ನಿಮ್ಮ ಸುತ್ತಮುತ್ತ ಗಾಳಿ ಎಷ್ಟು ವಿಷಕಾರಿಯಾಗಿದೆ? ಗೂಗಲ್ ಮ್ಯಾಪ್‌ನಲ್ಲೇ AQI ತಿಳಿಯುವುದು ಹೇಗೆ?

Published : Nov 29, 2026, 01:39 PM IST
check air quality index google maps

ಸಾರಾಂಶ

ಚಳಿಗಾಲದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ನಡುವೆ ಗಾಳಿಯ ಗುಣಮಟ್ಟವನ್ನು (AQI) ತಿಳಿಯುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಆಪ್ ಅಥವಾ ವೆಬ್‌ಸೈಟ್ ಅಗತ್ಯವಿಲ್ಲ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಮ್ಯಾಪ್ ಮೂಲಕವೇ ಇದನ್ನು ಸುಲಭವಾಗಿ ಪರಿಶೀಲಿಸಬಹುದು.

ಚಳಿಗಾಲದ ಶುರುವಾದರೂ ವಾತಾವರಣದಲ್ಲಿ ಏರು-ಪೇರುನಿಂದ ದೂರದ ಪ್ರಯಾಣ ಮಾಡುವಾಗ ಅಲ್ಲಿನ ಹವಾಮಾನದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ದೆಹಲಿಯಂತಹ ನಗರಗಳು ಅದೆಷ್ಟು ವಿಷಕಾರಿ ಗಾಳಿ ಹೊಂದಿವೆ ಎಂದರೆ ಅಲ್ಲಿ ಉಸಿರಾಡುವುದೇ ಕಷ್ಟ ಅನಿಸುವಂತಿದೆ. ಇನ್ನು ಚಳಿಗಾಲ ಹೆಚ್ಚಾದಂತೆ ವಾಯು ಮಾಲಿನ್ಯದ ಮಟ್ಟವೂ ಹೆಚ್ಚುತ್ತಿದೆ. ಬೆಳಗಿನ ವಾಕಿಂಗ್ ಮಾಡುವುದಕ್ಕಾಗಲಿ, ಆಫೀಸ್‌ಗೆ ಹೋಗುವುದಕ್ಕಾಗಲಿ ಅಥವಾ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕಾಗಿ ಜನರ ಚಿಂತೆ ಏನೆಂದರೆ ಇಂದು ನಗರದ ಸುತ್ತಮುತ್ತಲಿನ ಎಷ್ಟು ಶುದ್ಧವಾಗಿದೆ ಎಂಬುದು.

ಇದನ್ನ ತಿಳಿದುಕೊಳ್ಳೋಕೆ ಬೇರೆ ಬೇರೆ ವೆಬ್‌ಸೈಟ್ ಗಳಾಗಲಿ ಅಥವಾ ಆಪ್ ಗಳಾಗಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಮ್ಯಾಪ್‌ನಿಂದಲೇ ನೀವು ಇರುವ ಪ್ರದೇಶದ ಗುಣಮಟ್ಟ (AQI) ತಿಳಿದುಕೊಳ್ಳಬಹುದು. ಇದಕ್ಕಾಗಿ ಗೂಗಲ್ ಮ್ಯಾಪ್ ವಿಶಿಷ್ಠ ಫಿಚರ್ ಹೊಂದಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅನೇಕರು ಇದಕ್ಕಾಗಿ ಈಗಲೂ ಟಿವಿಯನ್ನೇ ಅವಲಂಬಿಸಿದ್ದಾರೆ. ಇನ್ನು ಕೆಲವರು ಇದಕ್ಕಾಗಿ ಪ್ರತ್ಯೇಕ ಆಪ್ ಬೇಕು ಅಂದ್ಕೊಳ್ತಾರೆ. ಆದರೆ ಇದೆಲ್ಲವನ್ನೂ ಗೂಗಲ್‌ ಮ್ಯಾಪ್‌ನಲ್ಲೇ ತಿಳಿದುಕೊಳ್ಳಬಹದು. ಗೂಗಲ್ ಮ್ಯಾಪ್ ಕೇವಲ ದಾರಿ ತೋರಿಸೋದಷ್ಟೇ ಅಲ್ಲ, ವಾತಾವರಣದಲ್ಲಿ ಬದಲಾವಣೆ, ಸುತ್ತಲಿನ ಗಾಳಿಯ ಶುದ್ಧತೆ ಬಗ್ಗೆಯೂ ತಿಳಿಸುತ್ತದೆ.

Google Maps ನಲ್ಲಿ AQI ತಿಳಿದುಕೊಳ್ಳುವುದು ಹೇಗೆ?

ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಇತ್ತೀಚಿನ ಹೊಸ ಆವೃತ್ತಿಯ ಗೂಗಲ್ ಮ್ಯಾಪ್ ಇನ್ಸ್ಟಾಲ್ ಮಾಡಿಕೊಳ್ಳಿ. ಅಥವಾ ಅಪ್ಡೇಟ್ ಮಾಡಿ ನಂತರ ಓಪನ್ ಮಾಡಿ.

