ಇನ್ಮುಂದೆ ಡೇಟಾ ಡಿಲೀಟ್ ಮಾಡಬೇಕಿಲ್ಲ; ಫ್ರಿಯಾಗಿ Google ನೀಡ್ತಿದೆ 30 GB ಕ್ಲೌಡ್‌ ಸ್ಟೋರೇಜ್

By Mahmad Rafik  |  First Published Sep 12, 2024, 12:31 PM IST

ಗೂಗಲ್ ಭಾರತದಲ್ಲಿ ಗೂಗಲ್ ಒನ್ ಲೈಟ್ ಪ್ಲಾನ್ ಅನ್ನು ಪ್ರಾರಂಭಿಸಿದೆ, ಇದು ಬಳಕೆದಾರರಿಗೆ 30 GB ಉಚಿತ ಸ್ಟೋರೇಜ್ ಅನ್ನು ನೀಡುತ್ತದೆ. ಈ ಲೇಖನವು ಹೊಸ ಯೋಜನೆ, ಅದರ ಬೆಲೆ ಮತ್ತು ಅದನ್ನು ಹೇಗೆ ಪ್ರವೇಶಿಸುವುದು ಎಂಬುದರ ಬಗ್ಗೆ ವಿವರಗಳನ್ನು ಒಳಗೊಂಡಿದೆ.


ನವದೆಹಲಿ: ಗೂಗಲ್ (Google) ಭಾರತದಲ್ಲಿ ಗೂಗಲ್ ಒನ್ ಲೈಟ್ (Google One Lite) ಪ್ಲಾನ್ ಲಾಂಚ್ ಮಾಡಿದೆ. ಈ ಪ್ಲಾನ್ ಅಡಿಯಲ್ಲಿ ಬಳಕೆದಾರರಿಗೆ 30 ಜಿಬಿ ಹೆಚ್ಚುವರಿ ಸ್ಟೋರೇಜ್ ಸಿಗಲಿದೆ. ಈ ಪ್ಲಾನ್ ವಿಶೇಷ ಏನೆಂದರೆ ಬಳಕೆದಾರರಿಗೆ 30 ಜಿಬಿ ಸ್ಟೋರೇಜ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ಆಯ್ದ ಬಳಕೆದಾರರಿಗೆ ಗೂಗಲ್ ಒನ್ ಹೊಸ ಲೈಟ್ ಪ್ಲಾನ್ ಕಾಣಿಸುತ್ತದೆ. ಸದ್ಯ ಇದು ಟ್ರಯಲ್‌ನಲ್ಲಿರುವ ಕಾರಣ ಬಳಕೆದಾರರಿಗೆ ಫ್ರೀ ಆಕ್ಸೆಸ್ ನೀಡಲಾಗುತ್ತಿದೆ. ಗೂಗಲ್ ಒನ್ ಬೇಸಿಕ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 100 ಜಿಬಿ ಕ್ಲೌಡ್‌ ಸ್ಟೋರೇಜ್ ಸಿಗುತ್ತದೆ. ಈ ಪ್ಲಾನ್‌ನ್ನು ನೀವು ಐವರ ಜೊತೆಯಲ್ಲಿ ಶೇರ್ ಮಾಡಿಕೊಳ್ಳಬಹುದು. 100 ಜಿಬಿ ಕ್ಲೌಡ್ ಸ್ಟೋರೇಜ್‌ಗಾಗಿ ಬಳಕೆದಾರರು 130 ರೂಪಾಯಿ ಪಾವತಸಬೇಕಾಗುತ್ತದೆ. ಹೊಸ ಲೈಟ್ ಪ್ಲಾನ್‌ ಬೆಲೆಗಳು ಅರ್ಧಕ್ಕಿಂತ ಕಡಿಮೆಗೆ ಸಿಗಲಿದೆ. 

ಗೂಗಲ್ ಕಡೆಯಿಂದ ಹೊಸ ಗೂಗಲ್ ಒನ್ ಲೈಟ್ ಒಂದು ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತಿದೆ. ಗೂಗಲ್ ಟ್ರಯಲ್ ನಡೆಸುತ್ತಿರುವ ಕಾರಣ ಮೊದಲ ತಿಂಗಳು ಉಚಿತವಾಗಿರಲಿದ್ದು,  ಮುಂದೆ ನೀವು ಹಣ ಪಾವತಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇದಕ್ಕೆ ಎಷ್ಟು ಬೆಲೆ ನಿಗಧಿಸಲಾಗುತ್ತದೆ ಎಂದು ಕಾದು ನೋಡಬೇಕಿದೆ.

Tap to resize

Latest Videos

undefined

ನಾವು ಹೊಸ ಲೈಟ್ ಪ್ಲಾನ್ ಮಾಸಿಕ ಪ್ಲಾನ್ ಬೆಲೆ 59 ರೂಪಾಯಿ ಆಗಿದ್ದು, ಬಳಕೆದಾರರಿಗೆ 30 GB ಸ್ಟೋರೇಜ್‌ ಸಿಗಲಿದೆ. 15 ಜಿಬಿ ಸ್ಟೋರೇಜ್ ಫುಲ್ ಅಗಿರುವ ಗ್ರಾಹಕರು 59 ರೂಪಾಯಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. 15 ಜಿಬಿ ಸ್ಟೋರೇಜ್ ಖಾಲಿ ಹೊಂದಿರುವ ಬಳಕೆದಾರರು ಯಾವುದೇ ಹೆಚ್ಚುವರಿ ಹಣ ಪಾವತಿಸಬೇಕಿಲ್ಲ. ಈ ಯೋಜನೆಗಳು ಶೀಘ್ರದಲ್ಲೇ ಎಲ್ಲರಿಗೂ ಕಾಣಿಸಲಿವೆ.

ಜಿಯೋದಿಂದ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ ಪ್ಲಾನ್; ದಿನಕ್ಕೆ 10 ರೂಪಾಯಿ ಹಣ ಖರ್ಚಾಗಲ್ಲ!

click me!