇರ್‌ನ್ನು ಸಂಪರ್ಕಿಸಿ.

Tap to resize

Latest Videos

ಯಾವುದೇ ಹೊಸ ನಂಬರ್‌ನಿಂದ ಕಾಲ್ ಬಂದಾಗ ಅಲರ್ಟ್ ಆಗಿರಿ.  ಬ್ಯಾಂಕ್, ರಿಟೇಲರ್, ಇನ್ಶುರೆನ್ಸ್‌ನವರು ಎಂದು ಹೇಳಿಕೊಂಡು ನಿಮ್ಮ ಗುರುತಿನ ಚೀಟಿ ಐಡಿ, ದಾಖಲೆ, ವೈಯುಕ್ತಿಕ ಮಾಹಿತಿ, ಪಿನ್, ಬ್ಯಾಂಕ್ ಖಾತೆ ಸಂ., UPI ಪಿನ್ ಕೇಳಿದರೆ, ಫೋನ್ ಡಿಸ್ಕನೆಕ್ಟ್ ಮಾಡಿಬಿಡಿ. ಫೋನ್‌ ಮೂಲಕ ಯಾರೇ ಆಗ್ಲಿ, ಈ ಮಾಹಿತಿ ಕೇಳಿದ್ರೆ, ಅದೆಷ್ಟು ಇಂಪಾರ್ಟೆಂಟ್ ಎಂದು ಅನಿಸಿದರೂ, ಮಾಹಿತಿಯನ್ನು ಶೇರ್ ಮಾಡಬೇಡಿ.

ಇದನ್ನೂ ಓದಿ | ಹ್ಯಾಪಿ ನ್ಯೂ ಇಯರ್ ಕಣೋ! ಹೊಸ ವರ್ಷಕ್ಕೆ ಹೊಸ ಆಫರ್ ಪ್ರಕಟಿಸಿದ ಜಿಯೋ...

ಏನ್ ಮಾಡ್ಬಾರದು?

  • ಪೋನ್ ಮೂಲಕ ಬಂದ ಯಾವುದೇ ಮನವಿಗೂ ಸ್ಪಂದಿಸಬೇಡಿ, ಒತ್ತಡಕ್ಕೆ ಮಣಿದು ಅವರು ಹೇಳುವಂತೆ ಮಾಡಬೇಡಿ.
  • ಎಸ್ಸೆಮ್ಮೆಸ್/ ಇಮೇಲ್ ಮೂಲಕ ಬಂದ ಲಿಂಕ್‌ಗಳನ್ನು ತೆರೆಯಬೇಡಿ.
  • ಫೋನ್ ಕಾಲ್‌ನಲ್ಲಿರುವಾಗ ಯಾವುದೇ ಆ್ಯಪ್‌ ಅಥವಾ ಫೈಲ್ ಇನ್ಸ್ಟಾಲ್/ಡೌನ್‌ಲೋಡ್ ಮಾಡಬೇಡಿ.
  • ಅಪರಿಚಿತರು ಕಳುಹಿಸಿದ ವೆಬ್ ಲಿಂಕ್ ಅಥವಾ ಸಾಫ್ಟ್‌ವೇರ್ ಬಳಸಿ ಫೋನ್ ಸ್ಕ್ರೀನ್ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್ ಶೇರ್ ಮಾಡಬೇಡಿ.
  • ಗುರುತು ಚೀಟಿ ಸಂಖ್ಯೆ, ಪಿನ್, UPI ಐಡಿ, ಬ್ಯಾಂಕ್ ಡೀಟೆಲ್ಸ್‌ಗಳನ್ನು ಬಹಿರಂಗಪಡಿಸಬೇಡಿ.
  • ಮೇಲ್ನೋಟಕ್ಕೆ ಬ್ಯಾಂಕ್‌ನ ಅಸಲೀ ಫಾರ್ಮ್‌ನಂತೆ ಕಂಡರೂ, ಫೋನ್ ಮೂಲಕ ಬರುವ ಆನ್‌ಲೈನ್ ಫಾರ್ಮ್‌ ತುಂಬುವ ಮುನ್ನ ಎಚ್ಚರ. ವಂಚಕರು ಬ್ಯಾಂಕ್ ಲೋಗೋ ಬಳಸಿ ನಕಲಿ ಅರ್ಜಿ ರೆಡಿ ಮಾಡೋದ್ರಲ್ಲಿ ನಿಸ್ಸೀಮರಾಗಿರ್ತಾರೆ. ಇತ್ತೀಚೆಗೆ, eKYC ಹೆಸರಿನಲ್ಲಿ ಬಹಳಷ್ಟು ಮಂದಿಗೆ ವಂಚನೆಗೊಳಗಾಗಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ | ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!...

ನೆನಪಿಡಿ:

  • ಹಣ ಕಳುಹಿಸಲು ಮಾತ್ರ UPI ಪಿನ್ ಬೇಕು, ಸ್ವೀಕರಿಸಲು ಪಿನ್ ಅವಶ್ಯಕತೆಯಿಲ್ಲ. ಯಾರಾದ್ರೂ ಪಿನ್ ಕೇಳಿದ್ರೇ, ಏನೋ ಎಡವಟ್ಟಿದೆ ಎಂದು ಅರ್ಥ.
  • ಫೋನ್ ಕರೆಯಲ್ಲಿರುವಾಗ, ಒತ್ತಡಕ್ಕೆ ಮಣಿದು, ರೀಚಾರ್ಜ್, ಬಿಲ್ ಪೇಮೆಂಟ್ ಅಥವಾ ಇನ್ನಾವುದೇ  ವ್ಯವಹಾರ ಮಾಡಬೇಡಿ. ಡಿಜಿಟಲ್ ವ್ಯವಹಾರ ನಡೆಸುವಾಗ ಗಮನ ಕೇಂದ್ರಿಕೃತವಾಗಿರಲಿ.
     
click me!