
ನವದೆಹಲಿ: TRAI ನಿರ್ದೇಶನದ ಮೇರೆಗೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕಡಿಮೆ ಬೆಲೆಯ ಕಾಲಿಂಗ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಆದರೆ ಕಡಿಮೆ ಬೆಲೆಯ ಪ್ಲಾನ್ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಗ್ರಾಹಕರು ಥರ್ಡ್ ಪಾರ್ಟಿ ಆಪ್‌ಗಳಾದ Phonepe ಅಥವಾ Gpay ಮೂಲಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದ್ರೆ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ Airtel ನ ಕೆಲ ಪ್ಲಾನ್‌ಗಳು ಕಾಣಿಸಲ್ಲ. ಇಷ್ಟು ಮಾತ್ರವಲ್ಲ ಈ ಕಡಿಮೆ ಬೆಲೆಯ ಪ್ಲಾನ್‌ಗಳು Airtel ನ ಅಧಿಕೃತ ಆಪ್‌ನಲ್ಲಿಯೂ ಕಾಣಿಸುತ್ತಿಲ್ಲ ಎಂದು ವರದಿಯಾಗಿದೆ.
ಒಂದು ವೇಳೆ ಕಡಿಮೆ ಬೆಲೆಯ ಪ್ಲಾನ್ ಮೊತ್ತವನ್ನು ಹಾಕಿ ಸರ್ಚ್ ಮಾಡಿದ್ರೂ ಇದು ಗ್ರಾಹಕರಿಗೆ ಗೋಚರಿಸುವುದಿಲ್ಲ. ಕೆಲ ದಿನಗಳ ಹಿಂದೆ TRAI ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಕಡಿಮೆ ಬೆಲೆಯ ಕಾಲಿಂಗ್ ಪ್ಲಾನ್ ಬಿಡುಗಡೆಗೊಳಿಸುವಂತೆ ಸೂಚಿಸಿತ್ತು. ಈ ಸೂಚನೆ ಮೇರೆಗೆ ಹೊಸ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದ್ರೆ Airtel ಆಪ್ ಮತ್ತು ಥರ್ಡ್ ಪಾರ್ಟಿ ಆಪ್‌ಗಳಲ್ಲಿ ಕಡಿಮೆ ಬೆಲೆಯ ಯಾವುದೇ ಪ್ಲಾನ್‌ಗಳು ಕಾಣಿಸುತ್ತಿಲ್ಲ. ಆಪ್ ಜೊತೆ ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಈ ಪ್ಲಾನ್ ಕಾಣಿಸಬೇಕು ಎಂದು TRAI ಹೇಳಿತ್ತು. ಆದ್ರೆ ಇಲ್ಲಿಯೂ Airtelನಿಂದ ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು NBT ವರದಿ ಮಾಡಿದೆ.
Airtel ಟೆಲಿಕಾಂ ಕಂಪನಿ 185, 203 ಮತ್ತು 206 ರೂಪಾಯಿಯ ಕಾಲಿಂಗ್ ಪ್ಲಾನ್ ಬಿಡುಗಡೆಗೊಳಿಸಿತ್ತು. ಆದ್ರೆ ಈ ಮೂರು ಪ್ಲಾನ್‌ಗಳು ಏರ್‌ಟೆಲ್ ವೆಬ್‌ಸೈಟ್, ಏರ್‌ಟೆಲ್ ಆಪ್ ಮತ್ತು ಥರ್ಡ್ ಪಾರ್ಟಿ ಆಪ್‌ಗಳಲ್ಲಿ ಕಾಣಿಸುತ್ತಿಲ್ಲ. ಗ್ರಾಹಕರು ಸರ್ಚಿಂಗ್ ಬಾಕ್ಸ್‌ನಲ್ಲಿ ಅಮೌಂಟ್ ಹಾಕಿ ಹುಡುಕಿದರೂ ಗ್ರಾಹಕರಿಗೆ ಈ ಪ್ಲಾನ್‌ಗಳು ಸಿಗುತ್ತಿಲ್ಲ. ಈ ಮೂಲಕ ಏರ್‌ಟೆಲ್ ಕಂಪನಿ TRAI ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದೆ.
TRAI-ಆದೇಶಿತ ಯೋಜನೆಗಳು ಜಿಯೋದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ಸ್ಪಷ್ಟವಾಗಿ ಗೋಚರಿಸುತ್ತವೆ, ಆದರೆ ಪ್ರಸ್ತುತ ಏರ್‌ಟೆಲ್‌ನಲ್ಲಿ ಕಾಣಿಸುತ್ತಿರೋದು ಬಹುದೊಡ್ಡ ಚರ್ಚೆಯ ವಿಷಯವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.