ಘಿಬ್ಲಿ ಫೋಟೋ ಬಳಸ್ತಿದ್ದೀರಾ? ಗೋಳೋ ಎಂದು ಅಳುವ ಮೊದ್ಲು ಸೈಬರ್​ ಕ್ರೈಂನವರ ಈ ಎಚ್ಚರಿಕೆ ಕೇಳಿಬಿಡಿ...

ನಿಮ್ಮ ಫೋಟೋ ವಿಶೇಷವಾಗಿ ಕಾಣಿಸಲು ಘಿಬ್ಲಿ ಆರ್ಟ್​ ಬಳಸ್ತಾ ಇದ್ದೀರಾ? ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡ್ತಿದ್ದೀರಾ? ಹಾಗಿದ್ದರೆ ಸೈಬರ್​ ಕ್ರೈಂ ವಿಭಾಗದ ಈ ಮಾಹಿತಿ ತಿಳಿದುಕೊಳ್ಳಿ... 
 


ಅಯ್ಯಯ್ಯೋ... ನನ್ನ ಪರ್ಸನಲ್​ ಡಿಟೇಲ್ಸ್​ ಲೀಕ್​ ಆಗಿದೆ, ಏನ್ಮಾಡಲಿ? ನನ್ನ ಎಲ್ಲಾ ಅಕೌಂಟ್ಸ್​ ಹ್ಯಾಕ್​ ಆಗೋಗಿದೆ, ನನ್ನ ಬ್ಯಾಂಕ್ ಡಿಟೇಲ್ಸೂ ಸೈಬರ್​ ಕ್ರಿಮಿನಲ್ಸ್​ ಕೈ ಸೇರಿದೆ... ನನ್ನ ಫೋಟೋ ಮಿಸ್​ಯೂಸ್​ ಮಾಡಿಕೊಳ್ತಿದ್ದಾರೆ... ಅಯ್ಯೋ ನನ್ನ ಫೋಟೋ ತಿರುಚಿ ಕೆಟ್ಟದ್ದಕ್ಕೆ ಬಳಸಿಕೊಳ್ತಿದ್ದಾರೆ.... ಹೀಗೆಲ್ಲಾ ನೋವು ಉಂಡವರಲ್ಲಿ ನೀವು ಒಬ್ಬರಾಗಿರಬಹುದು, ಇಲ್ಲವೇ ದಿನನಿತ್ಯವೂ ಇದರ ಬಗ್ಗೆ ಮಾಧ್ಯಮಗಳಲ್ಲಿ ಕೇಳುತ್ತಲೇ ಇರಬಹುದು. ನಿಮ್ಮ ತೀರಾ ವೈಯಕ್ತಿಯ ಡೇಟಾಗಳೆಲ್ಲವೂ ಸೈಬರ್​ ಕ್ರಿಮಿನಲ್ಸ್​ ಕೈಗೆ ಹೇಗೆ ಬಂತು? ನಿಮ್ಮ ಜುಟ್ಟು ಅಪರಾಧಿಗಳ ಬಳಿ ಹೇಗೆ ಹೋಯಿತು, ನಾನೋ ಸಾಮಾನ್ಯ ಮನುಷ್ಯ, ನನ್ನ ಎಲ್ಲಾ ಡಿಟೇಲ್ಸ್​ ಹೇಗೆ ಹೋಯ್ತು ಎಂದೆಲ್ಲಾ ಚಿಂತೆ ಮಾಡ್ತಿರುವವರು ಹಲವು ಮಂದಿ. ಆದರೆ ನಿಮಗೆ ಗೊತ್ತೆ? ಇವೆಲ್ಲವೂ ನಾವೇ ಮಾಡಿಕೊಂಡಿರುವ ತಪ್ಪುಗಳು, ನಮ್ಮ ಜುಟ್ಟನ್ನು ಅಪರಾಧಿಗಳ ಕೈಗೆ ಕೊಟ್ಟವರೂ ನಾವೇ ಎನ್ನುವುದು ಗೊತ್ತೆ? 

