
ನವದೆಹಲಿ[ಜ.16]: ಪ್ರಧಾನಿ ನರೇಂದ್ರ ಮೋದಿಯವರ ವೆಬ್‌ಸೈಟ್ www.narendramodi.in ಸುರಕ್ಷಿತವ್ಲಲವಂತೆ. ಹೀಗಂತ ಯಾರೋ ಹೇಳಿದ್ದಲ್ಲ, ಫ್ರಾನ್ಸ್ ನ ಸೆಕ್ಯುರಿಟಿ ರಿಸರ್ಚರ್ ಹಾಗೂ ಎಥಿಕಲ್ ಹ್ಯಾಕರ್ ಇಲಿಯಟ್ ಆ್ಯಂಡರ್ಸನ್ ಎಂಬರು ಮಾಹಿತಿ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿರುವ ಇಲಿಯಟ್ 'ಹಾಯ್ @narendramodi, ನಿಮ್ಮ ವೆಬ್‌ಸೈಟಿನಲ್ಲಿ ಭದ್ರತೆಯ ಕೊರತೆಯೊಂದು ಕಂಡು ಬಂದಿದೆ. ಅಪರಿಚಿತ ಮೂಲದಿಂದ ನನ್ನ ಹೆಸರಿನಲ್ಲಿ ನಿಮ್ಮ ವೆಬ್ ಸೈಟಿಗೆ ಫೈಲ್ ಒಂದನ್ನು ಅಪ್ಲೋಡ್ ಮಾಡಲಾಗಿದೆ. ಅವರ ಬಳಿ ನಿಮ್ಮ ಡೇಟಾಬೇಸ್ ನ ಸಂಪೂರ್ಣ ಮಾಹಿತಿ ಇದೆ. ನೀವು ಸಾಧ್ಯವಾದಷ್ಟು ಬೇಗ ನನ್ನನ್ನು ಸಂಪರ್ಕಿಸಿ ನಿಮ್ಮ ವೆಬ್ ಸೈಟ್ ನ್ನು ಸುರಕ್ಷಿತಗೊಳಿಸಬೇಕು' ಎಂದಿದ್ದಾರೆ.
ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಇಲಿಯಟ್ http://narendramodi.in ತಂಡವು ನನ್ನನ್ನು ಸಂಪರ್ಕಿಸಿದೆ. ಹಾಗೂ ವೆಬ್ ಸೈಟಿನಲ್ಲಿ ಕಂಡು ಬಂದ ಭದ್ರತಾ ಲೋಪವನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಇಲಿಯಟ್ ಆ್ಯಂಡರ್ಸನ್ ಭಾರತೀಯರ ಆಧಾರ್ ಸಂಖ್ಯೆಯ ಗೌಪ್ಯತೆ ಹಾಗೂ ಅದರ ಡೇಟಾಬೇಸ್ ಸುರಕ್ಷಿತವಾಗಿಲ್ಲ ಎಂದು ತಿಳಿಸಿದ್ದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.