ಬಳಿಕ ಗೂಗಲ್ ಮ್ಯಾಪ್‌ನಲ್ಲಿ (Google Maps) ನಿಮ್ಮ ಊರು, ಸ್ಥಳ ಅಥವಾ ನಗರ, ಹೋಗಬೇಕಾಗಿರುವ ಸ್ಥಳದ ಗಾಳಿಯ ಗುಣಮಟ್ಟ (Air Quality Index) ಎಷ್ಟಿದೆ ಎಂಬುದನ್ನ ಇಲ್ಲಿ ತಿಳಿದುಕೊಳ್ಳಬಹುದು.

ಹಂತ 1: Google Maps ತೆರೆಯಿರಿ

ನಿಮ್ಮ ಮೊಬೈಲ್‌ನಲ್ಲಿ Google Maps ಆ್ಯಪ್ ತೆರೆಯಿರಿ. ಹಳೆಯದಾಗಿದ್ದರೆ ಅಪ್ಡೇಟ್ ಮಾಡಿ ನಂತರ ಓಪನ್ ಮಾಡಿ, ಇದಕ್ಕೂ ಮೊದಲು ಇಂಟರ್‌ನೆಟ್ ಆನ್ ಇರಲಿ.

ಹಂತ 2: Layers ಆಯ್ಕೆ ಮಾಡಿ

ಈಗ ಗೂಗಲ್ ಮ್ಯಾಪ್‌ನ ಬಲಭಾಗದಲ್ಲಿರುವ Layers(ಚಿತ್ರದಲ್ಲಿ ತೋರಿಸಿದಂತೆ) ಐಕಾನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕ್ಲಿಕ್ ಮಾಡಿದ ಬಳಿಕ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತದೆ.

ಹಂತ 3: Air Quality ಆಯ್ಕೆ ಮಾಡಿ

ಈಗ ಡಿಸ್ಪಲೇ ಮೇಲೆ ತೋರಿಸಿದ ಆಯ್ಕೆಗಳಲ್ಲಿ Air Quality ಕಾಣಿಸಿದರೆ ಕ್ಲಿಕ್ ಮಾಡಿ. ಕ್ಲಿಕ್ ಮಾಡುತ್ತಿದ್ದಂತೆ, ನೀವು ಇರುವ ಏರಿಯಾ ಅಥವಾ ಸ್ಥಳದ ಮಾಹಿತಿಯೊಂದಿಗೆ ಗಾಳಿಯ ಗುಣಮಟ್ಟ ಎಷ್ಟಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಒಂದು ವೇಳೆ ಗೂಗಲ್ ಮ್ಯಾಪ್‌ನಲ್ಲಿ ಗಾಳಿಯ ಗುಣಮಟ್ಟ ಕಾಣಿಸದಿದ್ದರೆ ಗೂಗಲ್ ಮ್ಯಾಪ್ ಅಪ್ಡೇಟ್ ಮಾಡಿ, ಮೊಬೈಲ್‌ನಲ್ಲಿ ಲೋಕೇಶನ್ ಸರ್ವಿಸ್ ಆನ್ ಮಾಡಿ, ಗೂಗಲ್‌ ಮ್ಯಾಪ್‌ನಲ್ಲಿ ನೀವು ಇರುವ ಊರು, ಸ್ಥಳದ ಹೆಸರು ಸರ್ಚ್ ನಲ್ಲಿ ಟೈಪ್ ಮಾಡುವ ಮೂಲಕ ಹುಡುಕಿ. ಮೇಲಿನಂತೆ ಮತ್ತೆ ಲೇಯರ್ ಕಾಣಿಸಿಕೊಳ್ಳುತ್ತದೆ.

ಗಮನಿಸಿ: ಗೂಗಲ್‌ ಮ್ಯಾಪ್‌ನಲ್ಲಿ ತೋರಿಸುವ ಗಾಳಿಯ ಗುಣಮಟ್ಟವು ವಿವಿಧ ಸೆನ್ಸರ್‌ಗಳು, ಸರ್ಕಾರಿ ಮಾಹಿತಿ, ಉಪಗ್ರಹ, ಹವಾಮಾನ ಮಾಹಿತಿ ಆಧರಿಸಿರುತ್ತದೆ ಹೀಗಾಗಿ ಅಧಿಕೃತ ಮಾಪನದೊಂದಿಗೆ ತುಸು ವ್ಯತ್ಯಾಸವೂ ಆಗಬಹುದು.

ನೀವು ಬೆಳಗ್ಗೆ ವಾಕಿಂಗ್ ಅಥವಾ ವಾಯು ವಿಹಾರಕ್ಕೆ ಹೋಗುವ ಮುನ್ನ ನಿಮ್ಮ ಪ್ರದೇಶದ ಗಾಳಿಯ ಗುಣಮಟ್ಟ ತಿಳಿದುಕೊಳ್ಳಿ AQI ಹೆಚ್ಚಿದ್ದರೆ ಹೊರಾಂಗಣ ಚಟುವಟಿಕೆ ಕಡಿಮೆ ಮಾಡುವುದು ಉತ್ತಮ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ತಂತ್ರಜ್ಞಾನ ಲೋಕದಲ್ಲಿ ಎಲಾನ್ ಮಸ್ಕ್ ಕ್ರಾಂತಿ: 10 ಲಕ್ಷ ಉಪಗ್ರಹಗಳ ಹಿಂದಿನ ರಹಸ್ಯ!
Airtelನಿಂದ ಗ್ರಾಹಕರಿಗೆ ದೊಡ್ಡ ಮೋಸ? TRAIಗೆ ಹೇಳಿದ ಕಡಿಮೆ ಬೆಲೆ ಪ್ಲಾನ್‌ ಎಲ್ಲಿ?