ಭಕ್ತರ ನೆರವಿಗೆ ಬಂದ ಜಿಯೋ; ಹೊಸ ಆ್ಯಪ್ ಬಿಡುಗಡೆ

By Web DeskFirst Published Jan 10, 2019, 8:21 PM IST
Highlights

ಅಲಹಾಬಾದ್‌ನಲ್ಲಿ ಆರಂಭವಾಗಲಿದೆ ಕುಂಭಮೇಳ; ಕೋಟ್ಯಾಂತರ ಭಕ್ತರು ನೀಡಲಿದ್ದಾರೆ ಭೇಟಿ; ಭಕ್ತರ ಅನುಕೂಲಕ್ಕಾಗಿ ಆ್ಯಪ್ ಬಿಡುಗಡೆ ಮಾಡಿದ ಜಿಯೋ

ಜನವರಿ 15ರಿಂದ ಮಾರ್ಚ್ 4ರ ವರೆಗೆ ಅಲಹಾಬಾದ್‌ನಲ್ಲಿ ಕುಂಭಮೇಳ ನಡೆಯಲಿದೆ. ಕೋಟ್ಯಾಂತರ ಭಾರತೀಯರಿಗೆ ಇದು ಪವಿತ್ರ ಯಾತ್ರೆ. ದೇಶ ವಿದೇಶಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ ಇಲ್ಲಿನ ಗಂಗೆಯ ಮಡಿಲಿಗೆ. ಜನ ಸೇರಿ ಜಾತ್ರೆಯಾಗುವಾಗ ಒಂದಷ್ಟುಗೊಂದಲಗಳು, ಮಾಹಿತಿಯ ಕೊರತೆ, ಸಮಸ್ಯೆಗಳು ಆಗುವುದು ಸಾಮಾನ್ಯ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಕೋಟ್ಯಾಂತರ ಭಕ್ತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ ಜಿಯೋ. ಅದು ‘ಕುಂಭ ಜಿಯೋಫೋನ್‌’ ಆ್ಯಪ್‌ ಮೂಲಕ.

ದೇಶಾದ್ಯಂತ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಜಿಯೋ ಈಗ ಹಿಂದೂ ಭಕ್ತರಿಗೆ ಕುಂಭ ಮೇಳಕ್ಕೆ ಹೋಗಲು, ಅಲ್ಲಿ ವ್ಯವಸ್ಥಿತವಾಗಿ ಎಲ್ಲಾ ಸೌಲಭ್ಯಗಳನ್ನು ಪಡೆದು ಮರಳಿ ತಮ್ಮ ಗೂಡಿಗೆ ಆರಾಮವಾಗಿ ತಲುಪಲು ಬೇಕಾದ ಎಲ್ಲಾ ಅಂಶಗಳನ್ನು ಆ್ಯಪ್‌ನಲ್ಲಿ ಸೇರಿಸಿ ಬಳಕೆದಾರರಿಗೆ ನೀಡುತ್ತಿದೆ.

ಇದನ್ನೂ ಓದಿ: ಇನ್ಯಾಕೆ ಚಿಂತೆ? ವಾಟ್ಸಪ್‌ನಿಂದ ಹೊಸ ವರ್ಷಕ್ಕೆ ಬರ್ತಿದೆ ಹೊಸ ಫೀಚರ್!

ಏನೇನಿರಲಿದೆ ಆ್ಯಪ್‌ನಲ್ಲಿ?

1. ಕುಂಭ ಮೇಳದ ಬಗ್ಗೆ ಸಂಪೂರ್ಣ ಮಾಹಿತಿ

2. ಟ್ರೈನ್‌, ಬಸ್‌, ವಿಮಾನ ಸಂಚಾರದ ಮಾಹಿಗಳು, ಬುಕ್ಕಿಂಗ್‌ ಅವಕಾಶಗಳು

3. ವಿವಿಧ ಟಿಕೆಟ್‌ಗಳ ಬುಕ್ಕಿಂಗ್‌ ಸೌಲಭ್ಯ, ವಸತಿ ಸೌಲಭ್ಯಗಳು

4. ರೂಟ್‌ ಮ್ಯಾಪ್‌

5. ತುರ್ತು ಕರೆಗಳಿಗಾಗಿ ಸ್ಥಳೀಯ ಸಂಸ್ಥೆಗಳ ಸಂಪರ್ಕ ಸಂಖ್ಯೆಗಳು

ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 8 ಮೋಡ್‌ನಲ್ಲಿ ಫೋಟೋ! ಅಗ್ಗದ ಮೊಬೈಲ್ ಮಾರುಕಟ್ಟೆಗೆ

ಇವಿಷ್ಟು ಮುಖ್ಯ ಫೀಚರ್‌ಗಳು ಆ್ಯಪ್‌ನಲ್ಲಿ ಇದ್ದು ಇದರ ಜೊತೆಗೆ ಭಕ್ತಿ ಗೀತೆಗಳ ಗುಚ್ಛ, ನಿಮ್ಮವರ ಜೊತೆಗೆ ಸದಾ ಸಂಪರ್ಕದಲ್ಲಿ ಇರುವಂತಹ ವ್ಯವಸ್ಥೆ, ಒಂದು ವೇಳೆ ನೀವು ಬೇರೆ ಎಲ್ಲಾದರೂ ತಪ್ಪಿಸಿಕೊಂಡರೆ ನಿಮ್ಮನ್ನು ಆ್ಯಪ್‌ ಸಹಾಯದಿಂದ ಟ್ರೇಸ್‌ ಮಾಡುವ ಸೌಲಭ್ಯವೂ ಇದೆ. ಹಾಗಾಗಿ ಹತ್ತಿರದವರೊಂದಿಗೆ ಸದಾ ಸಂಪರ್ಕ ಇಟ್ಟುಕೊಂಡು ವ್ಯವಸ್ಥಿತವಾದ ‘ಕುಂಭಮೇಳ’ ಯಾತ್ರೆಯನ್ನು ಮುಗಿಸಿಕೊಂಡು ಬರಲು ಸಹಾಯಕವಾಗಲಿದೆ ‘ಕುಂಭ ಜಿಯೋಫೋನ್‌’ ಆ್ಯಪ್‌.
 

click me!