ಜಿಯೋದಿಂದ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ ಪ್ಲಾನ್; ದಿನಕ್ಕೆ 10 ರೂಪಾಯಿ ಹಣ ಖರ್ಚಾಗಲ್ಲ!

By Mahmad Rafik  |  First Published Sep 12, 2024, 11:49 AM IST

ಪ್ರತಿ ತಿಂಗಳು ರೀಚಾರ್ಜ್ ಮಾಡಿ ನೀವು ಬೇಸತ್ತಿದ್ದರೆ ಇಂದು ಪ್ಲಾನ್ ನಿಮ್ಮ ಗೊಂದಲವನ್ನು ದೂರ ಮಾಡುತ್ತದೆ. ರಿಲಯನ್ಸ್ ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಹೆಚ್ಚು ವ್ಯಾಲಿಡಿಟಿಯ ಪ್ಲಾನ್ ಇದಾಗಿದೆ.


ನವದೆಹಲಿ: ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಹೊರತಾಗಿಯೂ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರನ್ನು ಉಳಿಸಿಕೊಳ್ಳಲು  ಹೆಚ್ಚುವರಿ ಆಫರ್‌ಗಳನ್ನು ಘೋಷಣೆ ಮಾಡಿಕೊಳ್ಳುತ್ತಿವೆ. ಟ್ಯಾರಿಫ್ ಬೆಲೆ ಏರಿಕೆ ಬೆನ್ನಲ್ಲೇ ಖಾಸಗಿ ಕಂಪನಿಗಳ ಬಳಕೆದಾರರು ಎಂಎನ್‌ಪಿ ಮೂಲಕ ಬಿಎಸ್‌ಎನ್‌ಎಲ್‌ಗೆ ಹೋಗುತ್ತಿದ್ದಾರೆ. ಈ ಕಾರಣದಿಂದ ಹೊಸಬರನ್ನು ಕರೆ ತರೋದರ ಜೊತೆಯಲ್ಲಿ ಇರೋ ಗ್ರಾಹಕರನ್ನು ಉಳಿಸಿಕೊಳ್ಳುವುದು ಖಾಸಗಿ ಕಂಪನಿಗಳಿಗೆ ಸವಾಲು ಎದುರಾಗಿದೆ. ಹಾಗಾಗಿ ರಿಲಯನ್ಸ್ ಹೆಚ್ಚು ವ್ಯಾಲಿಡಿಟಿಯ ಕಡಿಮೆ ಬೆಲೆಯ  ಪ್ಲಾನ್ ನೀಡುತ್ತಿದೆ. ಈ ಪ್ಲಾನ್ ದಿನಕ್ಕೆ ನಿಮಗೆ 10 ರೂಪಾಯಿಗಿಂತಲೂ ಕಡಿಮೆ ಬೀಳುತ್ತದೆ.

ಹೆಚ್ಚು ವ್ಯಾಲಿಡಿಟಿಯ ಪ್ಲಾನ್
ನೀವು ಜಿಯೋ ಬಳಕೆದಾರರಾಗಿದ್ದರೆ ಹೆಚ್ಚು ವ್ಯಾಲಿಡಿಟಿಯ ಪ್ಲಾನ್ ಹುಡುಕಾಟದಲ್ಲಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಇದು ನಿಮ್ಮ ಹುಡುಕಾಟದ ಸಮಯವನ್ನು ಉಳಿಸುತ್ತದೆ. ಈ ಯೋಜನೆಯ ವ್ಯಾಲಿಡಿಟಿ 84 ದಿನಗಳಾಗಿದ್ದು, ಪ್ರತಿದಿನ 10 ರೂಪಾಯಿಗಿಂತಯಲೂ ಕಡಿಮೆ ವೆಚ್ಚ ತಗಲುತ್ತದೆ. ಜಿಯೋ ನೀಡುತ್ತಿರುವ ಪ್ಲಾನ್‌ಗಳಲ್ಲಿ ಇದು ಅತಿ ಕಡಿಮೆ ಬೆಲೆಯ ಹೆಚ್ಚು ವ್ಯಾಲಿಡಿಟಿಯ ಯೋಜನೆ ಎಂದು ಹೇಳಲಾಗುತ್ತಿದೆ.

Tap to resize

Latest Videos

84 ದಿನ ವ್ಯಾಲಿಡಿಟಿಯ ಈ ಪ್ಲಾನ್ ಬೆಲೆ 799 ರೂಪಾಯಿ ಆಗಿದೆ. ಈ ಯೋಜನೆಯಡಿ ನಿಮಗೆ 84 ದಿನಗಳವರೆಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯ ಸಿಗುತ್ತದೆ. ಪ್ರತಿದಿನ 1.5 ಜಿಬಿ ಡೇಟಾ, 100 ಎಸ್‌ಎಂಎಸ್ ಜೊತೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸಬ್‌ ಸ್ಕ್ರಿಪ್ಷನ್ ಉಚಿತವಾಗಿ ಲಭ್ಯವಾಗುತ್ತದೆ.

ಪದೇ ಪದೇ ರೀಚಾರ್ಜ್ ಮಾಡುವ ಕಿರಿಕಿರಿಯಿಂದ ಬೇಸತ್ತಿದ್ದರೆ ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ನೀವು ಹೆಚ್ಚು ಡೇಟಾ ಬಳಕೆ ಮಾಡದ ಜನರಾಗಿದ್ದರೆ ಈ ಪ್ಲಾನ್ ನಿಮಗೆ ಒಳ್ಳೆಯ ಆಯ್ಕೆಯಾಗಿರಲಿದೆ. ಇಂದು ಏರ್‌ಟೆಲ್, ವೊಡಾಫೋನ್ ಐಡಿಯಾ ಸಹ ತಮ್ಮ ಎಲ್ಲಾ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತಿವೆ. ಆದ್ರೆ ಸರ್ಕಾರಿ ಕಂಪನಿಯಾಗಿರುವ ಬಿಎಸ್ಎನ್‌ಎಲ್ ಎಲ್ಲದಕ್ಕಿಂತ ಕಡಿಮೆ ಬೆಲೆಯ ಆಫರ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

click me!