ಇದರಲ್ಲಿ ಒಂದು ಘಿಬ್ಲಿ. ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು, ಕಿರುತೆರೆ ನಟ-ನಟಿಯರು ಸೇರಿದಂತೆ ಸಾಮಾನ್ಯ ಜನರಿಗೂ ಇದರ ಗೀಳು ಹೆಚ್ಚಾಗುತ್ತಿದೆ. ನಮ್ಮ ಫೋಟೋ ಅನ್ನು ಘಿಬ್ಲಿ ಫೋಟೋ ಮಾಡಿ ಖುಷಿಪಡುವುದು ದಿನನಿತ್ಯವೂ ನಡೆಯುತ್ತಲೇ ಇದೆ. ನಮ್ಮ ಫೋಟೋ ಇರುವುದಕ್ಕಿಂತಲೂ ಅಲ್ಲಿ ಸುಂದರವಾಗಿ, ಕುತೂಹಲವಾಗಿ ಬರುವುದೇ ಇದಕ್ಕೆ ಕಾರಣ. ಕಾರ್ಟೂನ್​ ರೀತಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳಲು ಖುಷಿಯಾಗುತ್ತದೆ ಎನ್ನುವ ಕಾರಣಕ್ಕೆ ಘಿಬ್ಲಿ ಟ್ರೆಂಡ್​ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಇತರೇ ಕೆಲವು ಆ್ಯಪ್​ಗಳು, ತಂತ್ರಜ್ಞಾನಗಳಂತೆಯೇ ಘಿಬ್ಲಿ ಕೂಡ ಮಾರಕವಾಗಿರುವುದಾಗಿ ಸೈಬರ್​ ಕ್ರೈಂ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಘಿಬ್ಲಿ ಸ್ಟೈಲ್​ನಲ್ಲಿ ಫೋಟೋ ತಯಾರಿಸಲು ಫೋಟೋಗಳನ್ನು ಎಐಗೆ ಅಪ್ಲೋಡ್​​ ಮಾಡಿ, ಆ ಫೋಟೋಗಳನ್ನು ಬೇಕಾದಂತೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿರುವ ಟ್ರೆಂಡ್​ ಹೆಚ್ಚಾಗುತ್ತಿದ್ದಂತೆಯೇ ನಿಮ್ಮ ವೈಯಕ್ತಿಕ ಡಾಟಾಗಳನ್ನೆಲ್ಲಾ ಸೈಬಲ್​ ಕ್ರಿಮಿನಲ್ಸ್​ ಬಳಿ ನೀಡುತ್ತಿರುವುದು ತಿಳಿಯುತ್ತಲೇ ಇಲ್ಲ! 

