ತಂತ್ರಜ್ಞಾನ ಅಂದರೆ ಹಾಗೇನೇ, ಅದು ಅಪ್ಡೇಟ್ ಆಗುತ್ತಿರಲೇ ಬೇಕು. ಜೊತೆಗೆ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುತ್ತಿರಬೇಕು. ಆ್ಯಪ್‌ಗಳು ಕೂಡಾ ಹಾಗೇನೇ. ಯಾರೋ ಹೇಳಿದ್ದಾರೆಂದು, ನೀವು ಕಣ್ಣುಮುಚ್ಚಿ ಆ್ಯಪ್‌ಗಳನ್ನು ನಿಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!
ಹೌದು, ಆ್ಯಂಡ್ರಾಯಿಡ್ ಪೋನ್ ಬಳಕೆದಾರರು ಬೆಚ್ಚಿಬೀಳುವಂತಹ ಸುದ್ದಿ ಇದು. ಕಳೆದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲೂ ಇಂತಹ ಸುದ್ದಿಗಳು ನಾವು ಪ್ರಕಟಿಸಿದ್ದೆವು. ಈಗ ಮತ್ತೊಮ್ಮೆ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ನಲ್ಲಿರುವ ಆ್ಯಪ್‌ಗಳನ್ನು ಚೆಕ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 85 ಅಪಾಯಕಾರಿ ಆ್ಯಪ್‌ಗಳನ್ನು ತೆಗೆದುಹಾಕಿದೆ. ಈ ಆ್ಯಪ್‌ಗಳಲ್ಲಿ ವೈರಸ್ ಹಾವಳಿ ಇದೆ ಎಂದು ಟ್ರೆಂಡ್ ಮೈಕ್ರೋ ಸೆಕ್ಯೂರಿಟಿ ಸಂಶೊಧಕರು ವರದಿ ಮಾಡಿದ ಬೆನ್ನಲ್ಲೇ ಗೂಗಲ್ ಈ ಕ್ರಮವನ್ನು ಕೈಗೊಂಡಿದೆ.
ಟಿವಿ ರಿಮೋಟ್, ಗೇಮ್ಸ್ ಹಾಗೂ ಇನ್ನಿತರ ಸೇವೆಗಳನ್ನು ಒದಗಿಸುವ ಹೆಸರಿನಲ್ಲಿ ಈ ಆ್ಯಪ್‌ಗಳು, ಬಳಕೆದಾರರಿಗೆ ಅಪಾಯಕಾರಿಯಾಗುವ ಫೀಚರ್‌ಗಳನ್ನೊಳಗೊಂಡಿವೆ ಎಂದು ಹೇಳಲಾಗಿದೆ. ಈ ಆ್ಯಪ್‌ಗಳನ್ನು ಓಟ್ಟು 9 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಅವುಗಳ ಪೈಕಿ, ಈಜಿ ಟಿವಿ ರಿಮೋಟ್ ಎಂಬ ಆ್ಯಪನ್ನು ಬರೋಬ್ಬರಿ 5 ಮಿಲಿಯನ್ ಮಂದಿ ಡೌನ್‌ಲೋಡ್ ಮಾಡಿದ್ದಾರೆ!
ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡವರಿಗೆ ಪದೇ ಪದೇ, ಅಥವಾ ನಿರ್ದಿಷ್ಟ ಅವಧಿಯಲ್ಲಿ ಫುಲ್ ಸ್ಕ್ರೀನ್ ಜಾಹೀರಾತುಗಳು ಪಾಪ್ ಅಪ್ ಆಗುತ್ತವೆ. ಮುಂದುವರಿಯಲು ಆ ಆಯ್ಕೆ ಒತ್ತಿ, ಈ ಆಯ್ಕೆ ಒತ್ತಿ ಎಂದು ಸತಾಯಿಸುವುದಲ್ಲದೇ, ಕೊನೆಗೆ ಕ್ರ್ಯಾಶ್ ಮಾಡಿಬಿಡುತ್ತವೆ. ಪಟ್ಟಿಯಲ್ಲಿರುವ ಇನ್ನು ಕೆಲವು ಆ್ಯಪ್‌ಗಳು ಬ್ಯಾಗ್ರೌಂಡ್‌ನಲ್ಲಿ ಕಾರ್ಯಚರಿಸಿ, ನಿಮ್ಮ ಅನ್‌ಲಾಕ್ ಪ್ಯಾಟರ್ನ್‌ಗಳ ಮೇಲೆ ನಿಗಾ ಇಡುತ್ತವೆ. ಫೋನ್ ಅನ್‌ಲಾಕ್ ಆದ ಕೂಡಾಲೇ ಜಾಹೀರಾತುಗಳನ್ನು ನೀಡಲು ಆರಂಭಿಸುತ್ತವೆ.
ಇದನ್ನೂ ಓದಿ: ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ
ಆ ಆ್ಯಪ್‌ಗಳಲ್ಲಿ ವೈರಸ್/ಮಾಲ್ವೇರ್‌ಗಳಿರುವ ಸಾಧ್ಯತೆಗಳಿದ್ದು, ಬಳಕೆದಾರರನ್ನು ವಂಚಿಸಲು, ಅವರ ವೈಯುಕ್ತಿಕ/ಗೌಪ್ಯ ಮಾಹಿತಿಗಳನ್ನು ಕಳವು ಮಾಡುವ ಮೂಲಕ ಅವರಿಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯವಿರುವುದನ್ನು ಅಲ್ಲಗಳೆಯಲಾಗದು.
ಗೂಗಲ್ ಪ್ಲೇಸ್ಟೋರ್ ಬಳಕೆದಾರರ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಅವುಗಳನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೂಡಾ ಅಳವಡಿಸಿರುತ್ತದೆ. ಆದರೆ ಕೆಲವೊಮ್ಮೆ ವಾಮಮಾರ್ಗದ ಮೂಲಕ ಇಂತಹ ಪ್ಲೇಸ್ಟೋರ್‌ನೊಳಗೆ ನುಸುಳುತ್ತವೆ. ಇಂತಹ ವಂಚಕ ಅಥವಾ ವೈರಸ್ ಇರುವ ಆ್ಯಪ್‌ಗಳನ್ನು ತೆಗೆದು ಹಾಕಲಾಗಿರುವುದು ಇದೇ ಮೊದಲಲ್ಲ. ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಕಳೆದ ನವೆಂಬರ್‌ನಲ್ಲಿ 13 ಹಾಗೂ ಡಿಸೆಂಬರ್‌ನಲ್ಲಿ 22 ಆ್ಯಪ್‌ಗಳನ್ನು ತೆಗೆದುಹಾಕಿತ್ತು.
ಆದುದಿರಿಂದ ಸ್ಮಾರ್ಟ್‌ಫೋನ್ ಬಳಕೆದಾರರು ತಾವು ಡೌನ್‌ಲೋಡ್ ಮಾಡುವ ಆ್ಯಪ್‌ಗಳ ಬಗ್ಗೆ ಜಾಗೃತರಾಗಿರಬೇಕು. ಆ 85 ಆ್ಯಪ್‌ಗಳು ನಿಮ್ಮ ಫೋನ್‌ನಲ್ಲಿವೆಯೇ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲಿದೆ ಪಟ್ಟಿ...