ಜಿಯೋಗೆ ಸಡ್ಡು ಹೊಡೆಯಲು ಗೂಗಲ್ ಫೋನ್: ಬೆಲೆ ಕೇವಲ...!

Published : Dec 08, 2018, 06:36 PM ISTUpdated : Dec 08, 2018, 06:47 PM IST
ಜಿಯೋಗೆ ಸಡ್ಡು ಹೊಡೆಯಲು ಗೂಗಲ್ ಫೋನ್: ಬೆಲೆ ಕೇವಲ...!

ಸಾರಾಂಶ

ರಿಲಯನ್ಸ್ ಜಿಯೋ ಫೋನ್‌ಗೆ ಸಡ್ಡು ಹೊಡೆಯಲು ಸಜ್ಜಾದ ಗೂಗಲ್| ಗೂಗಲ್‌ನಿಂದ ಅತಿ ಅಗ್ಗದ ಮೊಬೈಲ್ ವಿಝ್‌ಫೋನ್ ಬಿಡುಗಡೆ|  ಕೇವಲ 500 ರೂ. ಬೆಲೆಯ ವಿಝ್‌ಫೋನ್ ಡಬ್ಲ್ಯುಪಿ006 ಬಿಡುಗಡೆ| ಕಾಯ್ ಆಪರೇಟಿಂಗ್ ಸಿಸ್ಟಂ ಅಡಕವಾಗಿರುವ ಅಗ್ಗದ ವಿಝ್‌ಫೋನ್ 

ಬೆಂಗಳೂರು(ಡಿ.08): ರಿಲಯನ್ಸ್ ಜಿಯೋ ಫೋನ್‌ಗೆ ಸಡ್ಡು ಹೊಡೆಯಲು, ಸರ್ಚ್ ಎಂಜಿನ್ ದೈತ್ಯ ಗೂಗಲ್ ಅತಿ ಅಗ್ಗದ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ. ವಿಝ್‌ಫೋನ್ ಡಬ್ಲ್ಯುಪಿ006 ಎಂಬ ಹೆಸರಿನ ಕಾಯ್ ಓಪರೇಟಿಂಗ್ (KaiOS) ಸಿಸ್ಟಂ ಹೊಂದಿರುವ, ಮೊಬೈಲ್ ಫೋನ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ. 

ಗೂಗಲ್ ವಿಝ್‌ಫೋನ್ ಡಬ್ಲ್ಯುಪಿ006 ಬೆಲೆ ಕೇವಲ 500 ರೂ. ಆಗಿದ್ದು, ಜಿಯೋ ಫೋನ್ ನಲ್ಲಿ ಇರುವಂತೆ ಇದರಲ್ಲಿಯೂ ಕಾಯ್ ಆಪರೇಟಿಂಗ್ ಸಿಸ್ಟಂ ಅಡಕವಾಗಿದೆ. 

ನೂತನ ಫೋನ್ ಗೂಗಲ್‌ನ ಜನಪ್ರಿಯ ಗೂಗಲ್ ಅಸಿಸ್ಟನ್ಸ್, ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಇತ್ಯಾದಿ ಆ್ಯಪ್‌ಗಳನ್ನು ಹೊಂದಿರುತ್ತದೆ. 

ಸದ್ಯ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ಫೋನ್, ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.  ಇದು ಜಿಯೋ ಫೋನ್‌ಗೆ ಸಮಾನವಾಗಿ 4ಜಿ ಸೇವೆಯನ್ನು ಹೊಂದಿರುತ್ತದೆ. ವೈ-ಫೈ, ಬ್ಲೂಟೂತ್ ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಕೂಡ ಹೊಂದಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್