Latest Videos

 ಫೋಟೋ ಬಳಸುವುದಕ್ಕೂ, ವೈಯಕ್ತಿಕ ಡಾಟಾ ಹೋಗುವುದಕ್ಕೂ ಎತ್ತಣತ್ತ ಸಂಬಂಧ ಎಂದು ಹಲವರು ಕೇಳಬಹುದು, ಮತ್ತೆ ಕೆಲವರು ಮಾಡಲು ಕೆಲಸ ಇಲ್ಲದವರು, ಇಂಥ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎನ್ನಲೂಬಹುದು.  ಆದರೆ, ಈ ರೀತಿ ಎಚ್ಚರಿಕೆಯನ್ನು ಯಾರ್ಯಾರೋ ನೀಡುತ್ತಿರುವುದಲ್ಲ. ಬದಲಿಗೆ ಸೈಬರ್​ ತಜ್ಞರೇ ನೀಡುತ್ತಿದ್ದಾರೆ. ಅವರು ಹೇಳುವ ಪ್ರಕಾರ, ನಾವು ತೆಗೆದ ಪ್ರತಿಯೊಂದು ಫೋಟೊದಲ್ಲಿಯೂ  ಮೆಟಾಡೇಟಾ ಎಂಬ ಮಾಹಿತಿ ಇರುತ್ತದೆ. ಈ ಮೆಟಾಡೇಟಾ ಅಥವಾ EXIF ಮಾಹಿತಿಗಳು ನಮ್ಮ ಹಲವಾರು ವೈಯಕ್ತಿಯ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ: ನಾವು   ಯಾವ ಮೊಬೈಲ್​ನಲ್ಲಿ  ಫೋಟೋ ತೆಗೆದಿರುವುದು, ಅದರ ಸ್ಥಳ, ಸಮಯ ಸೇರಿದಮತೆ ಸಂಪೂರ್ಣ ದತ್ತಾಂಶ ಸಂಗ್ರಹವಾಗಿರುತ್ತದೆ.  ಇವಿಷ್ಟು ಗೊತ್ತಾದರೆ ಏನಂತೆ? ಅದರಲ್ಲೇನು ವಿಶೇಷ ಎಂದು ಕೇಳುವವರೂ ಇದ್ದಾರೆ. ಆದರೆ ಈ ಎಲ್ಲಾ ಮಾಹಿತಿಗಳೇ ಸೈಬರ್​ ಕ್ರಿಮಿನಲ್ಸ್​ಗೆ ಅಸ್ತ್ರ.    ನೀವು ಅಪ್​ಲೋಡ್​ ಮಾಡುವ ಫೋಟೋಗಳು ಅಥವಾ ವಿಡಿಯೋಗಳು, ನಿಮ್ಮ ಮುಖದ ವೈಶಿಷ್ಟ್ಯಗಳು, ಸಿಸಿಟಿವಿ ಕ್ಯಾಮೆರಾಗಳ ಮುಖಾಂತರ ನಿಮ್ಮ ಓಡಾಟದ ಮಾಹಿತಿ ಸಂಗ್ರಹವಾಗಿ, ಟ್ರ್ಯಾಕಿಂಗ್​ಗೆ ಅವಕಾಶಗಳನ್ನೂ ಮಾಡಿಕೊಡುತ್ತದೆ! 

ಡ್ರೋನ್​ನಲ್ಲಿ ಬಂದ ಹಾರ ವರನ ಕೊರಳ ಬದ್ಲು ಸಿಕ್ಕಾಕ್ಕೊಂಡಿದ್ದೇ ಬೇರೆ ಕಡೆ! ಮದುಮಗ ಕಕ್ಕಾಬಿಕ್ಕಿ... ವಿಡಿಯೋ ವೈರಲ್​

 
ಇಷ್ಟು ಸಿಕ್ಕರೆ, ನಿಮ್ಮ ಸ್ಥಳ, ವಿವರ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಅವರು ಸುಲಭದಲ್ಲಿ ಪತ್ತೆ ಹಚ್ಚುತ್ತಾರೆ. ನಿಮ್ಮ ಮೊಬೈಲ್​ ನಂಬರ್​ಗಳೂ ಅವರಿಗೆ ಸುಲಭದಲ್ಲಿ ಸಿಗುತ್ತವೆ. ಬಳಿಕ ನಿಮ್ಮ ಡಿಟೇಲ್ಸ್​ ಪತ್ತೆ ಹಚ್ಚುವುದು ಅವರಿಗೆ ಸುಲಭದ ಕೆಲಸವೇನಲ್ಲ. ಇನ್ನೂ ಕುತೂಹಲದ ಸಂಗತಿ ಏನೆಂದರೆ, ಎಐ ಬಳಸಿ ನಿಮ್ಮ ಫೋಟೋವನ್ನು ನೋಡಿ, ಅದರಲ್ಲಿ ನಿಮ್ಮ ಸಮಸ್ಯೆಗಳನ್ನೂ ಅವರು ಪತ್ತೆ ಹಚ್ಚಬಲ್ಲರು. ಚರ್ಮದ ಸಮಸ್ಯೆ, ಅನಾರೋಗ್ಯ ಸಮಸ್ಯೆ ಕೂಡ ಕಂಡುಹಿಡಿದು ಅದಕ್ಕೆ ತಕ್ಕಂತ ಜಾಹೀರಾತುಗಳನ್ನು ನಿಮ್ಮ ಮೊಬೈಲ್​ಗೆ ಬರುವಂತೆ  ಮಾಡಿ ನಿಮ್ಮನ್ನು ಮರಳು ಮಾಡಬಹುದು. ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಕರೆ ಮಾಡಿ, ನಿಮ್ಮನ್ನು ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳಬಹುದು. ಇನ್ನು ನಿಮ್ಮ ಮೊಬೈಲ್​ ಸಂಖ್ಯೆ ಸುಲಭದಲ್ಲಿ ಸಿಗುವ ಕಾರಣ, ಇದೇ ರೀತಿ ಮೋಸ ಹೋದವರಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಎಜುಕೇಟೆಡ್​ ವರ್ಗ ಎಂದು ತಮ್ಮನ್ನು ತಾವು ಬಣ್ಣಿಸಿಕೊಳ್ಳುವವರೇ ಈ ಮೋಸದ ಬಲೆಯಲ್ಲಿ ಸಿಲುಕಿ ಲಕ್ಷ ಲಕ್ಷ ಕಳೆದುಕೊಂಡಿರುವ ಉದಾಹರಣೆಗಳಿಗೆ ಲೆಕ್ಕವೇ ಇಲ್ಲ. ಸೈಬರ್​ ಕ್ರೈಂ ವಿಭಾಗಕ್ಕೆ ಬರುವ ಸಹಸ್ರಾರು ದೂರುಗಳ ಪೈಕಿ ಶೇಕಡಾ 90ಕ್ಕೂ ಅಧಿಕ ಮಂದಿ ಎಜುಕೇಟೆಡ್​ ವರ್ಗವೇ ಇರುವುದಾಗಿ ಇದಾಗಲೇ ಪೊಲೀಸರು ಬಹಿರಂಗಪಡಿಸಿದ್ದಾರೆ. 

ಲವ್​ ಪ್ರಪೋಸ್​ನಿಂದಲೇ ಗಳಿಸ್ತಾಳೆ ತಿಂಗಳಿಗೆ 27 ಲಕ್ಷ ರೂ! ಊಟ, ನಿದ್ದೆ ಮಾಡದ ಚೆಲುವೆ ಸ್ಟೋರಿ ಕೇಳಿ...

ಕರೆ ಮಾಡಿ ಮೋಸ ಮಾಡುವಷ್ಟು ಮೂರ್ಖ ನಾನಲ್ಲ ಎಂದುಕೊಳ್ಳುವವರೂ ನಿಮ್ಮ ಇಡೀ ಜುಟ್ಟನ್ನು ಈ ರೀತಿಯ ತಂತ್ರಜ್ಞಾನದಿಂದ ಕ್ರಿಮಿನಲ್ಸ್​ ಕೈಗೆ ಕೊಟ್ಟು ಪೆಚ್ಚಾಗಬಹುದು ಎನ್ನುವುದು ನೆನಪಿರಲಿ ಎನ್ನುವುದು ತಜ್ಞರ ಎಚ್ಚರಿಕೆ. ಯಾವುದೇ ಹೊಸ ಹೊಸ ತಂತ್ರಜ್ಞಾನಗಳು ಬಂದಾಗ ಅದನ್ನು ಬಳಸುವ ಮುನ್ನ ಎಚ್ಚರಿಕೆ ಇರಲಿ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲದೇ ಯಾವುದೋ ಒಂದು ಆ್ಯಪ್​ ಡೌನ್​ಲೋಡ್​ ಮಾಡುವಾಗ ಓಕೆ ಓಕೆ ಕೊಡುತ್ತಾ ಹೋಗುತ್ತೀರಿ. ಅಲ್ಲಿ ಏನಿದೆ ಎಂದು ಸರಿಯಾಗಿ ಓದಿದರೆ ಬಹುಶಃ ಓಕೆ ಕೊಡುವುದಿಲ್ಲ. ಆದರೆ ಅದ್ಯಾವುವೂ ಆ ಕ್ಷಣಕ್ಕೆ ನಮಗೆ ಬೇಕಿರುವುದಿಲ್ಲವಲ್ಲ!  

click me!